ತಿಮ್ಮಪ್ಪನ ಸನ್ನಿಧಿಯಲ್ಲಿ ಆದಿಪುರುಷ್  ಟ್ರೇಲರ್ ಅನಾವರಣ

 ’ಭಿಕ್ಷಾಂದೇಹಿ ಎನ್ನುತ್ತಾ ರಾವಣ ಬರುವುದು. ಸೀತೆ ಅಪಹರಿಸುವುದು. ಬರ‍್ತಾ ಇದ್ದೀನಿ ರಾವಣ. ನಿನ್ನ ಅನ್ಯಾಯದ ಹತ್ತು ತಲೆಗಳನ್ನು ತುಳಿದುಹಾಕಲು. ನನ್ನ ಜಾನಕಿ ರಕ್ಷಿಸಿಕೊಳ್ಳಲು. ನನ್ನ ಆಗಮನ, ಅಧರ್ಮದ ವಿದ್ವಾಂಸಕ್ಕಾಗಿ. ಭರತಖಂಡದಲ್ಲಿ ಪರಸ್ತ್ರೀ ಮೇಲೆ ಕೈ ಹಾಕಬೇಕು ಎಂದು ಕೊಳ್ಳುವ ದುಷ್ಟರಿಗೆ ನಿಮ್ಮ ಪೌರುಷ ಪರಾಕ್ರಮ ನೆನಪಾಗಿ, ಬೆನ್ನು ಮೂಳೆ ಮುರಿಯಬೇಕು. ಹೋರಾಡುವಿರಾ? ಎಂದು ಹನುಮಂತನಿಗೆ ರಾಮ ಹೇಳುವುದು. ಪಾಪ ಎಷ್ಟು ನಿಜವಾಗಿದ್ದರೂ, ಅಂತಿಮ ವಿಜಯ ಸತ್ಯದ್ದೆ’  ಎನ್ನುವ 2.20 ನಿಮಿಷದ ತುಣುಕುಗಳು ಚಿತ್ರ ನೋಡುವಂತೆ ಮಾಡಿದೆ.

 ’ಆದಿಪುರುಷ್’ ಚಿತ್ರದ ಟ್ರೇಲರ ದೇಗುಲನಾಡು ತಿರುಪತಿಯಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ನೋಡುಗರನ್ನು ವಿಸ್ಮಯ ಲೋಕಕ್ಕೆ ಕರೆದುಕೊಂಡು ಹೋಗಿದ್ದು, ಅಭೂತಪೂರ್ವ ಉತ್ಸಾಹ  ಹುಟ್ಟು ಹಾಕಿದೆ.

ರಾಷ್ಟ್ರ ಪ್ರಶಸ್ತಿ ವಿಜೇತ ಓಂ ರಾವುತ್ ನಿರ್ದೇಶನದಲ್ಲಿ, ’ಟಿ’ ಸೀರೀಸ್‌ನ ಭೂಷಣ್‌ಕುಮಾರ್ ನಿರ್ಮಾಣ ಮಾಡಿದ್ದಾರೆ. ವಾಲ್ಮಿಕಿ ಬರೆದ ರಾಮಾಯಣದ ಅಂಶಗಳನ್ನು ಚಿತ್ರದಲ್ಲಿ ಬಳಸಲಾಗಿದೆ.

 ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿಸನೂನ್, ರಾವಣನಾಗಿ ಸೈಫ್‌ಆಲಿಖಾನ್, ಹನುಮಂತನಾಗಿ ದೇವದತ್ತನಾಗೆ ಉಳಿದಂತೆ ಸನ್ನಿಸಿಂಗ್, ವತ್ಸಲ್‌ಸೇತ್, ಸೋನಾಲ್‌ಚೌಹಾಣ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಸಾಹಿತ್ಯ ಡಾ.ಎನ್.ನಾಗೇಂದ್ರಪ್ರಸಾದ್-ಪ್ರಮೋದ್‌ಮರವಂತೆ-ಕವಿರಾಜ್, ಸಂಭಾಷಣೆ ರಘುನಿಡುವಳ್ಳಿ, ಡಬ್ಬಿಂಗ್ ನಿರ್ವಹಣೆ ರಾಘವೇಂದ್ರನಾಯಕ್, ಸಂಗೀತ ಅಜಯ್-ಅತುಲ್, ಛಾಯಾಗ್ರಹಣ ಕಾರ್ತಿಕ್‌ಪಳನಿ ಅವರದಾಗಿದೆ. ಸಿನಿಮಾವು ಜೂನ್ 16ರಂದು ವಿಶ್ವದಾದ್ಯಂತ ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ 3D ಮಾದರಿಯಲ್ಲಿ ತೆರೆಗೆ ಬರುತ್ತಿದೆ.