ತಿಪ್ಪೆಗುಂಡಿಯಲ್ಲಿ ಔಷಧಿ: ಕ್ರಮಕ್ಕೆ ಒತ್ತಾಯ

ರಾಯಚೂರು, ಏ.೧೭- ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ ಸ್ತ್ರೀಯರಿಗೆ ಹಾಗೂ ಮಕ್ಕಳಿಗೆ ವಿತರಿಸುವಂತ ಔಷಧಿಗಳನ್ನು ತಿಪ್ಪೆಗುಂಡಿಯಲ್ಲಿ ಎಸದಿರುವ ಘಟನೆ ತಾಲೂಕಿನ ಹೊಸ ಗೋನವಾರ ಗ್ರಾಮದಲ್ಲಿ ನಡೆದಿದೆ.
ಔಷಧಿಗಳನ್ನು ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಹಂಚದೆ ತಿಪ್ಪೆಗುಂಡಿಯಲ್ಲಿ ಎಸೆದಿರುವುದು ದುರದೃಷ್ಟಕರ ಸಂಗತಿ.
ಔಷಧಿಗಳನ್ನು ತಿಪ್ಪೆಗುಂಡಿಯಲ್ಲಿ ಎಸೆದಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಬಶುರುದ್ದೀನ್ ಸಿಡಿಪಿಒ ಗೆ ಒತ್ತಾಯಿಸಿದರು.