ತುಂಗಭದ್ರಾ ಜಲಾಶಯ ಅವಧಿಗೂ ಮುಂಚೆ ಭರ್ತಿ:ಸಚಿವ


ಸಂಜೆವಾಣಿ ವಾರ್ತೆ
ಹೊಸಪೇಟೆ, ಜು.14: ತುಂಗಭದ್ರಾ ಸೇರಿದಂತೆ ರಾಜ್ಯದ ಬಹುತೇಕ ಜಲಾಶಯಗಳು ಅವದಿಗೂ ಮುನ್ನವೇ ಭರ್ತಿಯಾಗಿದ್ದು ಈ ವರ್ಷ ಶುಭ ಸೂಚನೆ ನೀಡಿದೆ ಎಂದು ಸಚಿವ ಆನಂದಸಿಂಗ್ ಹೇಳಿದರು.
ತುಂಗಭದ್ರಾ ಜಲಾಶಯದಲ್ಲಿ ಬಾಗೀನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 4ದಶಕಗಳ ನಂತರ ಇಂತಹ ಸೊಬಗು ಕಂಡಿದ್ದೇವೆ.  ಇದನ್ನು ಸಮರ್ಥವಾಗಿ ನಿರ್ವಹಿಸಸಬೇಕಾಗಿದೆ ಇದು ಸಮೃದ್ದಿಗೆ ಕಾರಣವಾಗುತ್ತದೆ ಎಂದರು.
ಭತ್ತದ ಕಣಜ ಎಂದೇ ಖ್ಯಾತವಾದ ಈ ಭಾಗದ ಅಕ್ಕಿಯಲ್ಲಿ ಕಲಬೆರಿಕೆಯಾಗುತ್ತದೆ ಎಂಬ ಮಾತುಕೇಳಿ ಬಂದಿದ್ದು ಈ ಬಗ್ಗೆ ನಿಗಾವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು. ಸಿದ್ದರಾಮೇಶ್ವರ ಉತ್ಸವ ಸಿದ್ದರಾಮಯ್ಯ ಹಾಗೂ ಡಿಕೆಸಿ ಉತ್ಸವವಾಗುತ್ತಿದೆ ಎಂಬುವುದಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಸಂಸದ ಕರಡಿ ಸಂಗಣ್ಣ ಸ್ಥಳೀಯ ರೈತ ಮುಖಂಡರು ಇತರರು ಹಾಜರಿದ್ದರು.