ತಿಪ್ಪೆಗುಂಡಿಗಳಾಗಿವೆ ಸಾರ್ವಜನಿಕ ಶೌಚಾಲಯಗಳು

ಲಕ್ಷ್ಮೇಶ್ವರ,ಜೂ24: ಸರ್ಕಾರ ಬಯಲು ಶೌಚ ಮುಕ್ತ ಮಾಡುವ ಉದ್ದೇಶದಿಂದ ಪ್ರತಿ ಗ್ರಾಮಗಳಲ್ಲಿ ವೈಯಕ್ತಿಕ ಶೌಚಾಲಯ ಹಾಗೂ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಬಯಲು ಶೌಚ ಮುಕ್ತ ಗ್ರಾಮಗಳನ್ನಾಗಿ ಮಾಡಲು ಲಕ್ಷಾಂತರ ಹಣ ಖರ್ಚು ಮಾಡುತ್ತಿದೆ.
ಆದರೆ ಗ್ರಾಮ ಪಂಚಾಯಿತಿಗಳು ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ಮಾಡುತ್ತಿರುವುದರಿಂದ ನಿರ್ಮಿಸಿರುವ ಶೌಚಾಲಯಗಳು ಕುಸಿದು ಬಿದ್ದು ಅವು ಈಗ ಸಾರ್ವಜನಿಕರಿಗೆ ತಿಪ್ಪೆಗಳನ್ನು ಹಾಕಲು ನಿರ್ಮಿಸಿದಂತಾಗಿದೆ.
ತಾಲೂಕಿನ ಬಟ್ಟೂರು ಗ್ರಾಮದ ಹೊರವಲಯದಲ್ಲಿರುವ ಶೌಚಾಲಯ ಹಾಳಾಗಿದ್ದು ಅದನ್ನು ತಿಪ್ಪೆ ರಾಶಿ ಹಾಕಲು ಬಳಸಿಕೊಳ್ಳಲಾಗುತ್ತಿದೆ ಆದರೆ ಗ್ರಾಮ ಪಂಚಾಯಿತಿಯವರು ಈ ನಿಟ್ಟಿನಲ್ಲಿ ಯಾವುದೇನಿಗಾ ವಹಿಸದಿರುವದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಸರ್ಕಾರದ ಹಣ ಸದ್ಬಳಕೆ ಆಗಬೇಕಾದರೆ ಸಾರ್ವಜನಿಕರು ಸಹ ಸರ್ಕಾರದೊಂದಿಗೆ ಕೈಜೋಡಿಸಿದಾಗ ಮಾತ್ರ ಯೋಜನೆಯ ಯಶಸ್ವಿಯಾಗಲು ಸಾಧ್ಯ ಎಂಬುದು ಸತ್ಯ ಸಂಗತಿಯಾಗಿದೆ.