ತುಂಗಭದ್ರಾ ನದಿಗೆ ಡ್ಯಾಂ ನೀರು: ಮುಳುಗಡೆಯಾದ ರೈತರ ಪಂಪ್ ಸೆಟ್ಟುಗಳು


ಸಂಜೆವಾಣಿ ವಾರ್ತೆ
ಸಿರಿಗೇರಿ ಜು18. ಮಲೆನಾಡು ಒಳಗೊಂಡು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆಯಿಂದಾಗಿ ಪ್ರಮುಖ ಜಲಾಶಯಗಳು ಭರ್ತಿಯಾದ ಹಿನ್ನೆಲೆಯಲ್ಲಿ ಸಿರುಗುಪ್ಪ ತಾಲೂಕಿನ, ಜೀವನಾಡಿ ತುಂಗಭದ್ರಾ ಜಲಾಶಯ ದಿಂದ ಕಳೆದ 4 ದಿನಗಳಿಂದ ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ. ಈ ಭಾಗದ ನದೀ ಪಾತ್ರದ ಗ್ರಾಮಗಳಾದ ಮಣ್ಣೂರು, ಎಂ.ಸೂಗೂರು, ಉಡೆಗೊಳ, ನಿಟ್ಟೂರು, ಹೆರಕಲ್ಲು ಮತ್ತು ಇತರೆ ಸಿರುಗುಪ್ಪ ವ್ಯಾಪ್ತಿಯ ನದೀ ಪಾತ್ರದ ಗ್ರಾಮಗಳಲ್ಲಿ ನದಿಯಿಂದ ಏತ ನೀರಾವರಿ ಮಾಡಿಕೊಂಡ ಸಾವಿರಾರು ರೈತರ ವಿದ್ಯುತ್ ಪಂಪ್ಸೆಟ್ಗಳು ನದಿಯಲ್ಲಿ ಮುಳುಗಡೆಯಾಗಿವೆ. ತರಾತುರಿಯಲ್ಲಿ ಕೆಲವರು ತೆಗೆದಿಟ್ಟುಕೊಂಡರೆ ಉಳಿದವರ ಮೋಟಾರ್,  ಪೈಪ್ ಲೈನ್ ನೀರು  ಪಾಲಾಗಿವೆ. ನೀರಿನ ಪ್ರಮಾಣ ಕಡಿಮೆಯಾದ ನಂತರ ತಮ್ಮ ಪಂಪ್ಸೆಟ್ ಗಳನ್ನು ರಿಪೇರಿ ಮಾಡಿಸಿಕೊಳ್ಳಲು ಲೈನ್ ಸರಿಪಡಿಸಿಕೊಳ್ಳಲು ಸಾವಿರಾರು ರೂಪಾಯಿ ಖರ್ಚು ಎದುರಿಸುವ ಆತಂಕದಲ್ಲಿದ್ದಾರೆ.