ತಿದ್ದುಪಪಡಿ ಕಾಯ್ದೆ ಹಿಂದಕ್ಕೆ ಪಡೆಯುವವರೆಗೆ ರೈತರ ಹೋರಾಟ ನಿಲ್ಲದು:ಅಪರ್ಣ

ಬಳ್ಳಾರಿ, ಜ.02: ಕೇಂದ್ರ ಸರ್ಕಾರ ತನ್ನು ತಿದ್ದುಪಡಿ ಮಾಡಿರುವ ಕೃಷಿ ಸಂಬಂಧಿತ ಕಾಯಗ್ದೆಗಳನ್ನು ಹಿಂದಕ್ಕೆ ಪಡೆಯುವವರೆಗೆ ರೈತರು ಪ್ರತಿಭಟನೆಯಿಂದ ಹಿಂದಡಿಇಡುವುದಿಲ್ಲ. ಇದು ನಮ್ಮ ಅಳಿವು ಉಳಿವಿನ ಪ್ರಶ್ನೆ, ಪ್ರಾಣತ್ಯಾಗವಾದರೂ ಸರಿಯೇ ಸರ್ಕಾರ ಈ ಕಾಯ್ದೆಗಳನ್ನು ಹಿಂಪಡೆಯುವವರೆಗೂ ಇಲ್ಲಿಂದ ಹಿಂದೆ ಸರಿಯುವುದಿಲ್ಲವೆಚಿದು ಘೋಷಿಸಿದ್ದಾರೆಂದು ಎ.ಐ.ಎಂ.ಎಸ್.ಎಸ್.ರಾಜ್ಯಾಧ್ಯಕ್ಷೆ ಅಪರ್ಣ ಬಿ.ಆರ್ ಹೇಳಿದ್ದಾರೆ.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠೀ ನಡೆಸಿ. ತಾವು ರೈತರ ಹೋರಾಟದಲ್ಲಿ ಪಾಲ್ಗೊಂಡು ಬಂದಿದ್ದು. ಕೇಂದ್ರ ಬಿ.ಜೆ.ಪಿ. ಸರ್ಕಾರ ಜಾರಿಗೆ ತಂದಿರುವ ಅತ್ಯಂತ ಕಡು ರೈತ ವಿರೋಧಿ ಕಾಯ್ದೆಗಳು ಹಾಗೂ ವಿದ್ಯುತ್‍ಚ್ಚಕ್ತಿ ಬಿಲ್ 2020 ನ್ನು ವಿರೋದಿಸಿ ದೆಹಲಿಯರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಳೆದ 37 ದಿನಗಳಿಂದ ಲಕ್ಷಾಂತರ ರೈತರು ಪ್ರತಿಭಟಿಸುತ್ತಿದ್ದಾರೆ. ಇಡೀಕೃಷಿರಂಗವನ್ನು ನರೇಂದ್ರಮೋದಿ ಸರ್ಕಾರ, ಕಾರ್ಪೋರೇಟ್ ಮನೆತನಗಳಿಗೆ ನೆರವಾಗುವಂತೆ ಲಜ್ಜಾರಹಿತವಾಗಿತೆರೆದಿಟ್ಟಿರುವಈ ನಡೆಯನ್ನು ಖಂಡಿಸಿ ರೈತರು ನಡೆಸುತ್ತಿರುವ ಈ ಹೋರಾಟಅತ್ಯಂತ ನ್ಯಾಯೋಚ್ಚಿತವಾಗಿದ್ದು, ಕೇವಲ ದೇಶದ ಮಾತ್ರವಲ್ಲ ಅಂತರರಾಷ್ಟ್ರೀಯ ಮಟ್ಟದಲ್ಲಿಗಮನ ಸೆಳೆದಿದೆ, ಇಡೀದೇಶದಆಹಾರ ಭದ್ರತೆಯನ್ನೇಅಲುಗಾಡಿಸುತ್ತದೆ. ಆದ್ದರಿಂದಲೇ ಎ.ಐ.ಎಂ.ಎಸ್.ಎಸ್.ನ ಅಖಿಲಭಾರತ ಸಮಿತಿಯು, ರೈತರುದಹಲಿ ಚಲೋ ಕಾರ್ಯಕ್ರಮವನ್ನು ಪ್ರಾರಂಭಿಸಿದ ಮೊದಲನೇ ದಿನದಿಂದಲೇಅವರ ಹೋರಾಟಕ್ಕೆ ತನ್ನ ಸಂಪೂರ್ಣ ಬೆಂಬಲವನ್ನುವ್ಯಕ್ತ ಪಡಿಸಿದೆ. ದೇಶದಾದ್ಯಂತ ಇಂದಿನವರೆಗೂ ಹಲವಾರುಪ್ರತಿಭಟನೆಗಳನ್ನು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆಂದು ತಿಳಿಸಿದರು.
