ತುಂಗಭದ್ರಾ ಎಡದಂಡೆ ನಾಲೆಗೆ ಸಮರ್ಪಕ ನೀರು ಹರಿಸಿ

ಮಾನ್ವಿ.ಅ.೧೯- ತುಂಗಭದ್ರ ಎಡದಂಡೆ ನಾಲೆಗೆ ನೀರು ಹರಿಸಿ ೩ ತಿಂಗಳು ಕಳೆದರು ಕೂಡ ಡಿಸ್ಟ್ರಬ್ಯೂಟರ್ ನಂ.೮೨,೮೫,೮೯ ಕಾಲುವೆಗಳಿಗೆ ಇದುವರೆಗೂ ಸಮರ್ಪಕವಾಗಿ ನೀರು ಹರಿಸದೆ ಇರುವುದರಿಂದ ಹಾಗೂ ಮಳೆಸರಿಯಾಗಿ ಬರದೆ ಇರುವುದರಿಂದ ರೈತರು ಬೆಳೆದ ಭತ್ತ, ಮೆಣಸಿನಕಾಯಿ, ಹತ್ತಿ,ತೊಜೋಳ ಸೇರಿದಂತೆ ಇತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೇ. ಅದ್ದರಿಂದ ಕೂಡಲೇ ಕಾಲುವೆಗೆ ನೀರು ಹರಿಸಲು ಹಾಗೂ ರೈತರ ಪಂಪಸೇಟ್ ಗಳಿಗೆ ನಿರಂತರವಾಗಿ ೮ ತಾಸು ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷರಾದ ಚಾಮರಸ ಮಾಲೀಪಾಟೀಲ್ ಬೆಟ್ಟದೂರು ಒತ್ತಾಯಿಸಿದರು.
ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿನ ಮುಖ್ಯರಸ್ತೆಯಲ್ಲಿ ವಿವಿಧ ರೈತಪರ ಸಂಘಟನೆಗಳು ತುಂಗಭದ್ರ ಎಡದಂಡೆ ನಾಲೆಗೆ ಸಮರ್ಪಕವಾಗಿ ನೀರು ಹರಿಸದೆ ಇರುವುದನ್ನು ಖಂಡಿಸಿ ಕರೆ ನೀಡಿದ ರಸ್ತೆರೋಖೋ ಚಳುವಳಿ ಹಿನ್ನೇಲೆಯಲ್ಲಿ ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆದ ನೀರಾವರಿ ಇಲಾಖೆ ಅಧಿಕಾರಿಗಳ ಹಾಗೂ ರೈತ ಸಂಘಗಳ ಸಭೆಯಲ್ಲಿ ನೀರಾವರಿ ಇಲಾಖೆಯ ಎ.ಇ.ಇ.ತಮ್ಮಣ್ಣ ಮಾತನಾಡಿ ಮುಖ್ಯ ಕಾಲುವೆಯಿಂದ ನೀರು ಸಮರ್ಪಕವಾಗಿ ಬಂದಲ್ಲಿ ಡಿಸ್ಟ್ರಬ್ಯೂಟರ್ ನಂ.೮೨,೮೫,೮೯ ಕಾಲುವೆಗಳಿಗೆ ೪.೪ ಗೇಜ್ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ ಮುಖ್ಯಕಾಲುವೆಯಿಂದ ಉಪಕಾಲುವೆಗಳಿಗೆ ನೀರುತರಲು ಶ್ರಮಿಸುವುದಾಗಿ ಬರವಸೆ ನೀಡಿದರು. ಇವರ ಉತ್ತರಕ್ಕೆ ತೃಪ್ತರಾಗದ ರೈತರು ಮುಖ್ಯ ಕಾಲುವೆಯ ವಿಕ್ಷೇಣೆಗಾಗಿ ಜಿಲ್ಲಾಧಿಕಾರಿಗಳು ಬಂದಿರುವ ಮಾಹಿತಿ ತಿಳಿದು ಜಿಲ್ಲಾಧಿಕಾರಿಗಳಿಗೆ ಡಿಸ್ಟ್ರಬ್ಯೂಟರ್ ನಂ.೮೨,೮೫,೮೯ ಕಾಲುವೆಗಳಿಗೆ ಸಮರ್ಪಕವಾಗಿ ನೀರು ನಿರ್ವಹಣೆ ಮಾಡುವಂತೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿ.ಮುದುಕಪ್ಪನಾಯಕ, ಆನಂದಭೋವಿ, ಲಿಂಗರೆಡ್ಡಿ, ಯಂಕಪ್ಪಕರಾಬಾರಿ, ಬಸವರಾಜ, ಶರಣಪ್ಪಗೌಡ, ಜಿಲ್ಲಾಧ್ಯಕ್ಷರಾದ ಸೂಗೂರಯ್ಯ ಸ್ವಾಮಿ, ಶಂಕರಗೌಡ ಹರವಿ, ರಾಮಣ್ಣ, ಅಂಜೀನಯ್ಯ,ಗೋಪಾಲನಾಯಕ ಸೇರಿದಂತೆ ನೂರಾರು ರೈತರು ಭಾಗವಹಿಸಿದರು. ಪಿ.ಐ. ವೀರಭದ್ರಯ್ಯ ಹಿರೇಮಠ, ಕಂದಾಯ ನಿರೀಕ್ಷಕ ಚರಣಸಿಂಗ್, ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಇದ್ದರು.