ತೀರ್ಥಂಕರರ ಸ್ಥಾಪನಾ ದಿನದ ಉತ್ಸವ

ಚನ್ನಮ್ಮನ ಕಿತ್ತೂರ,ಮೇ10: ಪುಣ್ಯಕ್ಷೇತ್ರ ಕಸಮಳಗಿಯಲ್ಲಿರುವ (ಕೇಸರಮಳಗಿ) ಶ್ರೀ 1008 ವರಸಿದ್ಧಿ ಪಾಶ್ರ್ವನಾಥ ದಿಗಂಬರ ಜೈನ ಮಂದಿರದಲ್ಲಿ ಭವ್ಯ ಮರುಸ್ಥಾಪನಾ ಉತ್ಸವವನ್ನು ದಿ: 12 ರಂದು ಮುಂಜಾನೆ ಸಮಯ 8 ಗಂಟೆಗೆ ಆಯೋಜಿಸಲಾಗಿದೆ. ಆ ನಿಮಿತ್ಯ “ನವಗ್ರಹ ದೋಷ” ನಿವಾರಕ ಮತ್ತು “ಸರ್ವಕಾರ್ಯಸಿದ್ಧಿ” ವಿಧಾನ ಆಯೋಜಿಸಲಾಗಿದೆ. ಕಾರಣ ಎಲ್ಲ ಜೈನ ಶ್ರಾವಕ-ಶ್ರಾವಕೀಯರು ಉಪಸ್ಥಿತರಿದ್ದು ಇದರ ಲಾಭ ಪಡೆದುಕೊಳ್ಳಬೇಕೆಂದು ಪಾಶ್ರ್ವನಾಥ ದಿಗಂಬರ ಜೈನ ಅಭಿವೃದ್ದಿ ಕಮೀಟಿಯವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ: 9448114230, 9448191108, 9845442871 ಸಂಪರ್ಕಿಸಬಹುದು.