
ರಾಯಚೂರು, ಮಾ.೨೬- ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ರಾಜ್ಯ ಸಚಿವರಾದ ಎ ನಾರಾಯಣಸ್ವಾಮಿ ಅವರಿಗೆ ತಿಪ್ಪರಾಜು ಅಭಿಮಾನ ಬಳಗದಿಂದ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ ಭಾವಚಿತ್ರ ನೀಡಿ ಸನ್ಮಾನ ಮಾಡಲಾಯಿತು.
ರಾಯಚೂರು ಗ್ರಾಮೀಣ ಮಂಡಲದ ಅಧ್ಯಕ್ಷರಾದ ಶ ಜಿ.ಹೆಚ್.ನವೀನ್ ಕುಮಾರ ನೇತೃತ್ವದಲ್ಲಿ ಸನ್ಮಾನ ಮಾಡಲಾಯಿತು.
ಇಂದು ಮಂತ್ರಾಲಯದ ರಾಘವೇಂದ್ರ ಶ್ರೀಗಳ ದರ್ಶನಕ್ಕೆ ಆಗಮಿಸಿದವರನ್ನು, ಸುಮಾರು ೩೦ ವರ್ಷಗಳಿಂದ ಮಾದಿಗ ಸಮಾಜದ ಬಹುದಿನದ ಕನಸಾದ ಒಳಮೀಸಲಾತಿಯನ್ನು ಜಾರಿಗೊಳಿಸಲು ನಿರಂತರವಾಗಿ ಶ್ರಮ ವಹಿಸಿ ಪಕ್ಷದ ವೇದಿಕೆಯಲ್ಲಿ ಹೋರಾಟ ಮಾಡಿದ ಅವರಿಗೆ ಜಯ ಘೋಷದ ಮೂಲಕ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ನವೀನ ಕುಮಾರ ಕುರ್ಡಿ
ಜಿಲ್ಲಾ ಕಾರ್ಯದರ್ಶಿ ಶ್ರೀ ಶಾಂತಪ್ಪ ಉಪ್ರಾಳ್, ಜಿಲ್ಲಾ ಎಸ್ ಸಿ ಮೋರ್ಚ ಪ್ರಧಾನ ಕಾರ್ಯದರ್ಶಿ ಒಡೆಯರಾಜ ಅರೋಲಿ, ಎಪಿಎಂಸಿ ನಿರ್ದೇಶಕರಾದ ಶ್ರೀ ಡಿ ಲಕ್ಷ್ಮಣ, ಮುಖಂಡರಾದ ಸುಭಾಷ್ ನಾಗಲಾಪುರ್, ಶಿವಪುತ್ರ ದಿನ್ನಿ, ದುಳ್ಳಯ್ಯ ಗುಂಜಳ್ಳಿ, ರವಿ ದುಗೂನುರು, ಸಮಾಜದ ಮುಖಂಡರು ಉಪಸ್ಥಿತರಿದ್ದರು.