
ತಿರುಮಲ,ಸೆ.೭-ತಿರುಮಲದಲ್ಲಿ ಮತ್ತೊಂದು ಚಿರತೆ ಸಿಕ್ಕಿಬಿದ್ದಿದೆ. ನಾಲ್ಕು ದಿನಗಳ ಹಿಂದೆ ಈ ಚಿರತೆ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಅಲಿಪಿರಿ-ತಿರುಮಲ ನಡಿಗೆ ಮಾರ್ಗದ ಹೊಸ ಮಂಟಪದಲ್ಲಿ ಹಾಕಲಾಗಿದ್ದ ಬೋನಿನಲ್ಲಿ ಸಿಕ್ಕಿಬಿದ್ದಿದೆ. ಇದರಿಂದಾಗಿ ಈ ಎರಡು ತಿಂಗಳ ಅವಧಿಯಲ್ಲಿ ಒಟ್ಟು ಐದು ಚಿರತೆಗಳು ಅರಣ್ಯಾಧಿಕಾರಿಗಳ ಬಲೆಗೆ ಬಿದ್ದಿವೆ ಎಂದು ಮೂಲಗಳು ತಿಳಿಸಿವೆ
ಇತ್ತೀಚೆಗಷ್ಟೇ ನೆಲ್ಲೂರು ಮೂಲದ ಆರು ವರ್ಷದ ಬಾಲಕಿ ಅಲಿಪಿರಿ ವಾಕ್‌ವೇಯಲ್ಲಿ ಚಿರತೆ ದಾಳಿಗೆ ಬಲಿಯಾದದ್ದು ಗೊತ್ತೇ ಇದೆ. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ತಿರುಮಲ ಬೆಟ್ಟದ ಹಲವೆಡೆ ಬೋನುಗಳನ್ನು ಇಟ್ಟು ಚಿರತೆಗಳನ್ನು ಹಿಡಿಯುತ್ತಿದ್ದಾರೆ.