ತೀವ್ರಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಸೂಚನೆ

ಕಲಬುರಗಿ,ಸೆ.02:ವಿಶ್ವಬ್ಯಾಂಕ್ ನೆರವಿನ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆಯಡಿ ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ. 39 ಬಸವ ನಗರದಲ್ಲಿ (ಓಹೆಚ್‍ಟಿ/ಇಎಲ್‍ಎಸ್‍ಆರ್) ಔಊಖಿ/ಇಐSಖ 20 ಲಕ್ಷದ ಲೀಟರ್ ಮೇಲುಸ್ಥರದ ನೀರು ಸಂಗ್ರಹಗಾರ ಘಟಕದ ನಿರ್ಮಾಣಕ್ಕಾಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ ಅವರು ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಸಂಬಂಧಪಟ್ಟ ಅಧಿಕಾರಿ ಹಾಗೂ ಮೆ|| ಎಲ್ ಆಂಡ್ ಟಿ ಕಂಪನಿಯ ಅಧಿಕಾರಿಗಳು ಈ ನೀರು ಸಂಗ್ರಹಣಾ ಘಟಕದ ಕಾಮಗಾರಿಯನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಸೂಚಿಸಿದರು.
ಕೆಯುಐಡಿಎಫ್‍ಸಿಯ ಯೋಜನಾ ಅನುಷ್ಠಾನ ಘಟಕದ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಕುಮಾರ ಬಿ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಇದು 20 ಲಕ್ಷ ಲೀಟರ್ ನೀರು ಸಂಗ್ರಹಣ ಘಟಕವಾಗಿದ್ದು, ಸುಮಾರು 3 ಸಾವಿರ ಕುಟುಂಬಗಳಿಗೆ ನೀರು ಸರಬರಾಜು ಮಾಡುವ ಸಾಮಥ್ರ್ಯ ಹೊಂದಿದ್ದು, ಈ ಕಾಮಗಾರಿಯನ್ನು ಒಂದು ವರ್ಷದೊಳಗಾಗಿ ಪೂರ್ಣಗೊಳಿಸಿ ನೀರು ಸರಬರಾಜು ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗುವುದು ಎಂದರು.
ಬಸವನಗರದ ನೀರು ಸಂಗ್ರಹಣ ಘಟಕ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ವಾರ್ಡ್ ನಂ. 39ರ ಮಹಾನಗರ ಪಾಲಿಕೆ ಚುನಾಯಿತ ಸದಸ್ಯೆ ಕುಮಾರಿ ರೇಣುಕಾ, ಕಾಂಗ್ರೆಸ್ ಮುಖಂಡ ಲಿಂಗರಾಜ ಕಣ್ಣಿ, ಕೆಯುಐಡಿಎಫ್‍ಸಿಯ ಕಾರ್ಯಪಾಲಕ ಅಭಿಯಂತರ ಧನಂಜಯ ಲದ್ದೆ, ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್, ಸಹಾಯಕ ಅಭಿಯಂತರ ಗಿರೀಶ್ ವಿ. ಗದ್ವಾಲ್, ಕೆಯುಐಡಿಎಫ್‍ಸಿ ಸ್ಮೇಕ್ ಸಂಸ್ಥೆಯ ಸದಾನಂದ ಕಮಟಿ, ಮೆ|| ಎಲ್ ಆಂಡ್ ಟಿ ಕಂಪನಿ ಕಾಮಗಾರಿಯ ವ್ಯವಸ್ಥಾಪಕ ಕುಮಾರೇಸನ್ ಅವರು ಉಪಸ್ಥಿತರಿದ್ದರು.
ಮೆ|| ಎಲ್ ಆಂಡ್ ಟಿ ಕಂಪನಿಯ ಸಾಮಾಜಿಕ ತಜ್ಞರಾದ ಲಿಂಗರಾಜ ಹೀರಾ ಅವರು ಕಾರ್ಯಕ್ರಮದ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.