ತುಂಗಭದ್ರಾ ಎಡ, ಬಲದಂಡೆ ಕೆಳಮಟ್ಟದ ಕಾಲುವೆಗಳಿಗೆ ಏ.10ರವರೆಗೆ ನೀರು

ಬಳ್ಳಾರಿ,ಮಾ.31: ಪ್ರಸ್ತುತ ತುಂಗಾಭದ್ರಾ ಅಚ್ಚುಕಟ್ಟು ಪ್ರದೆಶದಲ್ಲಿ ಬೆಳೆದು ನಿಂತ ಬೆಳೆಗಳನ್ನು ಸಂರಕ್ಷಿಸಲು ತುಂಗಭದ್ರಾ ಎಡದಂಡೆ ಮತ್ತು ಬಲದಂಡೆ ಕೆಳಮಟ್ಟದ ಕಾಲುವೆಗಳಿಗೆ ಏ.10ರವರೆಗೆ ನೀರಾವರಿಗಾಗಿ(ಲಭ್ಯತೆಯನುಸಾರ) ನೀರು ಹರಿಸಲಾಗುವುದು ಎಂದು ಮುನಿರಾಬಾದ್‍ನ ಕರ್ನಾಟಕ ನೀರಾವರಿ ನಿಗಮ ನಿಯಮಿತದ ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
ತುಂಗಾಭದ್ರಾ ಎಡದಂಡೆ ಕಾಲುವೆಗೆ ಏ.11ರಿಂದ ಏ.20ರವರೆಗೆ ಕುಡಿಯುವ ನಿರಿಗಾಗಿ ಕಾಲುವೆಯಲ್ಲಿ ನೀರು ಹರಿಸುವಿಕೆಯನ್ನು ಮುಂದುವರಿಸಲಾಗುವುದು(ಎಡದಂಡೆ ವಿಜಯನಗರ ಕಾಲುವೆಗಳು ಒಳಗೊಂಡಂತೆ). ರಾಯಬಸವಣ್ಣ ಕಾಲುವೆಯ ವೇಳಾಪಟ್ಟಿಯಲ್ಲಿ ಮತ್ತು ಹರಿವಿನ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ವಿತರಣಾ ಕಾಲುವೆಗಳಲ್ಲಿ ಲಭ್ಯವಾಗುವ ನೀರಿನ ಅನುಗುಣವಾಗಿ ಹರಿವನ್ನು ನಿಯಂತ್ರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸರ್ಕಾರದ ಆದೇಶದಂತೆ ಭದ್ರಾ ಜಲಾಶಯದಿಂದ ಸುಮಾರು 1.60 ಟಿ.ಎಂ.ಸಿ ನೀರನ್ನು ಹರಿಸಲಾಗುತ್ತಿದೆ. ಸದರಿ ನೀರು ತುಂಗಭದ್ರಾ ಜಲಾಶಯಕ್ಕೆ ಹರಿದು ಬಂದು ಸಂಗ್ರಹವಾಗಬಹುದಾದ ಪ್ರಮಾಣವನ್ನು ನಿರೀಕ್ಷಿಸಿ ಹಾಗೂ ಜಲಾಶಯದಲ್ಲಿ ಲಭ್ಯವಾಗುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ನೀರು ಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಸಮ್ಮತಿಸಿದ್ದಾರೆ.
ನೀರು ಹರಿಸುವಿಕೆಯ ವಿವರ:
ತುಂಗಭದ್ರಾ ಎಡದಂಡೆ ಕಾಲುವೆಗೆ ಏ.01 ರಿಂದ ಏ.10 ರವರೆಗೆ ನೀರಾವರಿಗಾಗಿ (ಲಭ್ಯತೆಯನುಸಾರ) ಹಾಗೂ ಏ.11 ರಿಂದ ಏ.20ರವರೆಗೆ ಕುಡಿಯುವ ನೀರಿಗಾಗಿ ಕಾಲುವೆಯಲ್ಲಿ ನೀರು ಹರಿಸುವಿಕೆಯನ್ನು ಮುಂದುವರೆಸಲಾಗುವುದು (ಎಡದಂಡೆ ವಿಜಯನಗರ ಕಾಲುವೆಗಳು ಒಳಗೊಂಡಂತೆ).
ಬಲದಂಡೆ ಕೆಳಮಟ್ಟದ ಕಾಲುವೆಗೆ;
ಏ.01 ರಿಂದ ಏ.10 ರವರೆಗೆ ನೀರಾವರಿಗಾಗಿ (ಲಭ್ಯತೆಯನುಸಾರ)ಕುಡಿಯುವ ನೀರು ಒಳಗೊಂಡಂತೆ ಕಾಲುವೆಯಲ್ಲಿ ನೀರು ಹರಿಸುವಿಕೆಯನ್ನು ಮುಂದುವರೆಸಲಾಗುವುದು.
ರಾಯಬಸವಣ್ಣ ಕಾಲುವೆಗೆ;
ರಾಯ ಬಸವಣ್ಣ ಕಾಲುವೆಯ ವೇಳಾಪಟ್ಟಿಯಲ್ಲಿ ಮತ್ತು ಹರಿವಿನ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.ವಿತರಣಾ ಕಾಲುವೆಗಳಲ್ಲಿ ಲಭ್ಯವಾಗುವ ನೀರಿನ ಅನುಗುಣವಾಗಿ ಹರಿವನ್ನು ನಿಯಂತ್ರಿಸಲಾಗುವುದು. ಪ್ರಸ್ತುತ ಜಲಾಶಯದಲ್ಲಿ ಲಭ್ಯವಾಗುವ ನೀರಿನ ಅನುಗುಣವಾಗಿ ಕಾಲುವೆಗಳಲ್ಲಿ ನೀರು ಹರಿಸಲಾಗುತ್ತಿದ್ದು, ರೈತರು ನೀರು ಪೋಲಾಗದಂತೆ ಸಮರ್ಪಕ ನೀರು ನಿರ್ವಹಣೆಗೆ ಅಧಿಕಾರಿಗಳೊಡನೆ ಸಹಕರಿಸಲು ಅವರು ಕೋರಿದ್ದಾರೆ.