ತಿಪ್ಪರಾಜು ಪರ ಭಾರೀ ಒಲವು

ರಾಯಚೂರು,ಏ.೩೦- ರಾಯಚೂರು ಗ್ರಾಮೀಣ ಕ್ಷೇತ್ರದ ಕಲ್ಮಲಾ, ಗಾಣಧಾಳ, ಹೊಸಪೇಟೆ, ಹುಣಿಸಿಹಾಳ ಹುಡಾ, ಮರ್ಚೆಡ್, ಚಂದ್ರಬಂಡಾ, ಜೇಗರಕಲ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಲ್ದಾರ್ ಅವರ ಪರವಾಗಿ ಮತಯಾಚನೆ ಮಾಡಲಾಯಿತು.
ರಾಯಚೂರು ಗ್ರಾಮೀಣದಲ್ಲಿ ದಿನೇ ದಿನೇ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಅವರ ಬೆಂಬಲಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ತಿಪ್ಪರಾಜು ಅವರನ್ನು ಗೆಲ್ಲಿಸಬೇಸಬೇಕೆಂಬ ನಿರ್ಧಾರ ಗ್ರಾಮಸ್ಥರು ಮಾಡಿದ್ದು, ಸ್ವಯಂ ಪ್ರೇರಿತರಾಗಿ ತಿಪ್ಪರಾಜು ಪರವಾಗಿ ಪ್ರಚಾರದಲ್ಲಿ ಅಭಿಮಾನಿಗಳು ತೊಡಗಿಕೊಂಡಿರುವುದು ವಿಶೇಷವಾಗಿದೆ.
ಪ್ರತಿಯೊಂದು ಗ್ರಾಮಗಳಲ್ಲು ನಾ ಮುಂದು ತಾ ಮುಂದೆ ಎಂಬಂತೆ ತಿಪ್ಪರಾಜು ಅವರ ಪರವಾಗಿ ಪ್ರಚಾರ ಮಾಡಲು ಮುಂದಾಗಿದ್ದಾರೆ.
ರಾಯಚೂರು ಗ್ರಾಮೀಣ ವಿಧಾನ ಸಭಾ ವ್ಯಾಪ್ತಿಯ ಕಲಮಲಾ ಹಾಗೂ ಹುಣಶಿಹಾಳ ಹುಡ ಗ್ರಾಮಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ತಿಪ್ಪರಾಜು ಹವಲ್ದಾರ ಅವರು ನೂರಾರು ಬೆಂಬಲಿಗ ಸೈನ್ಯದೊಂದಿಗೆ ಚುನಾವಣೆ ಎದುರಿಸಲು ಸಿದ್ದರಾಗಿದ್ದಾರೆ. ಬಿಜೆಪಿ ಪಕ್ಷದ ಪರವಾಗಿ ಜನಪರ ಯೋಜನೆಗಳ ಮೂಲಕ ರೋಡ್ ಶೋ ಮಾಡಿ ಜನರ ಮನ ಗೆಲ್ಲುತ್ತಿದ್ದಾರೆ. ಗ್ರಾಮೀಣ ಭಾಗದ ಜನರು ಕೂಡ ತಿಪ್ಪರಾಜು ಹವಲ್ದಾರ ಪರ ಒಲವು ವ್ಯಕ್ತಪಡಿಸುತ್ತಿದ್ದಾರೆ.
ಗೆಲ್ಲುವ ಭರವಸೆಯೊಂದಿಗೆ ಮತದಾರರನ್ನು ಒಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಾರೆ ಹೇಳುವುದಾದರೆ ಈ ಬಾರಿ ರಾಯಚೂರು ಗ್ರಾಮೀಣದಲ್ಲಿ ಬಿಜೆಪಿ ಕಮಲ ಅರಳಿಸುವುದು ಶತಸಿದ್ದ ಎಂಬುದು ಕಾರ್ಯಕರ್ತರ ಒಮ್ಮತದ ಅಭಿಪ್ರಾಯವಾಗಿದೆ.
