ತೀವ್ರ ಕುತೂಹಲ ಕೆರಳಿಸಿದ್ದ ಉಪಕದನ ೪ರಲ್ಲಿ
ಬಿಜೆಪಿ, ಆರ್‌ಜೆಡಿ, ಠಾಕ್ರೆ ಬಣ ೧ ಕ್ಷೇತ್ರಗಳಲ್ಲಿ ಮುನ್ನಡೆ

ನವದೆಹಲಿ,ನ.೬-ತೀವ್ರ ಕುತೂಹಲ ಕೆರಳಿಸಿದ್ದ ದೇಶದ ೬ ರಾಜ್ಯಗಳ ೭ ವಿಧಾನಸಭೆಗೆ ನಡೆದ ಉಪಚುನಾವಣೆ ಮತದಾನ ಪ್ರಗತಿಯಲ್ಲಿದ್ದು ೪ ಕಡೆ ಬಿಜೆಪಿ ಆರ್ ಜೆಡಿ, ಶಿವಸೇನೆಯ ಉದ್ದವ್ ಠಾಕ್ರೆ ಬಣ, ಟಿಆರೆಸ್ ತಲಾ ಒಂದು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು ಸಂಜೆಯ ವೇಳೆಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.
ಆರಂಭದ ಸುತ್ತಿನಿಂದಲೂ ಮತ ಎಣಿಕೆ ಯಲ್ಲಿ ಬಿಜೆಪಿ, ಆರ್ ಜೆಡಿ ಮತ್ತು ಟಿಆರ್ ಎಸ್ ಅಭ್ಯರ್ಥಿಗಳು ಒಂದೊಂದು ಸುತ್ತಿನಲ್ಲಿಯೂ ಹಿಂದೆ ಮುಂದೆ ಆಗುತ್ತಿದ್ದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಎದೆ ಬಡಿತ ಹೆಚ್ಚು ಮಾಡಿತ್ತು
ಬಿಹಾರದ ಮೊಕಾಮ ಕ್ಷೇತ್ರದಲ್ಲಿ ಆರ್ ಜೆಡಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ತೆಲಂಗಾಣದ ಮುನುಗೋಡು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಿಂತ ಕೆಲವೇ ಮತಗಳಿಂದ ಆಡಳಿತಾರೂಢ ಟಿಆರ್ ಎಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.
ಹರಿಯಾಣ, ಒಡಿಶಾ, ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಗಳು, ಬಿಹಾರದಲ್ಲಿ ಆರ್ ಜೆಡಿ ಅಭ್ಯರ್ಥಿಗಳು ತೆಲಂಗಾಣದಲ್ಲಿ ಟಿಆರೆಸ್ ಮತ್ತು ಮಹಾರಾಷ್ಟ್ರದಲ್ಲಿ ಶಿವಸೇನೆ ಉದ್ದವ್ ಬಣದ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು ಗೆಲವುನ ಓಟದತ್ತ ಹೆಜ್ಜೆ ಹಾಕಿವೆ.
ದೇಶಾದ್ಯಂತ ಹಣದ ಹೊಳೆ ಹರಿದಿದ್ದ ತೆಲಂಗಾಣದಲ್ಲಿ ಆಡಳಿತಾರೂಧ ಟಿಆರೆಸ್ ಪಕ್ಷದ ಮುನುಗೋಡೆ ಕ್ಷೇತ್ರದಿಂದ ಕೂಸುಕುಂಟ್ಲ ಪ್ರಭಾಕರ್ ರೆಡ್ಡಿ ಮುನ್ನಡೆ ಸಾಧಿಸಿದ್ದಾರೆ.ಇಲ್ಲಿ ಬಿಜೆಪಿ ಮತ್ತು ಟಿಆರ್ ಎಸ್ ನಡುವೆ ಹಾವು ಎಣಿ ಆಟ ನಡೆದಿದೆ.
ಬಿಹಾರದಲ್ಲಿ ಮೈತ್ರಿ ಸರ್ಕಾರದ ಪಕ್ಷವಾದ ತೇಜಸ್ವಿ ಯಾದವ್ ಅವರ ಆರ್ ಜೆಡಿ, ಮೊಕಾಮಾ ಕ್ಷೇತ್ರದಲ್ಲಿ ನೀಲಂ ದೇವಿ ಗೆಲುವು ಸಾದಿಸಿದ್ದಾರೆ.
ಹರಿಯಾಣ ಆದಂಪುರ ಕ್ಷೇತ್ರದಲ್ಲಿ ಬಿಜೆಪಿ ಭವ್ಯಾ ಬಿಷ್ಣೋಯಿ, ಉತ್ತರ ಪ್ರದೇಶ ಗೋಲ ಗೋಕ್ರನಾಥ ಅಮನ್ ಗಿರಿ ಹಾಗು ಒಡಿಶಾ ಧಾಮನಗರ ಕ್ಷೇತ್ರದಿಂದ ಸೂರ್ಯಬಂಶಿ ಸೂರಜ್ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿವೆ.
ಮಹಾರಾಷ್ಟ್ರ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಶಿವಸೇನೆಯ ಉದ್ದವ್ ಠಾಕ್ರ ಣದ ರುತುಜಾ ರಮೇಶ್ ಲಟ್ಕೆ ಮುನ್ನಡೆ ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ
ಆರ್‌ಜೆಡಿ ಜೊತೆಗಿನ ಮೈತ್ರಿಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಎರಡೂ ಸ್ಥಾನಗಳನ್ನು ಆರ್ ಜಿಡಿಗೆ ಬಿಟ್ಟುಕೊಟ್ಟಿದೆ.
ಎಲ್ಲಾ ಕಡೆ ಆಡಳಿತಾರೂಢ ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ಮುನ್ನೆಡೆ ಸಾಧಿಸಿದ್ದು ಮಹಾರಾಷ್ಟ್ರದಲ್ಲಿ ಮಾತ್ರ ಶಿವಸೇನೆ ಉದ್ದವ್ ಬಣದ ಅಭ್ಯರ್ಥಿ ಹಾಗು ಒಡಿಶಾದಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಗಳಿಸಿದ್ದಾರೆ
ವಿಧಾನಸಭೆ ಉಪ ಚುನಾವಣೆ ಫಲಿತಾಂಶ, ಪ್ರಸ್ತುತ ರಾಜ್ಯ ಸರ್ಕಾರಗಳ ಆಡಳಿತ ವಿರೋಧಿ ಅಲೆ ಇದ್ದರೂ ಕುಟುಂಬದ ಪರಂಪರೆಗಾಗಿ ಮತ್ತು ತೆಲಂಗಾಣ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಪ್ರತಿಷ್ಠೆಯ ಕದನವೆಂದು ಪರಿಗಣಿಸಲಾಗಿದೆ. ನವಂಬರ್ ೩ ರಂದು ಮತದಾನ ನಡೆದಿತ್ತು.
೨೦೨೪ ರ ಲೋಕಸಭೆ ಚುನಾವಣೆಗೆ ಪ್ರಾದೇಶಿಕ ಪಕ್ಷಗಳು ಐಕ್ಯರಂಗವನ್ನು ಹಾಕುವುದರೊಂದಿಗೆ ಕೇವಲ ಒಂದೂವರೆ ವರ್ಷ ಬಾಖಿ ಇದ್ದು ಈ ಫಲಿತಾಂಶ ಕುತೂಹಲ ಕೆರಳಿಸಿದೆ.