ತುಂಗಭದ್ರೆಯಿಂದ ಮುಂದುವರೆದ ಪ್ರವಾಹ.
1.5 ಲಕ್ಷ ಕ್ಯೂಸೆಕ್ಸ್ ತಲುಪಿದ ಹೊರಹರಿವು.


ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ, ಜು.15: ಜೀವನಾಡಿ ತುಂಗಭದ್ರೆಗೆ ಒಳಹರಿವು ವೃದ್ದಿಯಾಗಿರುವುದು ಮುಂದುವರೆದ ಹಿನ್ನೆಲೆಯಲ್ಲಿ ಪ್ರವಾಹವೂ ಮುಂದುವರೆದಿದೆ.
ಜಲಾನಯನ ಪ್ರದೇಶ ಸೇರಿದಂತೆ  ಜಿಲ್ಲೆಯ ತುಂಗಭದ್ರೆಗೆ ಅತಿ ಹೆಚ್ಚಿನ ನೀರು ಹರಿದು ಬರುತ್ತಿದ್ದು ನದಿಗೆ ಅಪಾರ ಪ್ರಮಾಣದ ಹರಿವಿನ ಕಾರಣ ಅಪಾರ ಪ್ರಮಾಣದ ನೀರು  ಕ್ರೆಸ್ಟ್ ಗೇಟ್ ಗಳ ಮೂಲಕ ಹಾಗೂ ಕಾಲುವೆಗಳಿಗೆ  ಬಿಡಲಾಗುತ್ತಿದೆ.
ಇಂದು ದಾಖಲಾದ ಮಾಹಿತಿಯಂತೆ 1.11 ಲಕ್ಷ ಕ್ಯೂಸೆಕ್ಸೆ ನೀರು ಸದ್ಯ ಹರಿದು ಬರುತ್ತಿದ್ದು  ಒತ್ತಡ ತಡೆಯುವ ದೃಷ್ಟಿಯಿಂದ ಹೆಚ್ಚು ಸಾಮರ್ಥ್ಯದ ಅಂದರೆ  1.52 ಲಕ್ಷ ಕ್ಯೂಸೆಕ್ಸೆ ನೀರು ಹೊರ ಬಿಡಲಾಗುತ್ತಿದೆ.    
 ತುಂಗಭದ್ರೆಯ ಹೊರನೋಟ
ತುಂಗಭದ್ರೆಯ ಹೊರನೋಟ ದಿನ ದಿಂದ ದಿನಕ್ಕೆ ರಮಣೀಯವಾಗಿ ಕಾಣುತ್ತಿದ್ದು. ಇದೀಗ 33 ಕ್ರಸ್ಟ್ ಗೇಟ್ಸ್‌ ಗಳ ಮೂಲಕ 1.48 ಲಕ್ಷ ಹಾಗೂ ಕಾಲುವೆಗಳ ಮೂಲಕವೂ 4ಸಾವಿರದ 1 ನೂರು ಕ್ಯೂಸೆಕ್ಸ್ ಒಟ್ಟು 1.52 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ.
ಮತ್ತೊಂದಡೆ ಅಪಾರ ಪ್ರಮಾಣದ ನೀರು ಹರಿಬಿಟ್ಟಿರುವುದರಿಂದ ಐತಿಹಾಸ ಹಂಪಿ ನದಿಯು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು ಅಗತ್ಯ ಮುನ್ನೆಚ್ಚರಿಕೆ ಜಿಲ್ಲಾಡಳಿತ ನೀಡಿದ್ದು, ಪೊಲೀಸರು, ಗೃಹ ರಕ್ಷಕರು ಸರ್ಪಗಾವಲು ಸಹ ಮುಂದುವರೆದಿದೆ.
  ನೀರಿನ ಮಟ್ಟ.
ಜಲಾಶಯದ ಗರಿಷ್ಠ ಮಟ್ಟ 1633.64 ಅಡಿ, ಇಂದು 1630.33 ಅಡಿ, ನೀರು ಸಂಗ್ರಹಣಾ ಸಾಮರ್ಥ್ಯ 105.788 ಟಿಎಂಸಿ, ಇಂದಿನ ಸಾಮರ್ಥ್ಯ

Attachments area