ರಾಯಚೂರು ಗ್ರಾಮೀಣ ಮತ ಕ್ಷೇತ್ರದ ಮರ್ಚಡ್ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಲ್ದಾರ ಚುನಾವಣಾ ಪ್ರಚಾರ ನಡೆಸಿ ಮತಯಾಚನೆ ಮಾಡಿದರು. ಇದಕ್ಕೂ ಮುನ್ನ ನೂರಾರು ಕಾರ್ಯಕರ್ತರು ಜಮಾಯಿಸಿ ಡೊಳ್ಳು ವಾಲಗದೊಂದಿಗೆ ಜೆಸಿಬಿ ಮೂಲಕ ಬೃಹತ್ ಗಾತ್ರದ ಹೂ ಮಾಲೆ ಹಾಕುವ ಮೂಲಕ ಗ್ರಾಮಕ್ಕೆ ಅದ್ದೂರಿಯಾಗಿ ಸ್ವಾಗತಿಸಿಕೊಂಡರು. ತಿಪ್ಪರಾಜು ಹವಲ್ದಾರ ಅವರು ಗ್ರಾಮದ ಬಡಾವಣೆಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಕೈ ಮುಗಿದು ಮತಯಾಸಿದರು.
ಈ ವೇಳೆ ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷದ ಗ್ರಾಮ ಪಂಚಾಯತ್ ಸದಸ್ಯರಾದ ಖಾಜಾಸಾಬ್, ನಾಗೇಶ ಪೂಜಾರಿ, ಅನೀಲ್ ಕುಮಾರ ಪತ್ತಿ, ತಿಮ್ಮಪ್ಪ, ಶಫಿಸಾಬ್ ಬೆಂಬಲಿಗರಾದ ಶ್ರೀಧರ, ಬುಡ್ಡಪ್ಪ, ಈರೇಶ, ಸುಧರ್ಶನಗೌಡ, ವಿನಯ ಕುಮಾರ ಗೌಡ, ರಾಜು ಪಿ, ಸಂದೀಪ್, ಯಲ್ಲಪ್ಪ ಪೂಜಾರಿ, ಮಲ್ಲು ಪೂಜಾರಿ, ಪಿರಹ್ಮದ್ ಹುಸೇನಪ್ಪ ಸೇರಿದಂತೆ ಅಪಾರ ಕಾರ್ಯಕರ್ತರೊಂದಿಗೆ ತಿಪ್ಪರಾಜು ಹವಲ್ದಾರ ಅವರ ನಾಯಕತ್ವ ಮೆಚ್ಚಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳು ಮತ್ತು ಮುಖಂಡರು, ಕಾರ್ಯಕರ್ತರು ಹಾಗೂ ಊರಿನ ಹಿರಿಯರು ಇದ್ದರು.
ಚಂದ್ರಬಂಡಾ ಗ್ರಾಮದಲ್ಲಿ ರಾಯಚೂರು ಗ್ರಾಮೀಣ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಲ್ದಾರ ಅವರು ಬಿರುಸಿನ ಪ್ರಚಾರ ನಡೆಸಿದರು.
ನೂರಾರು ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿ ಗ್ರಾಮಕ್ಕೆ ಬರಮಾಡಿಕೊಂಡರು. ತಿಪ್ಪರಾಜು ಹವಲ್ದಾರ ಅವರು ಮನೆಗೆ ತೆರಳಿ ಬಿಜೆಪಿ ಪಕ್ಷದ ಜನಪರ ಯೋಜನೆಗಳು, ಅಭಿವೃದ್ಧಿ ಕಾರ್ಯಗಳ ಕುರಿತು ಜನರಿಗೆ ತಿಳಿಸಿದರು. ಮುಂದಿನ ದಿನಗಳಲ್ಲಿ ನಮ್ಮದೆ ಬಿಜೆಪಿ ಸರ್ಕಾರ ಬಂದರೆ ರಾಯಚೂರು ಸಂಪೂರ್ಣ ನೀರಾವರಿ ಮಾಡಿ ಎಲ್ಲ ಕೆರೆಗಳಿಗೆ ನೀರು ತುಂಬಿಸುವಂತಹ ಕಾರ್ಯ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ಮೆಚ್ಚಿ ಅಧಿಕೃತವಾಗಿ ಸೇರ್ಪಡೆಯಾದರು. ಚಂದ್ರಬಂಡಾ ಹುಲಿಗೆಪ್ಪ, ಅನಿಲ್,ಪಾಗುಂಟಯ್ಯ, ಹುಲ್ಲೇಶ, ಸುರೇಶ, ಜಗದೀಶ್, ಭರತ್, ನವೀನ್, ಬೀಸ್, ವೀರೇಶ, ಸೇರಿದಂತೆ ಅನೇಕರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಂಖಡರು, ಕಾರ್ಯಕರ್ತರು, ಊರಿನ ಹಿರಿಯರು ಪಾಲ್ಗೊಂಡಿದ್ದರು.
