ತಿರುಮಲದಲ್ಲಿ ಕೈವಾರ ತಾತಯ್ಯ ಸ್ಮರಣೆ

ಕೋಲಾರ,ಮೇ,೨೫:ತಿರುಮಲ ತಿರುಪತಿ ದೇವಸ್ಥಾನಂ, ತಿರುಪತಿಯ ಬೆಟ್ಟದ ಮೇಲಿರುವ ನಾದನೀರಾಜನಂ ಸಾಂಸ್ಕೃತಿಕ ವೇದಿಕೆಯಲ್ಲಿ ಕೈವಾರದ ಚಿಣ ತಾತಯ್ಯನವರ ೧೮೮ ನೇ ಆರಾಧನಾ ಮಹೋತ್ಸವದ ಅಂಗವಾಗಿ ವಿಶೇಷ ನಾಮ ಸಂಕೀರ್ತನೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ನಾಮ ಸಂಕೀರ್ತನಾ ಸೇವೆಯನ್ನು ಕೈವಾರ ಕ್ಷೇತ್ರದ ಶ್ರೀಯೋಗಿನಾರೇಯಣ ನಾದಸುಧಾರಸ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ರವರು ನಡೆಸಿಕೊಟ್ಟರು.
ಹಲವಾರು ಸದ್ಗುರು ತಾತಯ್ಯನವರ ಕೀರ್ತನೆಗಳನ್ನು ಭಕ್ತಿಭಾವದಿಂದ ಹಾಡಿದರು. ಇವರಿಗೆ ಪಕ್ಕವಾದ್ಯದಲ್ಲಿ ವಿದ್ವಾನ್ ವಿ.ಗೋವರ್ಧನ್ ಪಿಟೀಲು, ವಿದ್ವಾನ್ ಸಿ.ಚೆಲುವರಾಜ್ ಮೃದಂಗ, ವಿದ್ವಾನ್ ಬಿ.ರಾಜಶೇಖರ್ ಮೋರ್ಸಿಂಗ್ ಹಾಗೂ ವಿದ್ವಾನ್ ಎಸ್.ಎನ್.ಜಗದೀಶ್ ಕುಮಾರ್ ಹಾಗೂ ವಿದ್ವಾನ್ ಬಿ.ಎಸ್. ಭಾರ್ಗವರಾಮ್ ರವರು ಸಹಗಾಯನ, ತಾಳದಲ್ಲಿ ಸಹಕರಿಸಿದರು. ನಾದನೀರಾಜನಂ ವೇದಿಕೆಯಲ್ಲಿ ಸದ್ಗುರು ತಾತಯ್ಯನವರ ಮೂರ್ತಿಯನ್ನು ಟಿಟಿಡಿ ಮಂಡಳಿಯವರು ಪ್ರತಿಷ್ಠಾಪಿಸಿರುವುದನ್ನು ಸ್ಮರಿಸಬಹುದು.