ತುಂಗಭದ್ರೆಯ ಜಲಾನಯನ ಪ್ರದೇಶದಲ್ಲಿ ಸ್ವಚ್ಛತಾ ಯುವ ಬ್ರಿಗೇಡ್ ನಿಂದ  ಕಾರ್ಯ


ಸಂಜೆವಾಣಿ ವಾರ್ತೆ
ಹೊಸಪೇಟೆ: ಹೊಸಪೇಟೆ ಯುವ ಬ್ರಿಗೇಡ್ ನಿಂದ ತುಂಗಭದ್ರಾ ಹಿನ್ನೀರಿನ ಖಾಲಿಯಾಗಿರುವ ಜಲಾನಯನ ಪ್ರದೇಶದಲ್ಲಿ ಸ್ವಚ್ಛತಾ  ಕಾರ್ಯ ನಡೆಸಿತು.
ತುಂಗಭದ್ರಾ ಅಣೆಕಟ್ಟಿನ ಹಿನ್ನೀರಿನ  ಪ್ರದೇಶದಲ್ಲಿ ಸಾರ್ವಜನಿಕರು ಮಧ್ಯದ  ಬಾಟಲಿಗಳು, ಕಸ, ತ್ಯಾಜ್ಯ ವಸ್ತುಗಳನ್ನು ಎಸೆದಿರುವುದನ್ನು ಕಂಡ ಯುವ ಬ್ರಿಗೇಡ್ ತಂಡ ಭಾನುವಾರ ಸ್ಬಚ್ಛತೆ ಹಾಗೂ ಅರಿವು ಮೂಡಿಸುವ ಮೂಲಕ ತಮ್ಮ ಪರಿಸರ ಪ್ರೇಮಕ್ಕೆ ಸಾಕ್ಷಿಯಾದರು.
ಇನ್ನೇನು ಮಳೆಗಾಲ ಆರಂಭವಾಗಲಿದ್ದು
ಕೆಲವೇ ದಿನಗಳಲ್ಲಿ ನಮ್ಮ ಕರ್ನಾಟಕದ ಜೀವನದಿಯಾಗಿರುವ ತುಂಗಭದ್ರಾ ಮೈದುಂಬಿ ಹರಿಯಲಿದ್ದಾಳೆ ಅದಕ್ಕಿಂತ ಮುಂಚೆ ಯುವ ಮಿತ್ರರೆಲ್ಲ ಸೇರಿ ದಡದಲ್ಲಿರುವ ತ್ಯಾಜ್ಯವನ್ನು ಸ್ವಚ್ಛ ಗೋಳಿಸಿ ಕಸ ಹಾಕದಂತೆ ಅರಿವು ಮೂಡಿಸುವ ಕಾರ್ಯ ಕ್ಕೂ ಮುಂದಾದರು ಮತ್ತ ಸದ್ಯ ಸಂಗ್ರಹವಾದ ಕಸವನ್ನು ಸಂಗ್ರಹಿಸಿದ್ದಾರೆ .