ತುಂಗಭದ್ರಾ ಕಾಲುವೆಗೆ ಆಟೋ ಪಲ್ಟಿ ೬ ಮಂದಿ ಜಲಸಮಾಧಿ

ಬಳ್ಳಾರಿ, ಸೆ. ೧೪- ದಿನ ನಿತ್ಯದಂತೆ ಆಟೋದಲ್ಲಿ ಕುಳಿತು ಕೂಲಿ ಕೆಲಸಕ್ಕೆ ಹೊರಟಿದ್ದ ತಾಲೂಕಿನ ಕೊಳಗಲ್ಲು ಗ್ರಾಮದ ಆರು ಜನ ಕೂಲಿ ಕಾರ್ಮಿಕರು ಆಟೋ ಪಯಣಿಸುತ್ತಿದ್ದ ತುಂಗಭದ್ರಾ ಕಾಲುವೆಗೆ ಉರುಳಿ ಬಿದ್ದು ಆರು ಜನ ಸಾವನ್ನಪ್ಪಿ ಐದು ಜನ ಬದುಕುಳಿದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.ಈ ದುರ್ಘಟನೆಯಲ್ಲಿ ದುರ್ಗಮ್ಮ(೩೫) ಮತ್ತು ಅವರ ಸಂಬಂಧಿ ನಿಂಗಮ್ಮ(೩೪) ಮತ್ತು ೧೬ ವರ್ಷದ ಪುಷ್ಪಾವತಿ ಶವಗಳು ದೊರೆತಿದ್ದು. ಹೊಸಪೇಟೆ ಲಕ್ಷ್ಮೀ(೩೬) ನಾಗರತ್ಮ್ಮ, ಈಡಿಗರ ಹುಲಿಗೆಮ್ಮ(೨೬) ಶವಗಳ ಹುಡುಕಾಟ ನಡೆದಿದೆ.
ಆಟೋ ಚಾಲಕ ಭೀಮಪ್ಪ(೩೮), ಆತನ ಜೊತೆಗಿದ್ದ ಮಹೇಶ್ (೧೪)ಆಟೋ ಬಿದ್ದ ತಕ್ಷಣ ಕೂಗಿಕೊಂಡಿದ್ದಾರೆ. ಅಲ್ಲಿದ್ದ ಕೆಲಜನ ಬಂದು ಹೇಮಾವತಿ (೩೨), ದಮ್ಮೂರು ಎರ್ರೆಮ್ಮ(೩೬) ಮತ್ತು ಶಿಲ್ಪ(೧೬) ಅವರನ್ನು ಪ್ರಾಣಪಾಯದಿಂದ ರಕ್ಷಿಸಿದ್ದಾರೆ.
ಘಟನೆಯ ವಿವರ:
ಕೊಳಗಲ್ಲು ಗ್ರಾಮದಿಂದ ಬೆಳಿಗ್ಗೆ ೭.೩೦ ಕ್ಕೆ ಆಟೋ ಚಾಲಕ ಈಡಿಗರ ಭೀಮಪ್ಪ ಎಂದಿನಂತೆ ಹತ್ತು ಜನ ಕೂಲಿ ಕಾರ್ಮಿಕರನ್ನು ಕುಳ್ಳಿರಿಸಿಕೊಂಡು ಗ್ರಾಮದ ಹೊರ ವಲಯದಲ್ಲಿನ ತುಮಟಿ ಗವಿಯಪ್ಪ ಅವರ ಜಮೀನಿಗೆ ಕೂಲಿ ಕೆಲಸಕ್ಕೆ ಕರೆದುಕೊಂಡು ಹೊರಟಿದ್ದ.
ತುಂಗಭದ್ರಾ ಬಲದಂಡೆ ಮೇಲ್ಮಟ್ಟದ (ಹೆಚ್.ಎಲ್.ಸಿ) ಕಾಲುವೆಯ ದಂಡೆ ಮೇಲೆ ತೆರಳಿ ಸೂಜಿ ಗುಡ್ಡದ ಬಳಿಯಿಂದ ಕಾಲುವೆಯ ಬಲ ಬದಿಗೆ ತೆರಳಿದ್ದಾನೆ. ರಸ್ತೆ ಮೇಲೆ ಇದ್ದ ಕಲ್ಲಿನ ಮೇಲೆ ಆಟೋ ಚಲಿಸಿದಾಗ ಅದು ಪಲ್ಟಿಯಾಯ್ತು ಎಂದು ಆಟೋದಲ್ಲಿ ಇದ್ದ ಹೇಮಾವತಿ ಹೇಳಿದರು.ಆಟೋ ನೀರಿಗೆ ಬಿದ್ದ ತಕ್ಷಣ ಚಾಲಕ ಓಡಿ ಹೋಗಿದ್ದಾನೆ. ಆದರೆ ಅಕ್ಕ ಪಕ್ಕದ ಹೊಲದಲ್ಲಿದ್ದ ಜನ ಬಂದು ಗ್ರಾಮದ ಜನರಿಗೆ ಮಾಹಿತಿ ನೀಡಿದ ಮೇಲೆ ಪೊಲೀಸರು, ಅಗ್ನಿ ಶಾಮಕದಳದವರು ಬಂದು ಕಾರ್ಯಾಚರಣೆ ನಡೆಸಿದ್ದಾರೆ.
ಕಾಲುವೆಗೆ ಬಿದ್ದ ಪುಷ್ಪಾವತಿಯನ್ನು ನೀರಿನಿಂದ ತೆಗೆದಾಗ ಬದುಕಿದ್ದಳು. ಆದರೆ ಹೆಚ್ಚಿನ ನೀರು ಕುಡಿದಿದ್ದರಿಂದ ಆಕೆಯನ್ನು ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟಿದ್ದಾರೆ.

