ತುಂಗಭದ್ರಾ ಕಾಲುವೆಗಳ ಆಧುನೀಕರಣಕ್ಕೆ ಸಚಿವ ಆನಂದಸಿಂಗ್ ಮಾಹಿತಿ ಸಂಗ್ರಹ

ಸಂಜೆವಾಣಿ ವಾರ್ತೆ
ಹೊಸಪೇಟೆ ಅ17: ಅತ್ಯಂತ ಕಳಪೆ ನಿರ್ವಹಣೆಯಲ್ಲಿರುವ ತುಂಗಭದ್ರಾ ಜಲಾಶಯದ ಕಾಲುವೆಗಳ ಆಧುನೀಕರಣ ಕಾಮಗಾರಿಗೆ ಜಿಲ್ಲಾ ಉಸ್ತೂವಾರಿ ಸಚಿವ ಆನಂದಸಿಂಗ್ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು.
ಶನಿವಾರ ಮಧ್ಯಾಹ್ನ ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ  ನೀರಾವರಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಅವರು ಅತ್ಯಂತ ಐತಿಹಾಸಿಕ ಹಿನ್ನೆಲೆಯ ರಾಯ, ಬಸವಾ, ತುರ್ತಾ ಕಾಲುವೆಗಳು ಸೇರಿದಂತೆ ತುಂಗಭದ್ರ ಜಲಾಶಯದ ಎಡ, ಬಲ ದಂಡೆಯ ಎಲ್ಲಾ ಕಾಲುವೆಗಳನ್ನು ಆಧುನೀಕರಣ ಗೊಳಿಸಲು ಏನೇಲ್ಲಾ ಮಾಡಬಹುದು ಅಗತ್ಯ ಹಣಕಾಸು ಸೇರಿದಂತೆ ಎಲ್ಲಾ ಹಂತದ ಕಾರ್ಯಚಟುವಟಿಕೆಗಳ ಕುರಿತು ಅಧಿಕಾರಿಗಳೊಂದಿಗೆ ಚೆರ್ಚಿಸಿದರು.
ಅಲ್ಲದೆ ಸದ್ಯ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳನ್ನು ತ್ವರಿತವಾಗಿ ಹಾಗೂ ಗುಣಾತ್ಮಕವಾಗಿ ಪೂರ್ಣಗೊಳಿಸುವಂತೆಯೂ ಸೂಚಿಸಿದರು.
ಹೊಸಪೇಟೆ ಸಹಾಯಕ ಆಯುಕ್ತ ಸಿದ್ಧರಾಮೇಶ್ವರ, ಜಲಸಂಪನ್ಮೂಲ ಇಲಾಖೆಯ ಮುಖ್ಯ ಇಂಜಿನಿಯರ್ ಪವಾರ್ ನಗರಸಭೆಯ ಆಯುಕ್ತ ಮನ್ಸೂರ್‍ಅಲಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.