ತಿದ್ದುಪಡಿ ವಾಪಸಾತಿಗೆ ಮನವಿ

ಕುಂದಗೋಳ ಜು.27 : ರಾಜ್ಯ ಸರ್ಕಾರವು ಜನನ-ಮರಣ ನೋಂದಣಿ ಪ್ರಕ್ರಿಯೆಯ ನೂತನ ತಿದ್ದುಪಡಿ ತಂದಿದ್ದು, ಕೂಡಲೇ ಆ ತಿದ್ದುಪಡಿಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಕುಂದಗೋಳ ವಕೀಲರ ಸಂಘ ತಹಸೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ನೀಡಿತು.
ಜು.16 ರಂದು ರಾಜ್ಯ ಸರ್ಕಾರ ಈ ವಿಷಯಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ತಂದಿರುವದು ಸಾರ್ವಜನಿಕರಿಗೆ ಹಾಗೂ ವಕೀಲರಿಗೆ ತೊಂದರೆಯಾಗಲಿದ್ದು, ರಾಜ್ಯ ಸರ್ಕಾರ ಕೂಡಲೇ ತಾನು ನಿರ್ಧರಿಸಿದ ಜನನ-ಮರಣ ನೋಂದಣಿ ಕಾಯ್ದೆ 30ರ ಅಡಿಯಲ್ಲಿ ತಿದ್ದುಪಡಿ ಸುತ್ತೋಲೆಯನ್ನು ಹಿಂಪಡೆದುಕೊಂಡು ಮೊದಲಿನಂತೆ ನ್ಯಾಯಾಲಯ ವ್ಯಾಪ್ತಿಗೆ ಸಲ್ಲಿಸಬೇಕು, ಇಲ್ಲದಿದ್ದಲ್ಲಿ ವಕೀಲರ ಸಂಘ ರಾಜ್ಯ ವ್ಯಾಪಿ ಹೋರಾಟನಡೆಸಲಿದೆ ಎಂದು ಕುಂದಗೋಳ ವಕೀಲರ ಸಂಘ ತನ್ನ ಮನವಿಯಲ್ಲಿ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ವಕೀಲರ ಸಂಘಾಧ್ಯಕ್ಷ ಜಿ.ಬಿ ಸೊರಟೂರ, ಕಾರ್ಯದರ್ಶಿ ವೈ.ಬಿ ಬಿಳೇಬಾಳ, ಆರ್.ಎನ್ ಕಮತದ, ಐ.ಬಿ ಬೆಟದೂರ, ಅಶೋಕ ಕ್ಯಾರಕಟ್ಟಿ, ಎ.ಎಂ ಪಾಟೀಲ, ಅಶೋಕ ಕಟಗಿ, ವೈ.ಎಂ ತಹಸೀಲ್ದಾರ, ಕೋಣನವರ ಸೇರಿದಂತೆ ಹಲವಾರು ನ್ಯಾಯವಾದಿಗಳಿದ್ದರು.