ತುಂಗಭದ್ರ ಕಾಲೇಜುವಿದ್ಯಾರ್ಥಿ ಸಂಘದ ಉದ್ಘಾಟನೆ

ಸಂಜೆ ವಾಣಿ ವಾರ್ತೆ
ಕೊಟ್ಟೂರು ಸೆ 4: ತುಂಗಭದ್ರ ಶಿಕ್ಷಣ ಸಂಸ್ಥೆ ಕೊಟ್ಟೂರು ಇದರ ಅಡಿಯಲ್ಲಿ ನಡೆಯುತ್ತಿರುವ ತುಂಗಭದ್ರ ಶಿಕ್ಷಣ ಮಹಾವಿದ್ಯಾಲಯದಲ್ಲಿ 2020-.21 ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿ ಗಳಿಗೆ ಸ್ವಾಗತ ಸಮಾರಂಭ ಮತ್ತು ವಿದ್ಯಾರ್ಥಿ ಸಂಘದ ಉದ್ಘಾಟನೆ ಯನ್ನು ನೆರವೇರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಂಗಭದ್ರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ. ಶಿವಣ್ಣ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಪಿ.ಎಂ.ವಾಗೀಷಯ್ಯ ನವರು ಭಾಗವಹಿಸಿದ್ದರು. ಕಾಲೇಜಿನ ಪ್ರಾಚಾರ್ಯರಾದ ಶ್ರೀ ಎಸ್.ಎಂ.ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಅರವಿಂದ್ ಬಸಾಪುರ್. ಶ್ಯಾಮರಾಜ್. ವೆಂಕಟೇಶ್. ಮಂಜುನಾಥ್. ಪ್ರವೀಣ್ ಕುಮಾರ್. ಲತಾ. ಪೂರ್ಣಿಮಾ ಸಾವಿತ್ರಿ . ಮೃತ್ಯುಂಜಯ ಗೌಡ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅನಿತಾ ಸ್ವಾಗತಿಸಿದರು. ಮಮ್ತಾಜ್ ಮತ್ತು ಅನಿತಾ ನಿರೂಪಿಸಿದರು. ಗುರುಬಸವರಾಜ್ ವಂದಿಸಿದರು.