ತಿಪ್ಪಣ್ಣ ಅವರಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ

ರಾಯಚೂರು,ಮೇ ೧೮- ಜಿಲ್ಲಾ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಸಹಾಯಕ ನಿರ್ದೇಶಕ ತಿಪ್ಪಣ್ಣ ತಂ.ರಾಮಚಂದ್ರ ಅವರು ಸ್ವಸಹಾಯ ಗುಂಪುಗಳ ಮೂಲಕ ಗ್ರಾಮೀಣ ಬಡವರಿಗಾಗಿ ಸೂಕ್ಷ್ಮ ಸಾಲ ಎಂಬ ವಿಷಯದ ಮೇಲೆ ಪ್ರಬಂಧವನ್ನು ಮಂಡಿಸಿದ್ದು, ಈ ಪ್ರಬಂಧಕ್ಕೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಿಂದ ತಿಪ್ಪಣ್ಣ ಅವರಿಗೆ ಪಿಎಚ್‌ಡಿ ಲಭಿಸಿದೆ.
ಡಾ.ಬಶೀರ್ ಅಹ್ಮದ್ ಖಾನ್ ಅವರ ಮಾರ್ಗದರ್ಶನದಲ್ಲಿ ತಿಪ್ಪಣ್ಣ ಅವರು ಪ್ರಬಂಧವನ್ನು ರಚಿಸಿದ್ದರು. ಏ.೨೮ರಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಿಂದ ತಿಪ್ಪಣ್ಣ ಅವರಿಗೆ ಪಿಎಚ್‌ಡಿ(ಡಾಕ್ಟರೇಟ್) ನೀಡಿ ಗೌರವಿಸಲಾಗಿದೆ.