ಬಳ್ಳಾರಿ ಬಳಿಯ ತುಂಗಭದ್ರಾ ಕಾಲುವೆಗೆ ಆಟೋ ಉರುಳಿ ಬಿದ್ದು ೬ ಮಂದಿ ಮೃತಪಟ್ಟಿರುವುದನ್ನು ಸಾರ್ವಜನಿಕರು ಸ್ಥಳಕ್ಕೆ ದೌಡಾಯಿಸಿ ಕುತೂಹಲದಿಂದ ನೋಡುತ್ತಿರುವುದು.

ಹಗ್ಗ ಹರಿಯಿತು;
ಕಾಲುವೆಯಲ್ಲಿ ಬಿದ್ದ ಆಟೋವನ್ನು ಕ್ರೇನ್ ನಿಂದ ಮೇಲೆತ್ತುವಾಗ ಹಗ್ಗ ಹರಿದು ಮತ್ತೆ ನೀರಿಗೆ ಬಿದ್ದಾಗ ಆತಂಕ ಸೃಷ್ಟಿಯಾಯಿತು. ಮೂರು ಜನ ಪುಷ್ಪಾವತಿ, ಶಿಲ್ಪ, ಮಹೇಶ್ ಮೂರು ಜನ ಬಾಲ ಕಾರ್ಮಿಕರಾಗಿದ್ದಾರೆ.
ಈ ಆಟೋದಲ್ಲಿ ೨೦ ಜನರನ್ನು ಕರೆದುಕೊಂಡು. ಹೊರಟಿದ್ದ. ಆದರೆ ದುರಂತ ಸಂಭವಿಸುವುದಕ್ಕೆ ಮೊದಲು ೯ ಜನರನ್ನು ಇಳಿಸಿ ಬಂದಿದ್ದರಿಂದ ಅವರೆಲ್ಲಾ ಬದುಕುಳಿದಿದ್ದಾರೆ.
ಸಾಂತ್ವನ ಪರಿಹಾರ:
ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರು ದೂರವಾಣಿಯಲ್ಲಿ ಸಂಜೆವಾಣಿಜೊತೆ ಮಾತನಾಡಿ. ಇಂದು ಈ ಘಟನೆಯಲ್ಲಿ ಮೃತಪಟ್ಟ ಕೃಷಿ ಕಾರ್ಮಿಕರ ಕುಟುಂಬಕ್ಕೆ ಸಾಂತ್ವನ ಹೇಳಿ.
ಮೃತ ಕುಟುಂಬದ ಸದಸ್ಯರಿಗೆ ಮುಖ್ಯ ಮಂತ್ರಿಗಳ ಜೊತೆ ಮಾತನಾಡಿ ತಲಾ ಐದು ಲಕ್ಷ ರೂ ಪರಿಹಾರ ಕೊಡಿಸುವುದಾಗಿ ಹೇಳಿದರು. ಅಲ್ಲದೆ ತಾವು ನಾಳೆ ಬಂದು ವೈಯಕ್ತಿಕ ಪರಿಹಾರ ನೀಡುವುದಾಗಿ ತಿಳಿಸಿದರು.
೧೩ ವರ್ಷದ ಹಿಂದೆ
ಇದೇ ರೀತಿ ಆಟೋದಲ್ಲಿ ದೀಪಾವಳಿ ಹಬ್ಬದ ದಿನ ಆಟೋದಲ್ಲಿ ೯ ಜನ ಕೂಲಿ ಕಾರ್ಮಿಕರನ್ನು ಕೂಡಿಸಿಕೊಂಡು ಕಾಲುವೆ ಮೇಲೆ ಹೊರಟಾಗ ನೀರಿಗೆ ಬಿದ್ದು ಏಳು ಜನ ಸತ್ತಿದ್ದರು.

ಕಲ್ಲು ಹತ್ತಿ ಆಟೋ ಪಲ್ಟಿಯಾಗಿ ಸಂಭವಿಸಿದ ದುರಂತ ಕಾಲುವೆಯಲ್ಲಿ ಆಟೋ ಕೂಡ ಕೊಚ್ಚಿಕೊಂಡು ಹೋಗಿದೆ..
ಹಗ್ಗದಿಂದ ಆಟೋ ಎಳೆಯಲು ಪ್ರಯತ್ನಿಸಿದ್ರು, ಹಗ್ಗ ತುಂಡಾದ ಪರಿಣಾಮ ಆಟೋ ಕೊಚ್ಚಿಕೊಂಡು ಹೋಗಿದೆ
ನೀರಿನಲ್ಲಿ ಮುಳುಗಿರುವ ಇನ್ನು ಮೂರು ಜನರ ಶವಗಳನ್ನು ಅಗ್ನಿ ಶಾಮಕದಳದ ಸಿಬ್ಬಂದಿ ಹುಡುಕಾಡುತ್ತಿದೆ.