ದೆಹಲಿಗೆ ತೆರಳುವ ರಸ್ತೆಗಳ ಎಲ್ಲಾ ಗಡಿಗಳಲ್ಲೂ ರೈತರು‘ಸಂಯುಕ್ತಕಿಸಾನ್ ಮೋರ್ಚಾ’ ಅಡಿಯಲ್ಲಿ ಪ್ರತಿಭಟಿಸುತ್ತಿದ್ದಾರೆ. ನಲವತ್ತಕ್ಕೂ ಹೆಚ್ಚು ರೈತರುತೀವ್ರ ಚಳಿಯ ಪರಿಣಾಮದಿಂದಾಗಿ ಸಾವನ್ನಪ್ಪಿದ್ದಾರೆ.ಆದರೆ, ರೈತರ ಹೋರಾಟದ ಕೆಚ್ಚು ಸ್ವಲ್ಪವೂತಗ್ಗಿಲ್ಲ, ಬದಲಿಗೆ ದಿನದಿಂದ ದಿನಕ್ಕೆ ಸಹಸ್ರಾರುರೈತರು ಈ ಸಾಗರವನ್ನು ಸೇರುತ್ತಿದ್ದಾರೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ್ ಮತ್ತುರಾಜಸ್ತಾನದರೈತರು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ.ಉತ್ತರಾಖಾಂಡ್ ದಿಂದ ಹೊರಟಿದ್ದರೈತರನ್ನುಉತ್ತರ ಪ್ರದೇಶದ ಸರ್ಕಾರವನ್ನ ಗಡಿದಾಟಲು ಬಿಡಲಿಲ್ಲ. ಇದರಿಂದಾಗಿ ಅಲ್ಲಿಯೇ ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ಎ.ಪಿ.ಎಂ.ಸಿ.ಕಾಯ್ದೆ ಅನುಷ್ಠಾನಕ್ಕೆ ಬಂದರೆ,ಕ್ರಮೇಣವಾಗಿ ‘ಮಂಡಿ ಪದ್ದತಿ’ ಮಾಯವಾಗುತ್ತದೆ, ಕಾರ್ಪೊರೇಟ್ ಮನೆತನಗಳ ಕೈಗೊಂಬೆಗಳಾಗುತ್ತೇವೆ, ಸರ್ಕಾರವು ಕನಿಷ್ಠ ಬೆಂಬಲ ಬೆಲೆ ನೀಡುವುದು ನಿಂತರೆ, ನಾವು ಮುಳುಗಿದಂತೆ, ಕಾಯ್ದೆಗಳಲ್ಲಿನ ಪದಪುಂಜಗಳ ಅದಲು ಬದಲು ಮೂಲಭೂತ ವ್ಯತ್ಯಾಸತರುವುದಿಲ್ಲ, ಪದಗಳ ಜೊತೆ ಆಟ ಬೇಡ, ಗಂಟೆಗಟ್ಟಲೇಚರ್ಚೆಯಅವಶ್ಯಕತೆಇಲ್ಲ, ಮೂರು ಕಾಯ್ದೆಗಳನ್ನು ಬೇಷರತ್ತಾಗಿ ಹಿಂಪ‌‌ಡೆಯಬೇಕಿದೆಂದರು. .
ಸುದ್ದಿ ಗೋಷ್ಠಿಯಲ್ಲಿ ಸಂಘಟನೆಯ ಮಂಜುಳಾ, ಎ. ಶಾಂತ, ಕೆ.ಎಂ. ಈಶ್ವರಿ, ರೇಖಾ. ವಿದ್ಯಾವತಿ, ಗಿರೀಜಾ, ಪದ್ಮವತಿ, ಅಹಲ್ಯಾ, ವಿಜಯಲಕ್ಷ್ಮೀ ಭಾಗವಹಿಸಿದ್ದರು.