ತಿಹಾರ್ ಜೈಲಿನಲ್ಲಿ ಯಾಸಿನ್ ಸತ್ಯಾಗ್ರಹ

ನವದೆಹಲಿ, ಜು.೨೩- ತಮ್ಮ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂದು ಆರೋಪಿಸಿ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ತಿಹಾರ್ ಜೈಲಿನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.
ಜೈಲಿನ ಉನ್ನತ ಅಧಿಕಾರಿಗಳು ಹಲವಾರು ಬಾರಿ ಮನವಿ ಮಾಡಿದರೂ ಮುಷ್ಕರ ಕೈಬಿಡದೆ ಉಪವಾಸ ಮುಷ್ಕರ ಮುಂದುವರಿಸಿದ್ದಾರೆ.
ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಮುಖ್ಯಸ್ಥ ಯಾಸಿನ್ ಮಲ್ಲಿಕ್ ಗೆ ದೆಹಲಿಯ ರಾಷ್ಟ್ರೀಯ ತನಿಖಾ ಸಂಸ್ಥೆ ವಿಶೇಷನ್ಯಾಯಾಲ ಮೇ ೨೫ ರಂದು ಜೀವಾವಧಿ ಶಿಕ್ಷೆ ವಿಧಿಸಿದೆ. ಎನ್ ಐಎ ದಾಖಲಿಸಿದ ೨೦೧೭ ರ ಭಯೋತ್ಪಾದನೆ-ಧನಸಹಾಯ ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೧೯ ರ ಆರಂಭದಲ್ಲಿ ಬಂಧಿಸಲಾಗಿತ್ತು
ಪ್ರತ್ಯೇಕತಾವಾದಿ ನಾಯಕ ಪ್ರಸ್ತುತ ಎರಡು ಪ್ರತ್ಯೇಕ ಪ್ರಕರಣಗಳನ್ನು ಎದುರಿಸುತ್ತಿದ್ದು – ಅಪಹರಣ ಮತ್ತು ಕೊಲೆ ಪ್ರಕರಣ ಸೇರಿದೆ.ಉಪವಾಸ ಸತ್ಯಾಗ್ರಹ ಪ್ರಾರಂಭಿಸುವ ಅವರ ನಿರ್ಧಾರ ವಿಚಾರಣೆಯ ಕಾನೂನು ಕ್ರಮವನ್ನು ಬದಲಾಯಿಸುವ ಹತಾಶ ಪ್ರಯತ್ನವೆಂದು ಪರಿಗಣಿಸಲಾಗಿದೆ.
ತಿಹಾರ್ ಜೈಲಿನ ಜೈಲು ಸಂಖ್ಯೆ ೭ ರಲ್ಲಿ. ಹೊರ ಪ್ರಪಂಚದಿಂದ ಬೇರ್ಪಟ್ಟು, ಸುಮಾರು ೧೩,೦೦೦ ಕೈದಿಗಳಿಂದ ದೂರವಾಗಿ ಜೈಲಿನೊಳಗೆ ಏಕಾಂಗಿಯಾಗಿ ಇರಿಸಲಾಗಿದೆ. ತಿಹಾರ್ ಕಾರಾಗೃಹದ ಜೈಲು ಸಂಖ್ಯೆ ೭ ಯಾವಾಗಲೂ ಪ್ರಚಾರದಲ್ಲಿದೆ ಏಕೆಂದರೆ ಇದು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ,ಮಾಜಿ ಸಚಿವ ಎ ರಾಜಾ, ಸಹಾರಾ ಮುಖ್ಯಸ್ಥ ಸುಬ್ರತಾ ರಾಯ, ಕ್ರಿಶ್ಚಿಯನ್ ಮೈಕೆಲ್ ಸೇರಿದಂತೆ ಹಲವಾರು ಉನ್ನತ ಕೈದಿಗಳನ್ನು ಇರಿಸಿರುವುದರಿಂದ ತಿಹಾರ್ ಜೈಲಿನ ಜೈಲು ಸಂಖ್ಯೆ ೭ ಯಾವಾಗಲೂ ಸುದ್ದಿಯಲ್ಲಿದೆ