ರಾಯಚೂರು ಗ್ರಾಮೀಣ ಮತಕ್ಷೇತದ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಲ್ದಾರ ಅವರು ರಾಯಚೂರು ತಾಲೂಕಿನ ಜೇಗರಕಲ್ ಮತ್ತು ಹೊಸಪೇಟೆ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.
ತಿಪ್ಪರಾಜು ಹವಲ್ದಾರ ಪರ ಒಮ್ಮತ್ತದ ಅಲೆ ಎದ್ದಿದ್ದು, ಬಿಜೆಪಿ ಪಕ್ಷದ ಕಾರ್ಯಕರ್ತರು ಭಾರೀ ಹುಮ್ಮಸ್ಸಿನಿಂದ ಪ್ರಚಾರದಲ್ಲಿ ತೊಡಗಿದ್ದಾರೆ.
ಈ ವೇಳೆ ಮಾತನಾಡಿದ ತಿಪ್ಪರಾಜು ಹವಲ್ದಾರ ನಿಮ್ಮ ಸೇವಕನಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರುತ್ತದೆ ರಾಯಚೂರು ಗ್ರಾಮೀಣ ಭಾಗದಲ್ಲಿ ನೀರಾವರಿ ಮಾಡಲು ಪಣ ತೊಡುತ್ತೇನೆ ಜೊತೆಗೆ ತಾಲೂಕಿನ ಎಲ್ಲ ಕೆರೆಗಳನ್ನು ನೀರು ತಿಂಬಿಸುವ ಮಹತ್ತರವಾದ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಈ ವೇಳೆ ಕೆಲ ಜೆಡಿಎಸ್, ಕಾಂಗ್ರೇಸ್ ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು, ಹಿರಿಯರು ಹಾಜರಿದ್ದರು.
ರಾಯಚೂರು ಗ್ರಾಮೀಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗಾಣದಾಳ ಗ್ರಾಮದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ತಿಪ್ಪರಾಜು ಹವಲ್ದಾರ ಪರ ಮುಖಂಡರು, ಕಾರ್ಯಕರ್ತರು ಭಾರೀ ಪ್ರಚಾರ ಮಾಡುತ್ತಿದ್ದು, ಬಿಜೆಪಿ ಸರ್ಕಾರದ ಜನಪರ ಯೋಜನೆಗಲನ್ನು ಜನರಿಗೆ ತಿಳಿಸುತ್ತಿದ್ದಾರೆ.
ಬಿಜೆಪಿ ಪಕ್ಷದ ಮುಖಂಡರಾದ ವರಪ್ರಸಾದ ರೆಡ್ಡಿ ತಲಮಾರಿ ಅವರು ತನ್ನದೆಯಾದ ಸೈನ್ಯ ಪಡೆಯೊಂದಿಗೆ ತಿಪ್ಪರಾಜು ಹವಲ್ದಾರ ಪರವಾಗಿ ಜನಪರ ಯೋಜನೆಗಳ ಮೂಲಕ ಮನೆ ಮನಗೆ ತೆರಳಿ ಪ್ರಚಾರ ಮಾಡಿ ಜನರ ಮನ ಗೆಲ್ಲಿಸುತ್ತಿದ್ದಾರೆ. ಮತದಾರರು ಕೂಡ ತಿಪ್ಪರಾಜು ಹವಲ್ದಾರ ಪರ ಒಲವು ಇದ್ದು ಗೆಲ್ಲುವ ಭರವಸೆಯೊಂದಿಗೆ ಮತದಾರರನ್ನು ಒಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೇಸ್ ಪಕ್ಷದಿಂದ ಬೇಸತ್ತು ಕೆಲ ಕಾರ್ಯಕರ್ತರನ್ನು ಒಲಿಸುವಲ್ಲಿ ವರಪ್ಪಗೌಡ ತಲಮಾರಿ ಯಶಸ್ವಿಯಾಗಿದ್ದು, ಅವರ ನೇತೃತ್ವದಲ್ಲಿ ಹನುಮಂತು ನಾಯಕ, ಕಾವಲಿ ಡಿ. ನರಸಿಂಹ ನಾಯಕ, ಪ್ರಶಾಂತ ನಾಯಕ, ರಾಮು, ಸೂರ್ಯಪ್ರಕಾಶ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.