ತೀವ್ರ ಬರ ಪ್ರದೇಶದ ಪಟ್ಟಿಗೆ ಜಗಳೂರು ತಾಲೂಕು ಸೇರಿಸಲು ಶಾಸಕ ಬಿ.ದೇವೇಂದ್ರಪ್ಪ ಭರವಸೆ.

ಸಂಜೆವಾಣಿ ವಾರ್ತೆ

ಜಗಳೂರು.ಸೆ.೧ -: ತಾಲ್ಲೂಕಿನಲ್ಲಿ ಮಳೆ ಕೊರೆತೆಯಿಂದ ತತ್ತರಿಸಿದ ಅನ್ನದಾತ ತಾಲೂಕಿನಲ್ಲಿ 90% ಬೆಳೆ ಹಾನಿ ಬರ ಸಮೀಕ್ಷೆ ಮಳೆ ಕೊರತೆ ಯಿಂದ ಅನ್ನದಾತ ನಲುಗಿದ್ದು,ಶಾಶ್ವತ ಬರದ ನಾಡು ಜಗಳೂರು ತಾಲೂಕನ್ನು ತೀವ್ರ ಬರ ಪ್ರದೇಶ ಪಟ್ಟಿಗೆ ಸೇರಿಸಲು ಜಿಲ್ಲಾ ಉಸ್ತುವಾರಿ ಸಚಿವರದ ಎಸ್.ಎಸ್ ಮಲ್ಲಿಕಾರ್ಜುನ್ , ಕಂದಾಯ ಇಲಾಖೆಯ ಸಚಿವರ ಗಮನಕ್ಕೆ ತಂದು ತೀವ್ರ ಬರ ಪ್ರದೇಶ ಮೊದಲನೇ ಪಟ್ಟಿಗೆ ಸೇರಿಸಲಾಗುವುದು ಶಾಸಕ ಬಿ. ದೇವೇಂದ್ರಪ್ಪ ಭರವಸೆ ನೀಡಿದರು.ಜಗಳೂರು ತಾಲೂಕನ್ನು ಮಧ್ಯಮ ಬರಪೀಡಿತ ಪಟ್ಟಿಗೆ ಸೇರಿಸಿದ ಹಿನ್ನಲೆ ಭಾನುವಾರ ಕಸಬಾ ಹೋಬಳಿಯ ಜಗಳೂರು ಗೊಲ್ಲರಟ್ಟಿ. ಭರಮಸಮುದ್ರ. ಮುಸ್ಟೂರು ಸೇರಿದಂತೆ, ಬಿಳಿಚೋಡು, ಸೊಕ್ಕೆ, ಹೋಬಳಿಗಳ ಕೆಲವು ಹಳ್ಳಿಗಳಲ್ಲಿ ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ತಾಲೂಕು ಆಡಳಿತದಿಂದ ಜಂಟಿ ಸಮೀಕ್ಷೆ ಕೈಗೊಂಡಿದ್ದು, ಅಧಿಕಾರಿಗಳ ತಂಡದೊಂದಿಗೆ ಶಾಸಕ ದೇವೇಂದ್ರಪ್ಪ ಅನಾವೃಷ್ಟಿ ವಿಕ್ಷೀಸಿ ನಂತರ ಮಾತನಾಡಿದರು.ಜಗಳೂರು ತಾಲೂಕಿನಲ್ಲಿ ಶೇಕಡ 51% ಪ್ರದೇಶದಲ್ಲಿ ಮೆಕ್ಕೆಜೋಳ, ಶೇಂಗಾ, ರಾಗಿ,ಸೂರ್ಯಕಾಂತಿ, ತೊಗರಿ ಹೀಗೆ ವಿವಿಧ ರೀತಿಯಾಗಿ ಬಿತ್ತನೆ ಮಾಡಲಾಗಿದೆ ಅಲ್ಲದೆ ಆಗಸ್ಟ್ ಅಂತ್ಯಕ್ಕೆ 57 ಮಿ.ಮಿ ವಾಡಿಕೆ ಮಳೆಯಾಗಬೇಕಿತ್ತು ಆದರೆ 15.ಮಿ.ಮಿ ಮಳೆಯಾಗಿ 70% ಮಳೆ ಕೊರತೆಯಿಂದ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ, ಬೆಳೆಗಳ ಲ್ಲದೆ ವಿವಿಧ ಬೆಳೆಗಳು ಸಂಪೂರ್ಣ ಬಾಡಿ ಒಣಗಿದ್ದು, ನಮ್ಮ ರೈತರು ಹಾಕಿದ ಬಂಡವಾಳ ಕಾಣದೆ ಸಾಲವನ್ನು ಹೊತ್ತಕೊಳ್ಳು ವ ಪರಿಸ್ಥಿತಿ ಬಂದೊದಗಿದ್ದು ಮಳೆ ಇಲ್ಲದೆ ಆಕಾಶದತ್ತ ಮುಗಿಲು ನೋಡಿ ರೈತರು ವಿಚಲಿತರಾಗಿದ್ದಾರೆ.ಕೃಷಿ.ತೋಟಗಾರಿಕೆ ಮತ್ತು ತಾಲೂಕ ಆಡಳಿತದ ಅಧಿಕಾರಿಗಳು ಇಲ್ಲಿನ ನೈಜ್ಯ ಪರಿಸ್ಥಿತಿಯನ್ನು ಮೇಲಾಧಿಕಾರಿಗಳಿಗೆ ತಾಲೂಕಿನ ವಾಸ್ತವ ಪರಿಸ್ಥಿತಿಯನ್ನು ರವಾನಿಸಿ ಎಂದು ಸೂಚಿಸಿದರಲ್ಲದೆ ರೈತರಿಗೆ ಅನುಕೂಲವಾಗುವಂತೆ ತೀವ್ರ ಬರ ಪ್ರದೇಶವೆಂದು ಘೋಷಿಸಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಕಂದಾಯ ಸಚಿವರ ಗಮನಕ್ಕೆ ತರಲಾಗುವುದು ಎಂದರು.