ತುಂಗಭದ್ರೆಯಲ್ಲಿ ಇಂದು 84 ಸಾವಿರ ಕ್ಯೂಸೆಕ್ ಒಳಹರಿವು


ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಜು28: ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಸ್ವಲ್ಪ ಪ್ರಮಾಣದ ಇಳಿಕೆ ಕಂಡಿದ್ದು ಇಂದು ಸಹ  10 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗುವ ಮೂಲಕ ಜಲಾನಯನ ಪ್ರದೇಶ ಹಾಗೂ ಮಲೆನಾಡಿನಲ್ಲಿ ನಿರಂತರವಾಗಿ ಆಗುತ್ತಿರುವ ವರ್ಷಧಾರೆಯ ಹಿನ್ನೆಲೆಯಲ್ಲಿ ಜಲಾಶಯ ಭರ್ತಿಯಾಗುವ ಸನ್ನಿಹಿತವಾಗುತ್ತಿದೆ.  
ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯ ಪರಿಣಾಮ, ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆ ಇನ್ನು ಮುಂದುವರೆದಿದ್ದು ಗುರುವಾರ 1ಲಕ್ಷ 21 ಸಾವಿರಕ್ಕೂ ತಲುಪಿ ಇಂದು ಇಳಿಮುಖವಾಗುತ್ತಿದೆ. ಇಂದು ಜಲಾಶಯದಲ್ಲಿ 59.001 ಟಿಎಂಸಿ ನೀರು ಸಂಗ್ರಹವಾದಂತಾಗಿದೆ. 
ತುಂಗಭದ್ರಾ ಜಲಾಶಯದ ಗರಿಷ್ಟ ಮಟ್ಟ: 1633 ಅಡಿಗಳು, ಇಂದಿನ ಮಟ್ಟ 1619.16 ಅಡಿಗಳು, ಸಂಗ್ರಹ ಸಾಮಥ್ರ್ಯ 59.001 ಟಿಎಂಸಿ, ಒಳಹರಿವು 84.506 ಕ್ಯೂಸೆಕ್ ಇದೆ. ಹೊರ ಹರಿವು 59  ಕ್ಯೂಸೆಕ್ ಇದೆ.