ತುಂಗಭದ್ರಾ ಎಡದಂಡೆ ಉಪಕಾಲುವೆ ನೀರಿಗಾಗಿ ರೈತರಿಂದ ರಸ್ತೆತಡೆ

ರಾಯಚೂರು,ಮಾ.೦೪ :- ಕಳೆದ ಒಂದೂವರೆ ತಿಂಗಳಿಂದ ಕೆಳ ಭಾಗದ ಸಿರವಾರ,ಮಾನವಿ, ರಾಯಚೂರು ಭಾಗದ ರೈತರಿಗೆ ಸರಿಯಾದ ರೀತಿಯಲ್ಲಿ ಕಾಲುವೆ ನೀರು ಪೂರೈಕೆಯಾಗದೆ ರೈತರು ನಷ್ಟವನ್ನು ಅನುಭವಿಸುತ್ತಿದ್ದಾರೆ ಜಿಲ್ಲಾಡಳಿತ ಕೂಡಲೇ ಇದನ್ನು ಮುನಿರಾಬಾದ್ ಅಧಿಕಾರಿಗಳಿಗೆ ತಿಳಿಸಿ ಕಾಲುವೆ ನೀರು ಪೂರೈಕೆ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಸಾಥ್ ಮೈಲ್ ಹತ್ತಿರ ಉಗ್ರ ಸ್ವರೂಪದ ಹೋರಾಟದ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗುತ್ತದೆ ಎಂದು ರೈತ ಸಂಘದ ರಾಜ್ಯ ಗೌರವ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ ಹೇಳಿದರು..
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು ನಮ್ಮ ಭಾಗದ ರೈತರನ್ನು ನಿರ್ಲಕ್ಷ್ಯ ಮಾಡುತ್ತಿರುವ ಅಧಿಕಾರಿಗಳ ಬೇಜವ್ದಾರಿಯನ್ನು ನಮ್ಮ ಸಂಘಟನೆ ಖಂಡಿಸುತ್ತದೆ ಕೆಳ ಭಾಗದ ರೈತರಿಗೆ ಉಪ ಕಾಲುವೆ ಮೂಲಕ ನೀರು ಹರಿಸದಿದ್ದಲ್ಲಿ ರೈತರ ಬೆಳೆಗಳಾದ ಮೆಣಸಿನ ಕಾಯಿ, ಶೇಂಗಾ, ಭತ್ತ ಇನ್ನಿತರ ಬೆಳೆಗಳಿಗೆ ನೀರಿಲ್ಲದೆ ಒಣಗಿ ಹೋಗುತ್ತಿವೆ. ಈ ಬಗ್ಗೆ ಅನೇಕ ಬಾರಿ ನೀರಾವರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವದೇ ಕ್ರಮ ಕೈಗೊಂಡಿಲ್ಲ. ಮುಖ್ಯ ಅಭಿಯಂತರರು ಮುನಿರಾಬಾದ್ ಅಧಿಕಾರಗಳು ಕೂಡಲೇ ತಕ್ಷಣ ನೀರು ಪೂರೈಕೆಯಾಗದಿದ್ದರೆ ರೈತರ ಬೆಳೆಗಳು ನೂರಕ್ಕೆ ನೂರರಷ್ಟು ಹಾಳಾಗುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಯಥೇಚ್ಛವಾಗಿ ಅನಧಿಕೃತವಾಗಿ ಮುಖ್ಯ ನಾಲೆಯಿಂದ ನೀರು ಪಡೆದು, ಭತ್ತ ಮರಳುತ್ತಿದ್ದಾರೆ. ಆದರೆ, ರಾಯಚೂರು ಜಿಲ್ಲೆಯಲ್ಲಿ ಮೂರು ತಾಲೂಕಿನ ವ್ಯಾಪ್ತಿಯಲ್ಲಿ ಕುಟ್ಟು ಪ್ರದೇಶಕ್ಕೆ ನೀರು ಪೂರೈಕೆಯಾಗದಿರುವುದು ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗುತ್ತದೆ. ಕಾರಣ ಕೂಡಲೇ ಮೇಲಾಗದಲ್ಲಿರುವ ಅನಧಿಕೃತ ನೀರಾವರಿಯನ್ನು ತಡೆದು ಕೆಳಭಾಗಕ್ಕೆ ನೀರು ಪೂರೈಸಲು ವರ್ತು – ಕ್ರಮ ಕೈಗೊಳ್ಳಲು ರಸ್ತಾ ತಡೆ ಚಳುವಳಿ ಮುಖಾಂತರ ಒತ್ತಾಯಿಸುತ್ತಿದ್ದೇವೆ ಎಂದರು..
ಈ ಸಂದರ್ಭದಲ್ಲಿ ಶಾಸಕ ಶಿವರಾಜ ಪಾಟೀಲ, ಮಾಜಿ ಶಾಸಕ ತಿಪ್ಪರಾಜ ಹವಾಲ್ದಾರ್, ಮಾಜಿ ಶಾಸಕ ಗಂಗಾಧರ ನಾಯಕ, ಶರಣಪ್ಪ ಗೌಡ ಜಾಡಲದಿನ್ನಿ, ಶಂಕರಗೌಡ ಹರವಿ, ವಿರೂಪಾಕ್ಷಿ ಜೆ ಡಿ ಎಸ್,ಶರಣಪ್ಪಗೌಡ ಲಕ್ಕಂದಿನ್ನಿ
ರೈತ ಮುಖಂಡರಾದ ಬಸನಗೌಡ ಬಲ್ಲಟಿಗಿ,ಪ್ರಭಾಕರ್ ಪಾಟೀಲ, ಬಸವರಾಜ ಮಾಲಿ ಪಾಟೀಲ, ಮಲ್ಲಣ್ಣ ಗೌಡೂರು, ಅಮರೇಶ ಆಲ್ದಾಳ, ಲಿಂಗರಡ್ಡಿ ಪಾಟೀಲ, ದೇವರಾಜ ನಾಯಕ ಮಲ್ಲನಗೌಡ, ಬಾಲಾಜಿ ಜೀನೂರು ಕ್ಯಾಂಪ್,ಸೇರಿದಂತೆ ಸಾವಿರಾರು ರೈತರು ಉಪಸ್ಥಿತರಿದ್ದರು.