
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಬರಿದಾಗಿದ್ದ ತುಂಗಭದ್ರ ಜಲಾಶಯದ ಒಡಲು ನಿಧಾನವಾಗಿ ತುಂಬ ತೊಡಗಿದೆ. ಕಳೆದ ಕೆಲ ದಿನಗಳಿಂದ ಜಲಾಶಯದ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಡ್ಯಾಂಗೆ ಇಂದು ಬೆಳಿಗ್ಗೆ 41ವರೆ ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು.

ಕೇವಲ 3 ಟಿಎಂಸಿ ನೀರಿದ್ಧ ಜಲಾಶಯದಲ್ಲಿ ಈಗ 17 ಟಿಎಂಸಿ ನೀರು ಸಂಗ್ರಹವಾಗಿದೆ. ಇಂದು ಹರಿದು ಬರುತ್ತಿರುವ ನೀರಿನಿಂದ ನಾಳೆಗೆ 20 ಟಿಎಂಸಿಗೆ ತಲುಪಲಿದೆ.
ತುಂಗಾ ಜಲಾಶಯದಿಂದ 19 ವರೆ ಸಾವಿರ ನೀರು ಬಿಡಲಾಗಿದೆ. ಇದರ ಜೊತೆಗೆ ಇನ್ನಿತರ ಭಾಗದಿಂದ ನದಗೆ ಹರಿದು ಬರುತ್ತಿರುವ ನೀರಿನಿಂದ ತುಂಗಭದ್ರಗೆ ಜೀವಕಳೆ ಬರ ತೊಡಗಿದೆ.
ಜಲಾಶಯದ ಗರಿಷ್ಟ ಮಟ್ಟ 1633 ಅಡಿ ಇದ್ದು. ಇಂದಿನ ಮಟ್ಡ 1596 ಅಡಿ ಇದೆ.
ಕೆಳಮಟ್ಟದ ಕಾಲುವೆಗಳಿಗೆ ನೀರು ಬಿಡಬಹುದು ಆದರೆ ಮೇಲ್ಮಟ್ಟದ ಕಾಲುವೆಗೆ ನೀರು ಬಿಡಬೇಕೆಂದರೆ 1600 ಅಡಿವರೆಗೆ ನೀರು ಬರಬೇಕಿದೆ. ಇನ್ನೆರೆಡು ಮೂರು ದಿನಗಳಲ್ಲಿ ಜಲಾಶಯದ ಮಟ್ಟ ಈ ಲೆವೆಲ್ ಗೆ ತಲುಪುವ ಸಾಧ್ಯತೆ ಇದೆ.
ಜಲಾಶಯದಿಂದ ರಾಜ್ಯದ ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಲಕ್ಷಾಂತರ ಎಕರೆಗೆ ನೀರು ಉಣಿಸಲಿದೆ.
ಈಗಾಗಲೇ ನದಿ ಭಾಗದಲ್ಲಿನ ಕಂಪ್ಲಿ, ರಾಮಸಾಗರ, ಸೂಗೂರು, ಇಟಗಿ, ಎರಕಲ್ಲು, ಸಿರುಗುಪ್ಪ ಭಾಗದ ರೈತರು ಭತ್ತದ ನಾಟಿ ಕಾರ್ಯ ಆರಂಭಿಸಿದ್ದಾರೆ. ಸಸಿ ಮಡಿಗಳನ್ನು ಸಿದ್ದಪಡಿಸಿಕೊಂಡಿದ್ದಾರೆ.
ಮತ್ತೊಂದು ಕಡೆ ಭತ್ತ, ಹಸಿಮೆಣಸಿನಕಾಯಿ ಸಸಿ ನಾಟಿಗೆ ಜಮೀನು ಸಿದ್ದಪಡಿಸಿಕೊಂಡಿದ್ದು. ಕಾಲುವೆಗಳಿಗೆ ನೀರು ಬಿಡುವುದನ್ನೇ ಕಾಯುತ್ತಿದ್ದಾರೆ ರೈತರು.
:
ಐಸಿಸಿ ಸಭೆ ಕರೆಯಬೇಕು:
ಕೃಷಿ ಚಟುವಟಿಕೆಗಳಿಗೆ ನೀರು
ಈಗಾಗಲೇ ತಡವಾಗಿದೆ. ಆದರೂ ಬೀಳುತ್ತಿರುವ ಮಳೆ ಮತ್ತು ಬರುತ್ತಿರುವ ನೀರಿನ ಪ್ರಮಾಣ ಅಂದಾಜಿಸಿ ತುಂಗಭದ್ರ ನೀರಾವರಿ ಸಲಹಾ ಸಮಿತಿ(ಐಸಿಸಿ) ಸಭೆಯನ್ನು ಕೆಲ ದಿನಗಳಲ್ಲಿ ಕರೆದು. ಕೃಷಿ ಚಟುವಟಿಕೆಗಳಿಗಾಗಿ ಕಾಲುವೆಗೆ ನೀರು ಬಿಡುವ ಕುರಿತು ನಿರ್ಣಯ ತೆಗೆದುಕೊಳ್ಳಬೇಕಿದೆ.
ದರೂರು ಪುರುಷೋತ್ತಮಗೌಡ
ಅಧ್ಯಕ್ಷರು, ತುಂಗಭದ್ರ ರೈತ ಸಂಘ, ಬಳ್ಳಾರಿ.