ತಿಕೋಟಾದ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಬಿತ್ತನೆ ಬೀಜ ವಿತರಣೆ

ತಿಕೋಟಾ, ಜೂ.3-ಇಲ್ಲಿಯ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಯನ್ನು ಬುಧವಾರ ಪ್ರಾರಂಭಿಸಲಾಯಿತು.
ಸರಕಾರದ ನಿರ್ದೇಶನದಂತೆ ರಿಯಾಯಿತಿ ದರದಲ್ಲಿ ಸಜ್ಜೆ, ಶಕ್ತಿಮಾನ ಗೋವಿನಜೋಳ, ತೊಗರಿ, ಹೆಸರು ಮುಂತಾದ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲು ಸ್ಥಳೀಯ ಕೃಷಿ ಅಧಿಕಾರಿ ಶ್ರೀಮತಿ ಟಿ.ಎ. ಸೋಲಾಪೂರಕರ ಪ್ರಾರಂಭಿಸಿದರು.
ಕೋವಿಡ್ ನಿಯಮದಂತೆ ಸಾಮಾಜಿಕ ಅಂತರ ಮಾಸ್ಕ ಧರಿಸುವುದು ಸೇರಿದಂತೆ ರೈತರಿಗೆ ಸೂಚನೆಗಳನ್ನು ಅನುಸರಿಸುವಂತೆ ತಿಳಿಸಿ ವಿತರಣೆ ಪ್ರಾರಂಭ ಮಾಡಲಾಯಿತು ಎಂದು ತಿಳಿಸಿದ ಅವರು ತಾಲೂಕಿನಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು ಎಲ್ಲ ರೈತರು ಸರಕಾರದ ಸೌಲಭ್ಯ ಪಡೆದುಕೊಂಡು ಉತ್ತಮ ಬಿತ್ತನೆ ಬೀಜ ಪಡೆದು ಅಧಿಕ ಇಳುವರಿ ಹೊಂದಿ ಆರ್ಥಿಕವಾಗಿ ಸಬಲರಾಗಲು ಕೋರಲಾಗಿದೆ.
ಕೃಷಿ ಅಧಿಕಾರಿ ಬಿ.ಆರ್. ಬೋರಗಿ, ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಸೋಮಶೇಖರ ದಾ. ಜತ್ತಿ, ಎ.ಬಿ. ಪಾಟೀಲ, ಎಸ್.ಬಿ. ಬಿರಾದಾರ, ಮುಸ್ತಾಕ ಬಾಳಿಕಾಯಿ, ಮುತ್ತಪ್ಪ ಶಿರಹಟ್ಟಿ, ಕಿರಣ ಜತ್ತಿ, ಅಶೋಕ ಅವಟಿ, ಶಿವಾನಂದ ಬಂಡಗಾರ, ಜಗದೀಶ ದಿಂಡೂರ, ಕಲ್ಲಪ್ಪ ಕಂಠಿ, ಕುಬೇರ ಹಟ್ಟಿ, ಮೀಯಾಸಾಬ ಮುಲ್ಲಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.