ತಿಗಳ ಸಮಾಜ ಅಭಿವೃದ್ಧಿ ನಿಗಮ ಘೋಷಣೆ : ಅರವಿಂದ ಪೆÇೀದ್ದಾರ ಸ್ವಾಗತ

ಕಲಬುರಗಿ,ಮಾ.15-ಫೆಬ್ರುವರಿ 22 ರಂದು ಐದು ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ ಇಗ ಮತ್ತೊಂದು ಕರ್ನಾಟಕ ತಿಗಳ ಸಮಾಜ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆದೇಶಿಸಿದೆ.
ಇದಕ್ಕಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಓಬಿಸಿ ಮೋರ್ಚಾ ಅಧ್ಯಕ್ಷÀ ನೆ.ಲ.ನರೇಂದ್ರ ಬಾಬು, ರಾಜ್ಯದ ಇನ್ನುಳಿದ ಸಚಿವರಿಗೂ ,ಶಾಸಕರಿಗೂ ಜಿಲ್ಲೆಯ ಅಧ್ಯಕ್ಷರು ಮತ್ತು ಪಕ್ಷದ ಹಿರಿಯ ಮುಖಂಡರಿಗೆ ಬಿಜೆಪಿ ಓಬಿಸಿ ಮೋರ್ಚಾ ನಗರ ಜಿಲ್ಲೆಯ ಅಧ್ಯಕ್ಷರಾದ ಅರವಿಂದ ಪೆÇೀದ್ದಾರ ಅಭಿನಂದನೆ ಸಲ್ಲಿಸಿದ್ದಾರೆ.
ಇದರಿಂದ ಕರ್ನಾಟಕ ತಿಗಳ ಸಮಾಜ ಅಭಿವೃದ್ಧಿ ನಿಗಮ ದಿಂದ ತಿಗಳ, ಅಗ್ನಿವಂಶ,ಅಗ್ನಿವನ್ನಿ,ಅಗ್ನಿಕುಲಕ್ಷತ್ರಿಯ, ಧರ್ಮರಾಜ ಕಾಪು, ಪಳ್ಳಿ ಶಂಭುಕುಲ ಕ್ಷತ್ರಿಯ,ವನ್ನಿಯರ್, ವನ್ನಿಕುಲಕ್ಷತ್ರಿಯ , ತಿಗ್ಲರ್, ಕರೋವನ್ ಜಾತಿಗಳನ್ನು ಅಭಿವೃದ್ಧಿಗಾಗಿ ಹಿಂದುಳಿದ ಪಂಗಡ ದವರನ್ನು ಶಿಕ್ಷಣ, ಆರ್ಥಿಕ ,ಹಾಗೂ ಸಾಮಾಜಿಕವಾಗಿ ಮುಖ್ಯ ವಾಹಿನಿಗೆ ಬರಲು ಅನುಕೂಲ ಆಗಲಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಈ ನಿರ್ಧಾರಕ್ಕೆ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಅಂಬು ಡಿಗ್ಗಿ, ಉಪಾಧ್ಯಕ್ಷರಾದ ಅಶೋಕ ಇಂಗೋಳೆ, ನಾಗಪ್ಪ ರೋಣದ,ಹುಸನಯ್ಯ ಗುತ್ತೇದಾರ, ಹಣಮಂತ ಪೂಜಾರಿ ಕಿಶೋರ ಚವ್ಹಾಣ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ ಆಲೂರ, ಪ್ರಮೋದ ದುಮಾಳೆ, ಜಗದೀಶ ವರ್ಮಾ, ಚಂದ್ರಕಾಂತ ಕೋಂಡಾಪೂರೆ, ಪಿತಾಂಬರ ಕಲಗುರ್ತಿ, ಅಭಿಷೇಕ ಹೇಚ, ವಿಜಯಕುಮಾರ ಮಡಿವಾಳ, ಜಯಪ್ಪ ಬಡಿಗೇರ,ಕಾಳಪ್ಪಾ ಕೋಡ್ಲಾ, ನಾಗರಾಜ ಪತ್ತಾರ, ಪ್ರಶಾಂತ ನಿಂಭಾಳಕರ, ಶ್ರೀಮಂತ ಮಡಿವಾಳ, ಸಂತೋಷ ಚೌದ್ರಿ ,ಶರಣಬಸಪ್ಪ ಸೂರ್ಯವಂಶಿ,ನಾಗರಾಜ ಪೂಜಾರ, ಕೃಷ್ಣಾ ಪವಾರ, ಶರಣು ಕೌಲ್ಗಿ, ಮಲ್ಲಿಕಾರ್ಜುನ ಕುಡಿ, ಬಸವರಾಜ ಯಾದಗಿರ, ಅನೀಲ ಕಲಶೇಟ್ಟಿ, ಮಲ್ಲಿಕಾರ್ಜುನ ಕಂಕರೆ, ಮಲ್ಲಿಕಾರ್ಜುನ ತಳವಾರ,ರಾಮಲಿಂಗ ಹರನಾಳ, ಬಲರಾಮಸಿಂಗ , ಲಕ್ಷ್ಮಣ ಮಹಾದೇವ, ಸಂತೋಷ ವೇರ್ಣೆಕರ, ಸಂತೋಷ ಜಾಧವ, ಆಶಿಸ ಆಕಾಶಕೋರೆ ,ಚೇತನ ಪುಕಾಳೆ, ಹಾಗೂ ಓಬಿಸಿ ಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.