
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.20: ಡಾಬಾದಲ್ಲಿ ತಿಂದುಂಡು ಮಜಾ ಮಾಡಿದ್ದಲ್ಲದೆ. ಬಾಕಿ ಬಿಲ್ ಕೇಳಿದ್ದಕ್ಕೆ ಡಾಬಾ ಮಾಲೀಕನ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಪೇದೆಯನ್ನು ಅಮಾನತು ಮಾಡಿರುವ ಘಟನೆ ನಡೆದಿದೆ.
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊಳಲು ಉಪ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆ ಕಲ್ಲೇಶಗೌಡನನ್ನು ವಿಜಯನಗರ ಎಸ್ಪಿ ಅಮಾನತು ಮಾಡಿದ್ದಾರೆ.
ಮೈಲಾರ ಗ್ರಾಮದ ಹೊರ ವಲಯದಲ್ಲಿರುವ ಹಸಿರು ಮನೆ ಡಾಬಾದಲ್ಲಿ, ಪೊಲೀಸ್ ಪೇದೆ ಕಲ್ಲೇಶಗೌಡ ಮದ್ಯ ಪಾನದ ಮತ್ತಿನಲ್ಲಿ ಡಾಬಾ ಮಾಲೀಕರ ಜತೆಗೆ ಅಸಭ್ಯ ವರ್ತನೆಯ ಜತೆಗೆ ಗಲಾಟೆ ಮಾಡಿದ್ದಾನೆ. ಹಸಿರು ಮನೆ ಡಾಬಾಕ್ಕೆ ಬಂದು ಊಟ ಮಾಡಿದ ಬಿಲ್ ಕೂಡಾ ಪಾವತಿ ಮಾಡುತ್ತಿಲ್ಲ. ಹಳೆ ಬಾಕಿ 5 ಸಾವಿರ ಕೊಡುವಂತೆ ಕೇಳಿದಾಗ, ಡಾಬಾ ಮಾಲೀಕ ಗುರುರಾಜ ಹಾಗೂ ಅವರ ಪತ್ನಿ ರಾಧಮ್ಮ ಇಬ್ಬರ ಜತೆಗೆ ಗಲಾಟೆ ಮಾಡಿದ್ದಾನೆ. ಈ ಕುರಿತು ಡಾಬಾ ಮಾಲೀಕ ಗುರುರಾಜ ಅವರ ಪತಿ ರಾಧಮ್ಮ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಹಾಗಾಗಿ ಪೋಲೀಸ್ ಪೇದೆ ಕಲ್ಲೇಶಗೌಡನನ್ನು ಅಮಾನತು ಮಾಡಲಾಗಿದೆ.
Attachments area