ತುಂಗಭದ್ರಾ ಮಂಡಳಿ ಸ್ಪಷ್ಟನೆ
ತುಂಗಭದ್ರಾ ಕ್ರಸ್ಟ್‍ಗೇಟ್ ತಾಂತ್ರಿಕ ತೊಂದರೆ ಆತಂಕ ಬೇಡ


ಸಂಜೆವಾಣಿ ವಾರ್ತೆ
ಹೊಸಪೇಟೆ ಜು18: ತುಂಗಭದ್ರಾ ಜಲಾಶಯದ 21ನೇ ಕ್ರಸ್ಟ್‍ಗೇಟ್ ತಾಂತ್ರಿಕ ತೊಂದರೆ ಯಾವುದೆ ಆತಂಕಕ್ಕೆ ಕಾರಣವಿಲ್ಲ ಎಂದು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಜಿ. ನಾಗಮೊಹನ್ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಅವರು, ಗೇಟ್ ನಂ 21 ಜುಲೈ 12 ರಂದು ತಾಂತ್ರಿಕ ತೊಂದರೆಯಿಂದ ಭಾಗಶಃ ಹಾನಿಯಾಗಿದ್ದು ತಾಂತ್ರಿಕ ತೊಂದರೆ ಸರಿಪಡಿಸುವ ಕಾರ್ಯ ಆರಂಭವಾಗಿದೆ ಇನ್ನು 10 ದಿನಗಳಲ್ಲಿ ಸರಿಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
33 ಕ್ರಸ್ಟ್‍ಗೇಟ್‍ಗಳನ್ನು ಹೊಂದಿರುವ ತುಂಗಭದ್ರಾ ಜಲಾಶಯ 33 ಗೇಟ್‍ಗಳಲ್ಲಿ 6.5 ಲಕ್ಷ ಕ್ಯೂಸೆಕ್ ನೀರನ್ನು ಹರಿಬಿಡುವ ಸಾಮಥ್ರ್ಯ ಹೊಂದಿದೆ. ಒಂದು ಗೇಟ್ ತಾಂತ್ರಿಕ ತೊಂದರೆ ಕೇವಲ 20 ಸಾವಿರ ಕ್ಯೂಸೆಕ್ ಕಡಿಮೆ ಹರಿಯಲು ಸಾದ್ಯವಾಗಲಿದ್ದು 6.30 ಲಕ್ಷ ಕ್ಯೂಸೆಕ್ ನೀರು ಹರಿಬಿಡಬಹುದಾಗಿದೆ. ಜಲಾಶಯದಲ್ಲಿ ಈವರೆಗೂ ದಾಖಲಾದ ಗರಿಷ್ಠ ನೀರು ಹೊರಬಿಟ್ಟಿದ್ದು 1992/93 3.69 ಲಕ್ಷ ಕ್ಯೂಸೆಕ್ ದಾಖಲಾಗಿದ್ದು ಸದ್ಯ ಕೇವಲ 1.88ಲಕ್ಷ ಕ್ಯೂಸೆಕ್ ಮಾತ್ರ ಹೊರಬಿಡಲಾಗಿದ್ದು ಒಂದು ಗೇಟ್ ತಾಂತ್ರಿಕ ತೊಂದರೆ ಯಾವುದೆ ಆತಂಕಕ್ಕೆ ಕಾರಣವಿಲ್ಲಾ ಆದಾಗ್ಯೂ ತುಂಗಭದ್ರಾ ಮಂಡಳಿ ತಕ್ಷಣವೇ ಕಾರ್ಯವೃತವಾಗಿ ಕಾರ್ಯನಿರ್ವಹಿಸುತ್ತಿದ್ದು ಆದಷ್ಟು ಬೇಗ ಸರಿಯಾಗಲಿದೆ ಆತಂಕ ಪಡಬೇಕಾಗಿಲ್ಲಾ ಎಂದು ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

Attachments area