ವಿಜಯಪುರ:ಎ.29: ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ವಿಧಾನಸಭೆ ಸಾರ್ವತ್ರಿಕ ಚುನಾವಣೆ -2023ರ ಅಂಗವಾಗಿ ತಾಲೂಕು ಸ್ವೀಪ್ ಸಮಿತಿ ಹಾಗೂ ಗ್ರಾಮ ಪಂಚಾಯತ ಕಾರ್ಯಾಲಯ, ಬಿಜ್ಜರಗಿ ರವರ ಸಹಯೋಗದಲ್ಲಿ “ಮತದಾನ ಜಾಗೃತಿ ಅಭಿಯಾನ” ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಎತ್ತಿನಗಾಡಿ ಮೆರವಣಿಗೆ ಮುಖಾಂತರ ಮತದಾನ ಜಾಗೃತಿಯನ್ನು ವಿನೂತನವಾಗಿ ಮೂಡಿಸಲಾಯಿತು. ಎತ್ತಿನಗಾಡಿಯಲ್ಲಿ ಮಾದರಿ “ವಿವಿಪ್ಯಾಟ್ ಮಶೀನ್” ಮತ್ತು “ಬ್ಯಾಲೇಟ್ ಯುನಿಟ್” ತಯಾರಿಸಿ ಗ್ರಾಮದಲ್ಲಿ ಕಡ್ಡಾಯ ಮತದಾನದ ಕುರಿತು ಎತ್ತಿನಗಾಡಿಯ ಮೆರವಣಿಗೆ ಮಾಡುವ ಮೂಲಕ ಜಾಗೃತಿ ಮೂಡಿಸಲಾಯಿತು.
ಈ ಜಾಥಾವು ಗ್ರಾಮ ಪಂಚಾಯತಿ ಕಾರ್ಯಾಲಯದಿಂದ ಆರಂಭವಾಗಿ ಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿಗಳ ರಸ್ತೆ ಮೂಲಕ ಸಾಗಿ ಗ್ರಾಮ ಚಾವಡಿಯಲ್ಲಿ ಹಾಯ್ದು ಬಸ್ ನಿಲ್ದಾಣಕ್ಕೆ ಬಂದು ಮುಕ್ತಾಯಗೊಂಡಿತು.
ಜಾಗೃತಿ ಜಾಥಾಕ್ಕೆ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಶ್ರೀಮತಿ ಜೆ.ಎ.ದಶವಂತ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ, ಮಾತನಾಡಿ, ಭವ್ಯ ಭಾರತದ ನಿರ್ಮಾಣಕ್ಕಾಗಿ, ಬಲಿಷ್ಟ ಭಾರತವನ್ನು ಕಟ್ಟುವುದಕ್ಕಾಗಿ, ಉತ್ತಮ ಸಮಾಜಕ್ಕಾಗಿ ಪ್ರತಿಯೊಬ್ಬ ಪ್ರಜೆಯು ತಪ್ಪದೇ ಮತದಾನ ಮಾಡುವುದು ಅತೀ ಅವಶ್ಯವಾಗಿರುವುದರಿಂದ ಮತದಾನದಿಂದ ದೂರ ಉಳಿಯದೇ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವಂತೆ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಜ್ಜರಗಿ ಗ್ರಾಮದ ಸರಕಾರಿ ಶಾಲೆಯ ಮುಖ್ಯಗುರುಗಳು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ವೀಪ್(ಃಂಉ/ಅಎಅ/ಗಿಂಈ) ಸಮಿತಿಯ ಸರ್ವಸದಸ್ಯರು, ಗ್ರಾಮದ ಹಿರಿಯರು, ಯುವಕರು, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಭಾಗಿಯಾಗಿ ಕಡ್ಡಾಯ ಮತದಾನದ ಘೋಷಣೆಗಳನ್ನು ಕೂಗಿದರು.