ತಿರುಗಿ ನೋಡದ ಪಂಚಾಯತ ಅಧಿಕಾರಿಗಳು

ದಲಿತರ ಕಾಲೋನಿ ಅಭಿವೃದ್ಧಿ ಮರಿಚಿಕೆ ಪಂಚಾಯತ್ ನಿರ್ಲಕ್ಷ್ಯ
ಲಿಂಗಸೂಗೂರು.ನ.೧೭- ತಾಲೂಕಿನ ಈಚನಾಳ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ೨ನೇ ವಾರ್ಡ್ ಗಳಲ್ಲಿನ ರಸ್ತೆಗಳ ಮೇಲೆ ಚರಂಡಿ ಇಲ್ಲದೆ ನೀರು ಹರಿಯುತ್ತಿದ್ದು ರಸ್ತೆಯ ಪಕ್ಕದಲ್ಲಿ ಇರುವ ನಲ್ಲಿ ನೀರನ್ನು ದಿನನಿತ್ಯ ಇಲ್ಲಿರುವ ಜನರು ಕುಡಿಯುತ್ತಿದ್ದು ಅಲ್ಲಿನ ವಾಸದ ಜನರು ತಿರುಗಾಡಲು ತೊಂದರೆ ಯಾಗುತ್ತಿದೆ ಎಂದು ಸಾರ್ವಜನಿಕರು ಸಾಕಷ್ಟು ಸಲ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಹೇಳಿದರು.ಕ್ಯಾರೇ ಅನ್ನುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಮದ ೨ನೇ ವಾರ್ಡ್ ಎಸ್‌ಸಿ ವಠಾರದ ದುರ್ಗಾದೇವಿ ದೇವಸ್ಥಾನ ಹಿಂದುಗಡೆ ರಸ್ತೆಯ ಮೇಲೆ ಸಂಪೂರ್ಣ ನೀರು ನಿಲ್ಲುವುದರಿಂದ ತಿರುಗಾಡದಿಕ್ಕೆ ಆಗುತ್ತಿಲ್ಲ. ಅದರ ಹತ್ತಿರದ ಎಸ್‌ಟಿ ವಠಾರದಿಂದ ಮುಖ್ಯ ರಸ್ತೆಗೆ ಬರುವಾಗ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದು, ಪ್ರಾಥಮಿಕ ಶಾಲೆಯ ಹಿಂದುಗಡೆ ಚರಂಡಿ ವ್ಯವಸ್ಥೆ ಇಲ್ಲದೆ ಸಂಪೂರ್ಣವಾಗಿ ರಸ್ತೆಯ ಮೇಲೆ ನೀರು ನಿಂತಿರುವುದರಿಂದ ಇಲ್ಲಿನ ಜನತೆಗೆ ತಿರುಗಾಡದ ಪರಿಸ್ಥಿತಿ ಇರುತ್ತದೆ.
ಕುಂಬಾರ ಓಣಿಯಲ್ಲಿ ಚರಂಡಿ ಸಮಸ್ಯೆಯಿಂದ ದಿನನಿತ್ಯವು ಜನರು ಜಗಳ ಮಾಡುತ್ತ ಕಾಲ ಕಳೆಯುತ್ತಿದ್ದಾರೆ, ಅದರಂತೆ ಕುಂಬಾರದೊಡ್ಡಿಯಲ್ಲಿ ಸುಮಾರು ೬ ತಿಂಗಳ ಕಳೆದರೂ ಇಲ್ಲಿವರೆಗೂ ನೀರಿಲ್ಲದೆ ಸಮೀಪದ ಬಾವಿಗೆ ಹೋಗಿ ನೀರು ತೆಗೆದುಕೊಂಡು ಬರುತ್ತಿದ್ದಾರೆ, ಸಂಪೂರ್ಣವಾಗಿ ಗ್ರಾಮದ ಹಲವಾರು ವಠಾರಗಳಲ್ಲಿ ಇದೆ ಪರಿಸ್ಥಿತಿ ಇರುವುದರಿಂದ ಗ್ರಾಮದ ಅಭಿವೃದ್ಧಿಗೆ ಇಲ್ಲಿನ ಜನಪ್ರತಿನಿದಿನಗಳು ಕಾಳಜಿ ವಹಿಸುತ್ತಿಲ್ಲ ಎನ್ನುವುದು ಎದ್ದು ಕಾಣುತ್ತಿದೆ ಅದರಂತೆ ಗ್ರಾಮ ಪಂಚಾಯತ್ ಅಧಿಕಾರಿಗಳು ಕೂಡ ಮುಖರಾಗಿದ್ದಾರೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸುಮಾರು ವರ್ಷಗಳಿಂದ ನಮ್ಮ ವಠಾರದ ಸಮಸ್ಯೆಗಳ ಬಗ್ಗೆ ಸಾಕಷ್ಟು ಸಲ ಗ್ರಾಮ ಪಂಚಾಯತ ಅಧಿಕಾರಿಗೆ ತಿಳಿಸಿದರು ಪ್ರಯೋಜನೆ ಇಲ್ಲಾ, ಇಲ್ಲಿನ ಜನಪ್ರತಿನಿದಿಗಳ ನಿರ್ಲಕ್ಷವೆ ಇದಕ್ಕೆ ಕಾರಣ, ಇದಕ್ಕೆ ಸ್ಪಂದನೆ ನೀಡದಿದ್ದರೆ ಮುಂದಿನ ದಿನ ಮೇಲಾಧಿಕಾರಿಗಳ ಮೊರೆ ಹೋಗಬೇಕಾಗುತ್ತದೆ.