ತುಂಗಭದ್ರಾ ಎಡದಂಡೆ ಕಾಲುವೆ ಸಮರ್ಪಕ ನೀರು ಹರಿಸಲು ರೈತರು ಒತ್ತಾಯ

ರಾಯಚೂರು,ಆ.೧೧-
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಮೈಲು ೬೯ ರ ಅಳತೆ ಪಟ್ಟಿ ಸರಿಪಡಿಸುವುದು ಸೇರಿದಂತೆ ಮೈಲು ೬೯ ರ ನಂತರ ರೈತರ ಜಮೀನುಗಳಿಗೆ ಪ್ರಮಾಣಬದ್ಧ ನೀರು ಸರಬರಾಜು ಮಾಡಲು ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಸೂಕ್ತ ನಿರ್ದೇಶನ ನೀಡುವಂತೆ ಂಗಭದ್ರಾ ಎಡದಂತೆ ಕಾಲುವೆ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಸರಬರಾಜು ಪ್ರಾರಂಭಿಸಿದ ಆರಂಭದಲ್ಲೇ ಕಾಲುವೆಯಲ್ಲಿ ನೀರಿನ ಕೊರತೆ ನಿರ್ವಹಣೆ ಸಮಸ್ಯೆ ಕಾಣಿಸಿಕೊಂಡಿದ್ದು ಮುಂದೆ ಬರುವ ದಿನಗಳು ಇನ್ನೂ ಕಠಿಣ ಪರಿಸ್ಥಿತಿ ಬರುವ ಸಾಧ್ಯತೆಯಿದೆ ಎಂದು ದೂರಿದರು.
ತುಂಗಭದ್ರಾ ಎಡದಂಡೆ ಕಾಲುವೆ ನೀರಾವರಿಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಾನೂನು ಸುವ್ಯವಸ್ಥೆಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮೈಲು ೬೯ ರ ನಂತರದ ರೈತರ ಜಮೀನುಗಳ ನೀರಾವರಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಸಮರ್ಪಕವಾಗಿ ಕಾಲುವೆ ನೀರು ಸರಬರಾಜು ಆಗುವಂತೆ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಶಂಕರಗೌಡ, ಅಮರೇಶ ಹೊಸಮನಿ, ಬಸನಗೌಡ, ಶರಣಬಸವಗೌಡ ಸೇರಿದಂತೆ ಉಪಸ್ಥಿತರಿದ್ದರು.