ಜಗಳೂರು ತಾಲೂಕಿನಲ್ಲಿ ಯಾವುದೇ ನದಿ ಜಲ ಮೂಲ ವಿಲ್ಲ ಆದರೂ ಈ ಹಿಂದೆ ಅಧಿಕಾರಿಗಳು ಸರ್ವೆ ರಿಪೋರ್ಟ್ ಎಡ ವಟ್ಟೊ ಮಾಡಿದ್ದರೊ ಗೊತ್ತಿಲ್ಲ ನದಿ ಮೂಲವಿರುವ ಪಕ್ಕದ ಹೊನ್ನಾಳಿ ಯನ್ನು ತೀವ್ರ ಬರ ಪ್ರದೇಶ ಎಂದು ಸೇರಿಸಲಾಗಿದೆ ಆದರೆ ನಂಜುಂಡಪ್ಪ ವರದಿ ಪ್ರಕಾರ ಶಾಶ್ವತ ಬರ ಪ್ರದೇಶವಾದ ಜಗಳೂರು ದಾವಣಗೆರೆ ಜಿಲ್ಲೆಯಲ್ಲಿ ಪ್ರತಿ ಭಾರಿಯು ಬರ ಎದರಿಸುತ್ತದೆ ಆದರೂ ಮಧ್ಯಮ ಬರ ಪ್ರದೇಶದ ಪಟ್ಟಿಗೆ ಸೇರಿಸಿರುವುದು ಅಘಾತ ಉಂಟುಮಾಡಿದೆ ಈ ಕುರಿತು ಪರಿಶೀಲಿಸಲು ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ. ಕಂದಾಯ ಸಚಿವರ ಹಾಗೂ ಮುಖ್ಯಮಂತ್ರಿ. ಉಪಮುಖ್ಯಮಂತ್ರಿ ಇವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.ನಂತರ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಿಥುನ್ ಕಿಮವತ್ ಮಾತ ನಾಡಿ,ರಾಜ್ಯದಲ್ಲಿ 113 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳಾಗಿ ಘೋಷಣೆ ಮಾಡಲಾಗಿದ್ದು, ಜಗಳೂರು ತಾಲೂಕು ಸಹ ಪಟ್ಟಿಯಲ್ಲಿ ಇರುವುದ್ದರಿಂದ ತಾಲೂಕಿನಲ್ಲಿ 19 ಗ್ರಾಮಗಳ ಹೊಲಗಳಿಗೆ ತೆರಳಿ ಬೆಳೆ ಸಮೀಕ್ಷೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಮೇಲಾಧಿ ಕಾರಿಗಳಿಗೆ ವರದಿ ತಯಾರಿಸಿ ಕಳುಹಿಸಬೇಕಿದೆ ಆದ್ದರಿಂದ ತೋಟಗಾರಿಗೆ ಇಲಾಖೆ.ಕೃಷಿ ಇಲಾಖೆ ತಾಲೂಕು ಆಡಳಿತ ಜಂಟಿ ಸರ್ವೆ ಮಾಡಲಾಗುತ್ತಿದ್ದು, ನೈಜ್ಯ ಪರಿಸ್ಥಿತಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಲಾಗುವುದು ಅಲ್ಲದೆ ರೈತರಿಗೆ ಎನ್.ಡಿ.ಆರ್.ಎಫ್ ನಿರ್ದೇಶನದಂತೆ ಪರಿಹಾರವನ್ನು ಒದಗಿಸಲಾಗುತ್ತದೆ ಅಲ್ಲದೆ ಬೆಳೆ ವಿಮೆ ಮಾಡಿಸಿದವರಿಗೆ ಇನ್ಸ್ಯೂರೇನ್ಸ್ ಕಂಪನಿಯಿಂದ 25% ಮಧ್ಯಾಂತರ ಪರಿಹಾರ ವನ್ನು ನೀಡಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ತೋಟದಯ್ಯ,ಆರ್.ಐ ಧನಂಜಯ್, ಕೀರ್ತಿ. ಕೃಷಿ ಇಲಾಖೆ ಎ.ಡಿ.ಎ ಜೀವಿತಾ, ಪ್ರಸನ್ನ ಕುಮಾರ್, ವೆಂಕಟೇಶ್ ನಾಯ್ಕ್, ಶಾಸಕರ ಆಪ್ತ ಸಹಾಯಕರಾದ ಶಿವಕುಮಾರ್. ಪಲ್ಲಾಗಟ್ಟೆ ಶೇಖರಪ್ಪ. ಮುಖಂಡರಾದ ಸುಧೀರ್ ರೆಡ್ಡಿ.ಅನುಪ್ ರೆಡ್ಡಿ. ಜಗಳೂರು ಗೊಲ್ಲರಟ್ಟಿ ರಮೇಶ್.ಪ್ರಕಾಶ್ ರೆಡ್ಡಿ.ಹರೀಶ್ ಸೇರಿದಂತೆ ಅನೇಕರಿದ್ದರು.