ತುಂಗಭದ್ರಾ ನದಿಯ ದಡದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೀಪೋತ್ಸವ


ಹರಿಹರ.ಡಿ.6 ; ತುಂಗಭದ್ರಾ ನದಿ ದಡದಲ್ಲಿ ಸುಮಾರು ಎರಡು ಕೋಟಿ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಈ ಬಾರಿಯ ಮಹಾ ದೀಪೋತ್ಸವ ಡಿ.೯ರಿಂದ ನಾಲ್ಕು ದಿನಗಳ ಕಾಲ ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಧರ್ಮಶಾಸ್ತ ಸೇವಾ ಸಮಿತಿ ಅಧ್ಯಕ್ಷ ಬಿ.ಎಂ ವಿಜಯಕುಮಾರ್ ತಿಳಿಸಿದರು.ನಗರದ ತುಂಗಭದ್ರಾ ಉತ್ತರಭಾಗದ ನದಿದಡದಲ್ಲಿ ನೂತನವಾಗಿ ನಿರ್ಮಾಣ ಗೊಂಡಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವವನ್ನು ಹರಿಹರದ ಗಾಂಧಿ ಮೈದಾನದಲ್ಲಿ ಅತಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿತ್ತು.ಆದರೆ ಈ ವರ್ಷದಿಂದ ತುಂಗಭದ್ರಾ ನದಿ ಉತ್ತರ ಭಾಗದ ದಡದಲ್ಲಿ ಸುಮಾರು ೨ ಕೋಟಿ ೭೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಈ ಬಾರಿಯ ಮಹಾ ದೀಪೋತ್ಸವವನ್ನು ನಾಲ್ಕು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿವೆ ಎಂದು ಹೇಳಿದರು. ಡಿ 9-10 ರ  4 30 ರಿಂದ ರಾತ್ರಿ 8 30ರವರೆಗೆ ನೂತನವಾಗಿ ನಿರ್ಮಿಸಿದ ದೇವಸ್ಥಾನ ಶುದ್ಧಿ ಹಾಗೂ ಪಾವಿತ್ರ್ಯತೆಯ ವಿವಿಧ ಪೂಜಾ ಕಾರ್ಯಕ್ರಮಗಳು ಮತ್ತು ಡಿ.೧೧ರ ಶನಿವಾರ ಬೆಳಿಗ್ಗೆ  ೪.೩೦ ರಿಂದ ಸ್ಥಳ ಶುದ್ಧಿ, ಮಹಾಗಣಪತಿ ಹೋಮ, ಅಭಿಷೇಕ, ಮಂಗಳಾರತಿ ಜೊತೆ ವಿವಿಧ ಪೂಜಾ ಕಾರ್ಯಕ್ರಮ ನಡೆಸಲಾಗುತ್ತದೆ.ಮೆರವಣಿಗೆ : ಅಂದು ಸಂಜೆ 4 ರಿಂದ ನಗರದ ಶ್ರೀ ಹರಿಹರೇಶ್ವರ ದೇವಸ್ಥಾನದ ಆವರಣದಿಂದ ನೂರಾರು ಮಹಿಳೆಯರ ಆರತಿಯೊಂದಿಗೆ ಹೊರಡುವ ಮಹಾ ದೀಪೋತ್ಸವವು ದೇವಸ್ಥಾನ ರಸ್ತೆ, ಕಿತ್ತೂರ ರಾಣಿ ಚೆನ್ನಮ್ಮ ವೃತ್ತ, ಮುಖ್ಯ ರಸ್ತೆ, ಗಾಂಧಿ ವೃತ್ತ, ಹಳೆ ಪಿ.ಬಿ. ರಸ್ತೆ ಮೂಲಕ ಸಾ‌ಗಿ ರಾಘವೇಂದ್ರ ಸ್ವಾಮಿ ಮಠದ ಮುಂಭಾಗದಿಂದ ತುಂಗಭದ್ರಾ ಸೇತುವೆಯ ಮುಖೇನ ಸಂಚರಿಸಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ತಲುಪುವುದು.ರಾತ್ರಿ 8 30ಕ್ಕೆ  ರಂಗು ರಂಗಿನ ಸಿಡಿಮದ್ದು ಕಾರ್ಯಕ್ರಮ ನಡೆಯಲಿದೆ ಇದಾದ ನಂತರ ಶ್ರೀ ರುದ್ರಮುನಿ ಗುರುಸ್ವಾಮಿ ವೇದಿಕೆಯಲ್ಲಿ ಸಾಂಸ್ಕೃತಿಕ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಲಿದೆ, ಡಿ.12ರ ಭಾನುವಾರ ಬೆಳಗ್ಗೆ ಪೂಜಾ ಕಾರ್ಯಕ್ರಮ ನಂತರ 1130 ಕ್ಕೆ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.
   ಕೇರಳದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸುಮಾರು ಒಂದು ವರ್ಷ ಕಾಲ ಅರ್ಚಕರಾಗಿ ಸೇವೆ ಸಲ್ಲಿಸಿರುವ ಬೆಂಗಳೂರು ಮೂಲದ ವಿ.ಎಸ್. ವಾಸುದೇವನ್ ನಂಬೂದ್ರಿ ಹಾಗೂ ಸಂಗಡಿಗರು,‌ ಶಿರಸಿ ಮೂಲದ ಕೆ.ವರಹಾಚಾರ್, ಶ್ರೀಪಾದ ಭಟ್ಟರು ಬೈರುಂಬೆ ಹಾಗು  ವಿಜಯಕುಮಾರ್ ಕುಲಕರ್ಣಿ ಈ ನಾಲ್ಕು ದಿನಗಳ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸುವರು.ಕೋವಿಡ್ ನಿಯಮಪಾಲನೆ: ದೀಪಾರಾಧನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಮಾಸ್ಕನ್ನು ಕಡ್ಡಾಯವಾಗಿ ಧರಿಸಿಕೊಂಡು ಬರಬೇಕು. ಇದಲ್ಲದೆ ದೇವಸ್ಥಾನ ಆವರಣದಲ್ಲಿಯೂ ಸ್ಯಾನಿಟೈಸರ್ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಜೊತೆಗೆ ಕೋವಿಡ್ ನಿಯಮಗಳನ್ನು ಪಾಲಿಸಲಾಗುವುದು ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಸೇವಾ ಸಮಿತಿ ಕಾರ್ಯದರ್ಶಿ ಪುಟ್ಟಪ್ಪ, ಖಜಾಂಚಿ ಚಂದ್ರಕಾಂತ್ ಹೋವಳೆ, ಶಿವಶಂಕರ್, ಎಸ್.ಎಚ್ ಹೂಗಾರ್, ಮಂಜುನಾಥ್ ಚಿಂಚಲಿ, ಪರಶುರಾಮ ನವಲೆ, ವೆಂಕಟೇಶ್, ರಾಘವೇಂದ್ರ, ಪ್ರಸನ್ನಾಚಾರಿ, ನಾಗರಾಜ್ ಗುರುಸ್ವಾಮಿ, ಪ್ರದೀಪ್,ಎಸ್.ಕೆ. ಆದಿತ್ಯ, ಕುಮಾರ ಸ್ವಾಮಿ ಹಾಗೂ ದೇವಸ್ಥಾನದ ಭಕ್ತ ವೃಂದದವರು ಇದ್ದರು 
Attachments area