ತುಂಗಭದ್ರಾ ಪುಷ್ಕರ ಮಹೋತ್ಸವಕ್ಕೆ ಚಾಲನೆ

ಗಂಗಾವತಿ ನ.20: ತಾಲೂಕಿನ ಆನೆಗೊಂದಿ ಚಿಂತಾಮಣಿಯಲ್ಲಿ ಶುಕ್ರವಾರ ಬೆಳಗ್ಗೆ ತುಂಗಭದ್ರಾ ಪುಷ್ಕರಣ ಕುಂಭಮೇಳ ಸರ್ವಧರ್ಮ ಸಮಿತಿ ಆಶ್ರಯದಲ್ಲಿ ತುಂಗಭದ್ರಾ ಪುಷ್ಕರ (ಪುಣ್ಯಸ್ಥಾನ) ಕುಂಭಮೇಳ ಮಹೋತ್ಸವಕ್ಕೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕರು, 12 ವರ್ಷಕ್ಕೊಮೆ ಪುಷ್ಕರ (ಪುಣ್ಯಸ್ಥಾನ) ಆಚರಿಸಲಾಗುತ್ತಿದ್ದು, ಈ ಸಲ ತುಂಗಭದ್ರಾ ನದಿಗೆ ಪುಷ್ಕರ ಆಚರಣೆಗೆ ಅವಕಾಶ ಸಿಕ್ಕಿದೆ. ಕೋವಿಡ್-19 ಮುಂಜಾಗ್ರತೆಯಿಂದ ಸರಳವಾಗಿ ಆಚರಿಸಲಾಗುತ್ತಿದೆ ಎಂದರು.
ಸರ್ವಧರ್ಮದ ಸಮಾಜದವರು ಪುಷ್ಕರ ಕುಂಭಮೇಳ ಮಹೋತ್ಸವದಲ್ಲಿ ಭಾಗವಹಿಸಿ ಮೇಳಕ್ಕೆ ಹೆಚ್ಚಿನ ರೀತಿಯಲ್ಲಿ ಮೆರಗು ತಂದಿದ್ದಾರೆ. ಜೊತೆಗೆ ಈ ಭಾಗದ ಜನರಿಗೆ ಒಳ್ಳೆÀಯದು ಆಗಲಿ ಎಂದು ದೇವರಲ್ಲಿ ಪ್ರಾರ್ಥಸಿದರು.
ಬೆಳಗ್ಗೆಯಿಂದ ಧ್ವಜರೋಹಣ, ಗಣಪತಿ ಹೋಮ ಸೇರಿ ವ್ರತ, ಜಪ, ತಪ, ಅನುಷ್ಟಾನ ಪೂಜಾಗಳು ಶ್ರದ್ಧಾ-ಭಕ್ತಿಯಿಂದ ನಡೆದವು.
ಈ ಸಂದರ್ಭದಲ್ಲಿ ಆನೆಗೊಂದಿ ರಾಜಮನೆತನದ ಒಡೆಯರಾದ ಕೃಷ್ಣ ದೇವರಾಯ, ಮುಖಂಡರಾದ ಪದ್ಮನಾಭ, ರಾಘವೇಂದ್ರ, ಸುಮಂತ, ಚಂದ್ರು , ಮಂಜುನಾಥಗೌಡ, ಸುರೇಶ ಬ.ಆನೆಗೊಂದಿ,ರಾಜೇಶ್ವರಿ, ಸುರೇಶ, ಹರಿಹಾರದೇವರಾಯ್ ಸೇರಿದಂತೆ ಇತರರಿದ್ದರು.