ತುಂಗಭದ್ರ ಜಲಾಶಯದ ಹೂಳೆತ್ತಲು ಕ್ರಮಕ್ಕೆ ಮನವಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.4: ಬಳ್ಳಾರಿ, ಹೊಸಪೇಟೆ, ಕೊಪ್ಪಳ, ರಾಯಚೂರು ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರ ಜಲಾಶಯದಲ್ಲಿ ಶೇಖರಣೆಯಾಗಿರುವ ಹೂಳೆತ್ತಲು ಸೂಕ್ತ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ತುಂಗಭದ್ರ ರೈತ ಸಂಘ ಮನವಿ ಮಾಡಿದೆ.
ನಗರಕ್ಕೆ ಆಗಮಿಸಿರುವ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂಘದ ಮುಖಂಡರು ಸಲ್ಲಿಸಿದ ಮನವಿ ಪತ್ರದಲ್ಲಿ ತುಂಗಭದ್ರ ಜಲಾಶಯದಲ್ಲಿ 33 ಟಿ.ಎಂ.ಸಿ ಹೂಳೆತ್ತಲು ಕ್ರಮ ಕ್ರಮಕೈಗೊಳ್ಳಬೇಕು, ರೈತರಿಂದ ವಶಪಡಿಸಿಕೊಂಡಿರುವ ಭೂಮಿಯಲ್ಲಿ ಕಬ್ಬಿಣ ಕಾರ್ಖಾನೆ ನಿರ್ಮಿಸಲು ಮುಂದಾಗಬೇಕು, ದರೂರು ಶ್ರೀ ವೀರಭದ್ರಸ್ವಾಮಿ ಪುಣ್ಯ ಕ್ಷೇತ್ರಕ್ಕೆ 5 ಕೋಟಿ ರೂ.ಗಳು ನೆರವು ನೀಡಬೇಕು, ಹಾಗೂ ಅತೀ ವೃಷ್ಠಿಗೆ ಒಳಗಾಗಿರುವ ಮೆಣಸಿನಕಾಯಿ ಬೆಳೆಗಳಿಗೆ ಪರಿಹಾರ ನೀಡಲು ಒತ್ತಾಯಿಸಲಾಗಿದೆ.
ಅಲ್ಲದೇ ನಗರದ ಅನಂತಪುರ ರಸ್ತೆಯಿಂದ ಹೊಸಪೇಟೆ ರಸ್ತೆಯವರೆಗೂ ರಿಂಗ್ ರೋಡ್ ನಿರ್ಮಿಸುವಂತೆಯೂ ಮನವಿ ಮಾಡಿದ್ದಾರೆ.
ಮನವಿ ಪತ್ರ ಸಲ್ಲಿಸಿದ ಸಂದರ್ಭದಲ್ಲಿ ತುಂಗಭದ್ರ ರೈತ ಸಂಘದ ಅಧ್ಯಕ್ಷ ಜಿ ಜಿ.ಪುರುಷೋತ್ತಮಗೌಡ, ಶ್ರೀಧರಗಡ್ಡೆ ವೀರನಗೌಡ, ದರೂರು ಟಿ.ರಂಜಾನ್ ಸಾಬ್, ಮುಷ್ಟಗಟ್ಟಿ ಭೀಮನಗೌಡ ಇದ್ದರು.