ತುಂಗಭದ್ರೆಗೆ ಆರಂಭಗೊಂಡ ಒಳಹರಿವುನಿನ್ನೆ ದಿನ ಜಲಾಶಯಕ್ಕೆ  0.8 ಟಿಎಂಸಿ ನೀರು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,10-  ತುಂಗಭದ್ರ ಜಲಾಶಯಕ್ಕೆ ಒಳ ನೀರಿನ ಹರಿವು ಈ ಹಂಗಾಮಿನಲ್ಲಿ ಆರಂಭಗೊಂಡಿದ್ದು ನಿನ್ನೆ  ದಿನ ಜಲಾಶಯಕ್ಕೆ 0.8 ಟಿಎಂಸಿ ಅಡಿ ನೀರು ಹರಿದು ಬಂದಿದ್ದು. ಇಂದು ಜಲಾಶಯಕ್ಕೆ 17 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಜಲಾಶಯದ ಮಟ್ಟ 1633 ಅಡಿ ಇದ್ದು. ಇಂದಿನ‌ ಮಟ್ಟ 1578.79 ಅಡಿ ಇದೆ. ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 105.788 ಟಿಎಂಸಿ‌ ಇದ್ದು. ಸಧ್ಯ 3.911 ಟಿಎಂಸಿ ನೀರು ಸಂಗ್ರಹವಿದ್ದು. ಹೊರ ಹರಿವು  255 ಕ್ಯೂಸೆಕ್ ಇದೆ.
ಕಳೆದ ವರ್ಷ ಈ ಅವಧಿಗೆ ಜಲಾಶಯದಿಂದ  ಕಾಲುವೆಗಳಿಗೆ ನೀರು ಹರಿಬಿಟ್ಟಿದ್ದರಿಂದ ಕೃಷಿ ಚಟುವಟಿಕೆಗಳು ಆರಂಬಗೊಂಡಿದ್ದವು.
ಆಗ ಜಲಾಶಯದಲ್ಲಿ 80.5 ಟಿಎಂಸಿ ನೀರು ಸಂಗ್ರಹವಾಗಿ, 88 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು.