ತುಂಗಭದ್ರ ನದಿದಂಡೆಯಲ್ಲಿ ಸಂಕ್ರಾAತಿ ವೈಭವ; ಮನಸೂರೆಗೊಂಡ ಜಾನಪದ ಸಂಭ್ರಮ, ಔತಣಕೂಟ.

ಸಂಜೆವಾಣಿವಾರ್ತೆ 

ಹರಪನಹಳ್ಳಿ.ಜ.16; ತಾಲೂಕಿನ ಹಲುವಾಗಲು ಗ್ರಾಮದ ತುಂಗಭದ್ರ ನದಿಯ ರಾಗಿಹೊಳೆ ಸಮೀಪದಲ್ಲಿ ಸೋಮವಾರ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನರವರು ಮಕರ ಸಂಕ್ರಾAತಿ ಹಿನ್ನೆಲೆಯಲ್ಲಿ ಕರ್ನಾಟಕ ಜಾನಪದ ಸಂಭ್ರಮ ಹಾಗೂ ಮಹಾಔತಣಕೂಟವನ್ನು ಏರ್ಪಡಿಸಿದ್ದರು.ಗಂಗೆ ಪೂಜೆಯನ್ನು ನೇರವೇರಿಸಿ, ನೇರೆದಿದ್ದ ಸಾರ್ವಜನಿಕರಿಗೆ ಎಳ್ಳು, ಬೆಲ್ಲದ ಸಿಹಿಯನ್ನು ಹಂಚಿ ಜಾನಪದ ಸಂಭ್ರಮಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನರವರು ನಮ್ಮ ಪೂರ್ವಿಕರು ಹಬ್ಬ ಹರಿದಿನಗಳನ್ನು ವೈಜ್ಞಾನಿಕ ನೆಲೆಗಟ್ಟನಲ್ಲಿ ಸಂಪ್ರದಾಯಗಳನ್ನು ರೂಡಿ ಮಾಡಿದ್ದಾರೆ ಅವುಗಳನ್ನು ಮುಂದಿನ ಪೀಳಿಗೆಯು ಆಚರಣೆ ಮಾಡುವ ಸಂಸ್ಕೃತಿಯನ್ನು ನಾವು ಮಕ್ಕಳಲ್ಲಿ ಬೆಳಸಬೇಕಿದೆ ಎಂದರು. ಪ್ರತಿ ಹಬ್ಬಗಳಲ್ಲಿ ವಿಶಿಷ್ಠ ರೀತಿಯ ಭಕ್ಷಗಳನ್ನು ತಯಾರಿಸಿ ನೈವೈದ್ಯ ಮಾಡುವ ಪರಿಪಾಠ ನಮ್ಮಲ್ಲಿ ಚಾಲ್ತಿಯಲ್ಲಿದೆ. ಪ್ರಮುಖವಾಗಿ ಸಂಕ್ರಾತಿ ಹಬ್ಬ ಚಳಿಗಾಲ ಮುಗಿಸಿ ಬೇಸಿಗೆ ಕಾಲಕ್ಕೆ ಪಾರ್ದಾಪಣೆ ಮಾಡುವ ಕಾಲ. ಈ ಹಬ್ಬದಲ್ಲಿ ಎಳ್ಳು ಬೆಲ್ಲ ಹಂಚಿ ಆಚರಣೆ ಮಾಡುವುದರಲ್ಲಿ ವೈಜ್ಞಾನಿಕ ಮಹತ್ವವಿದೆ. ಹಿರಿಯ ಸಂಪ್ರದಾಯಗಳನ್ನು ಉಳಿಸಿ ಬೆಳಸಲು ಇಂತಹ ಹಬ್ಬ ಹರಿದಿನಗಳನ್ನು ಸಾಮೂಹಿಕವಾಗಿ ಆಚರಣೆ ಮಾಡೋಣ. ಎಂದರು. ಟಿ.ವಿ.ಮೊಬೈಲ್ಗಳ ದಾಸ್ಯದಿಂದ ಹೊರಗೆ ಬರಬೇಕಾಗಿದೆ. ವೈಯಕ್ತಿಕ ದ್ವೇಷ, ನಿಂದನೆಯಿAದ ಮನಸ್ಸುಗಳನ್ನು ಗೆಲ್ಲಲು ಸಾಧ್ಯವಿಲ್ಲ. ಪ್ರೀತಿ ವಾತ್ಸಲ್ಯಗಳಿಂದ ಎಲ್ಲರನ್ನು ಜಯಿಸಬೇಕಾಗಿದೆ ಎಂದರು. ಸಂಕ್ರಾತಿ ಹಬ್ಬದಾಚರಣೆಗೆ ಆಗಮಿಸಿದ ಎಲ್ಲಾರಿಗೂ ಎಳ್ಳು ಬೆಲ್ಲ ನೀಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ಗದಗ ಜಿಲ್ಲೆಯ ರೋಣ ತಾಲೂಕಿನ ಕೋತಬಾಳ ಗ್ರಾಮದ ಅರುಣೋದಯ ಕಲಾ ತಂಡದ ಶಂಕರಣ್ಣ ಸಂಕಣ್ಣನವರ್ ರವರ ನೇತೃತ್ವದಲ್ಲಿ 14 ಜನರು ಜಾನಪದ ಹಾಡು,ಜನಪದ ನೃತ್ಯ,ಸುಗ್ಗಿ ನೃತ್ಯ,ದೀಪದ ನೃತ್ಯ,ಕಾಡು ನೃತ್ಯ ನೆರೆದ ಪ್ರೇಕ್ಷಕರಿಗೆ ಮನಸೂರೆಗೊಳಿಸಿದವು.