ತುಂಗಭದ್ರಾ ಮಂಡಳಿಯ ಗುತ್ತಿಗೆ ನೌಕರರಿಂದ ಮತದಾನ ಬಹಿಷ್ಕಾರಕ್ಕೆ ನಿರ್ಧಾರ.


ಸಂಜೆವಾಣಿ ವಾರ್ತೆ
ಹೊಸಪೇಟೆ, ಏ.26: ಕಳೆದ 15 ವರ್ಷಗಳಿಂದ ವಿವಿದ ಹಂತದ ದಿನಗೂಲಿಗಳಾಗಿ  ಕಾರ್ಯನಿರ್ವಹಿಸುತ್ತಿರುವ ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಮತದಾನವನ್ನು ಬಹಿಷ್ಕಾರಿಸುವುದಾಗಿ ಸಂಘದ ಗೌರವಾಧ್ಯಕ್ಷ ಪಂಪಾಪತಿ ರಾಟಿ ತಿಳಿಸಿದರು.
ಈ ಕುರಿತು ಬುಧವಾರ ಹೊಸಪೇಟೆಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರ 600ಕ್ಕೂ ಹೆಚ್ಚು ನೌಕರರು ಯಾವುದೇ ಕಾನೂನು ಪ್ರಕಾರ ದೊರೆಯಬೇಕಾಗಿರುವ ಸೌಲಭ್ಯ ದೊರೆಯದೆ ಪರದಾಡುವಂತಾಗಿದೆ, ಭವಿಷ್ಯ ನಿಧಿ ಕಾಯ್ದೆ ಉಲ್ಲಂಘಿಸಿದ್ದು ಕ್ರಮ ಕೈಗೊಳ್ಳಬೇಕು ಕುಟುಂಬಕ್ಕೆ ಆಧಾರವಾದ ಇಎಸ್ಐ ಸೌಲಭ್ಯ ಕಾರ್ಮಿಕರ ಕುಟುಂಬಗಳಿಗೆ ದೊರೆಯುತಾಗಬೇಕು, ವೈಯಕ್ತಿಕ ನಿಂದನೆ, ಜಾತಿ ನಿಂದನೆ ಸೇರಿದಂತೆ ಅಪಮಾನ ಮಾಡುವ ಅಧಿಕಾರಗಳನ್ನು ಅಮಾನತ್ತು ಮಾಡಬೇಕು ಎಂದರು.
ಈ ಹಿನ್ನೆಲೆಯಲ್ಲಿ ಮೇ10 ರಂದು ನಡೆಯುವ ಮತದಾನ ಬಹಿಷ್ಕಾರ ಮಾಡಿತ್ತಿರುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಜಾರ್ಲ್ಸ್, ರಾಮು, ಶೇಷಪ್ಪ, ಸುಂದರ್, ಸಂಘದ ಆಧ್ಯಕ್ಷ ಬಿ.ದಿವಾಕರ ಸೇರಿದಂತೆ ಇತರರು ಹಾಜರಿದ್ದರು.