ತಿಪ್ಪೆ ಗುಂಡಿಗಳ ಮಧ್ಯದಲ್ಲಿ ಗ್ರಾ.ಪಂ.ಗ್ರಂಥಾಲಯ !

ಗುರುಮಠಕಲ್,ನ.22-ಸಕಲ ಜೀವ ಚರಾಚರಗಳಲ್ಲಿ ಮಾನವ ಜನ್ಮ ಬಹು ಶ್ರೇಷ್ಠವಾದದ್ದು ಎಂದು ಹರಿದಾಸರು, ಶರಣು, ಸಂತರು ಹೇಳಿರುವುದು ನಾವು ಅನೇಕ ಗ್ರಂಥಗಳನ್ನು ಓದಿ ಜ್ಞಾನವನ್ನು ಸಂಪಾದಿಸಿ ಕೊಳ್ಳಲು ಮತ್ತು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸರ್ಕಾರವು ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ.
ಆದರೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಗ್ರಾಮ ಪಂಚಾಯತ ಗ್ರಂಥಾಲಯ ಚಂಡ್ರಿಕಿಯ ಸುತ್ತಮುತ್ತಲ್ಲಿನ ಪರಿಸರÀ ಗಮನಿಸಿದರೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿದಂತೆ ಇಲ್ಲ. ಈ ಗ್ರಂಥಾಲಯವು ಸುಮಾರು 1983ರಲ್ಲಿ ಪ್ರಾರಂಭವಾಗಿದ್ದು. 1988ರಲ್ಲಿ ಮಂಡಲ ಕೇಂದ್ರ ಗ್ರಂಥಾಲಯವೆಂದು ನಾಮಕರಣ ಮಾಡಲಾಗಿದೆ. 21-06-2019 ರಂದು ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಚಂಡ್ರಿಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದಾಗ ಗ್ರಂಥಾಲಯ ಕ್ಕೆ ಸ್ವಂತ ಕಟ್ಟಡ ಮಂಜೂರು ಮಾಡಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಚಂಡ್ರಿಕಿ ಎಂದು ಮರು ನಾಮಕರಣ ಮಾಡಿದರು. ಈಗ ಗ್ರಂಥಾಲಯದಲ್ಲಿ ಸುಮಾರು 6228 ಪುಸ್ತಕಗಳು ಇದ್ದು, ಸುಮಾರು 608 ಸದಸ್ಯರನ್ನು ಒಳಗೊಂಡಿರುವ ಈ ಗ್ರಂಥಾಲಯವು ಸಾರ್ವಜನಿಕರು ವಿದ್ಯಾರ್ಥಿಗಳು ಬಂದು ಕುಳಿತು ಕೊಂಡು ಓದುವುದಕ್ಕೆ ಅನಕೂಲವಾಗಿದೆ. ಆದರೆ ಗ್ರಂಥಾಲಯದ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಯಿಂದ ಕೂಡಿಲ್ಲ. ತಿಪ್ಪೆಯ ಗುಂಡಿಗಳ ಮಧ್ಯದಲ್ಲಿ ಹಂದಿಗಳು ತಿರುಗಾಡುವುದು ಮತ್ತು ಹೊಲಸು ನಾರುತ್ತಿರುವ ಈ ಪರಿಸರದಲ್ಲಿ ವಿಧ್ಯಾ ರ್ಥಿಗಳು ಬಂದು ಓದುವುದಕ್ಕೆ ಬಹಳಷ್ಟು ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಗ್ರಂಥಾಲಯ ಮೇಲ್ವಿಚಾರಕ ರಾಜಶೇಖರ ಕನ್ಕಿ ಚಂಡ್ರಿಕಿ ಅವರು ತಿಳಿಸಿದರು. ಸಂಬಂಧಪಟ್ಟವರು ಈಗಲಾದರೂ ಗ್ರಂಥಾಲಯದ ಸುತ್ತಮುತ್ತಲ್ಲಿನ ಪರಿಸರದ ಸ್ವಚ್ಛಗೊಳಿಸಿ ಓದುಗರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.

ಸ್ವಚ್ಛತೆಗೆ ಆದ್ಯತೆ ನೀಡಬೇಕು
ಚಂಡ್ರಕಿÀ ಗ್ರಾಮದಲ್ಲಿ ಗ್ರಂಥಾಲಯ ಇದ್ದು ಇಲ್ಲದಂತಾಗಿದೆ. ಓದಬೇಕು ಎಂಬ ಹವ್ಯಾಸ ಇದ್ದರು ಕೂಡ ಗ್ರಂಥಾಲಯದ ಬಳಿಗೆ ಹೊಗಲು ಮನಸ್ಸು ಬರುತ್ತಿಲ್ಲ. ಕಾರಣ ಅಲ್ಲಿಗೆ ಹೋಗಲು ಸರಿಯಾದ ದಾರಿ ಇಲ್ಲ. ಗ್ರಂಥಾಲಯದ ಸುತ್ತಮುತ್ತಲು ತಿಪ್ಪೆಯ ಗುಂಡಿಗಳು ಇರುವುದರಿಂದ ಗಬ್ಬು ವಾಸನೆ ಮಧ್ಯೆ ಕುಳಿತು ಓದಲು ಆಗುವುದಿಲ್ಲ. ಈ ಕಾರಣಕ್ಕಾಗಿ ಸಂಬಂಧಪಟ್ಟವರು ಗ್ರಂಥಾಲಯದ ಸುತ್ತಮುತ್ತಲ್ಲಿನ ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡುವುದರ ಮೂಲಕ ಓದುಗರಿಗೆ ಅನುಕೂಲ ಮಾಡಿಕೊಡಬೇಕು.
-ರಾಮಲು ಬಡಿಗೇರ, ಚಂಡ್ರಕಿ