ತಿರುಚಿದ ಆಡಿಯೋ ವೈರಲ್ ಮಾಡಿದ್ದು ಅವರ ಸಣ್ಣತನ ತೋರಿಸುತ್ತದೆ

ರಾಯಚೂರು,ಏ.೦೪-ನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾದ ಡಾ.ಶಿವರಾಜ ಎಸ್ ಪಾಟೀಲ್ ವಿರುದ್ಧ ಕುತಂತ್ರ ಮಾಡಿ ಎಲೆಕ್ಷನ್ ಸಂದರ್ಭದಲ್ಲಿ ಯಾವದೋ ತಿರುಚಿದ ವಿಡಿಯೋ ವೈರಲ್ ಮಾಡಿರುವುದು ಸುಳ್ಳು ಎಂದು ಬಿಜೆಪಿ ಮುಖಂಡರಾದ ಜಿ. ಶಿವರೆಡ್ಡಿ ಪತ್ರಿಕಾ ಹೇಳಿಕೆಯನ್ನು ನೀಡಿದ್ದಾರೆ.
ಇದು ಪ್ರಜಾಪ್ರಭುತ್ವ ಇಲ್ಲಿ ನಿರ್ಣಯ ಮಾಡುವುದು ಚುನಾವಣೆ ಇಂತಹ ಸಂಧರ್ಭದಲ್ಲಿ ನೇರವಾಗಿ ಶಾಸಕರನ್ನು ಎದುರಿಸದ ಎದುರಾಳಿಗಳು ತಿರುಚಿದ ಆಡಿಯೋ ವೈರಲ್ ಮಾಡಿರುವುದು ಖಂಡನೀಯ ಇದು ಚುನಾವಣೆ ಗಿಮಿಕ್ ಇದನ್ನ ಯಾರು ಮಾಡಿಸಿದ್ದಾರೆ ಎಂದು ಕ್ಷೇತ್ರದ ಜನತೆ ಅರ್ಥ ಮಾಡಿಕೊಂಡಿದ್ದಾರೆ ಎಂದರು.
ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಅರಗಿಸಿಕೊಳ್ಳದ ಕೆಲವು ವಿರೋಧಿಗಳು ಶಾಸಕರ ಯಾವುದೋ ಒಂದು ತಿರುಚಿದ ಸುಳ್ಳು ಆಡಿಯೋ ವೈರಲ್ ಮಾಡಿದ್ದರಿಂದ ಯಾವುದೇ ತೊಂದರೆಯಾಗಿಲ್ಲ ಇದರಲ್ಲಿ ವೈರಲ್ ಮಾಡಿದವರ ಸಣ್ಣತನ ತೋರಿಸುತ್ತದೆ ಎಂದರು.
ಡಾ.ಶಿವರಾಜ್ ಪಾಟೀಲ್ ಅವರು ೧೦ವರ್ಷ ಶಾಸಕರಾಗಿ ಅಧಿಕಾರ ಮಾಡಿರುವುದು ಕ್ಷೇತ್ರದ ಜನತೆಗೆ ಖುಷಿ ತಂದಿದೆ, ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ, ಶಾಸಕರು ಯಾವುದೇ ಅಧಿಕಾರಿಗಳ ಜೊತೆ ಕಿರಿಕ್ ಆಗಲಿ ಇನ್ನಿತರ ತೊಂದರೆ ನೀಡಿರುವುದಿಲ್ಲ, ಹಾಗಾಗಿ ಜನ ಶಾಸಕರ ಪರವಾಗಿ ಇದಾರೇ ಎಂದು ಹೇಳಿದರು.