ತಿಗಡೊಳ್ಳಿ ಗ್ರಾ.ಪಂ.ಗೆ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರ,ಜು 29: ತಾಲೂಕಿನ ತಿಗಡೊಳ್ಳಿ ಗ್ರಾ.ಪಂ.ಗೆ ಎರಡನೇ ಬಾರಿಗೆ ಜಿದ್ದಾ-ಜಿದ್ದಿನ ಚುನಾವಣೆ ಜರುಗಿತು. ಎರಡನೇ ಅವಧಿಗೆ ಅಧ್ಯಕ್ಷರಾಗಿ ಗೋಪಾಲ.ದೇ.ಹುಕ್ಕೇರಿ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಜಾನಕಿ.ಕ.ಬಡಸದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರಿಗೆ ಗ್ರಾಮಸ್ಥರು, ಸರ್ವ ಸದಸ್ಯರು, ಬೆಂಬಲಿಗರು, ಹಿರಿಯರು, ಗ್ರಾ.ಪಂ ಸಿಬ್ಬಂದಿ ಮಾಲಾರ್ಪಣೆ ಮಾಡಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಗೋಪಾಲ ಹುಕ್ಕೇರಿಯವರು ಸರ್ವ ಸದಸ್ಯರು ಹಾಗೂ ಗ್ರಾಮದ ಹಿರಯರನ್ನು ಒಗ್ಗೂಡಿಸಿಕೊಂಡು ಗ್ರಾಮದ ಅಭಿವೃದ್ದಿಗಾಗಿ ಹಗಲಿರುಳು ಶ್ರಮಿಸಿ ಜಾತಿ-ಭೇಧ ಮರೆತು ಪ್ರಾಮಾಣಿಕವಾಗಿ ಸೇವೆ ಮಾಡುತ್ತೇನೆಂದರು.
ಚುನಾವಣಾಧಿಕಾರಿಯಾಗಿ ಕೆ.ಆರ್.ಡಿ.ಎಲ್. ಸಹಾಯಕ ಚುನಾವಣಾಧಿಕಾರಿಯಾಗಿ ಶ್ರೀಮತಿ ನಾಗರತ್ನಾ ಲಕ್ಕಣ್ಣವರ ನಿರ್ವಹಿಸಿದರು.
ನಿಕಟಪೂರ್ವಾಧ್ಯಕ್ಷ ಅಶೋಕ ಕಳಸನ್ನವರ, ಶೀಲಾವತಿ ದಳವಾಯಿ, ಸವಿತಾ ಗೋದಳ್ಳಿ, ಕರೆವ್ವಾ ನಾಯ್ಕರ, ಶೈನಾಜಬಿ ದಾದೇಬಾಯಿ, ಬಸವ್ವ ಕೋಲಕಾರ, ಜಗದೀಶ ಗೋದಳ್ಳಿ, ಕಾರ್ಯದರ್ಶಿ ಈಶ್ವರಿ ಸರಪಳಿ, ಸಿಬ್ಬಂದಿ ರವಿ ಪಾಟೀಲ, ಅಸ್ಲಂ ಬೀಡಿ, ಅಜ್ಜಪ್ಪ ಬಾಗೇವಾಡಿ, ಹಿರಿಯರಾದ ಕೆ.ಎಸ್.ಆರ್.ಟಿ.ಸಿ ನಿವೃತ್ತ ನಿರ್ವಾಹಕ ಕಲ್ಲಪ್ಪ ಕಟ್ಟಗಿ, ಮಾಜಿ ತಾ.ಪಂ. ಸದಸ್ಯ ಹನಮಂತ ಹೆಬ್ಬಳ್ಳಿ, ನಿಂಗಪ್ಪ ಮುತ್ನಾಳ. ಜಗದೀಶ ಮಲಶೆಟ್ಟಿ, ಬಾಳಪ್ಪ ಬಡಸದ, ಮಹಾದೇವ ಹತ್ತಿ, ಮುಗುಟಸಾಬ, ಮೋಹನ ಹಿರಕಿ ಸೇರಿದಂತೆ ಇನ್ನಿತರಿದ್ದರು.