ತಿಂಥಣಿ ಬ್ರಿಜ್‍ನಲ್ಲಿ ಮೂರು ದಿನಗಳ ಹಾಲು ಮತ ಸಂಸ್ಕøತಿ ವೈಭವ

ಕಲಬುರಗಿ,ಜ.10: ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ತಿಂಥಣಿಯಲ್ಲಿನ ಕಾಗಿನೆಲೆ ಮಹಾಂಸ್ಥಾನ ಕನಕ ಗುರುಪೀಠದಲ್ಲಿ ಜನವರಿ 12,13 ಮತ್ತು 14ರಂದು ಒಟ್ಟು ಮೂರು ದಿನಗಳ ಕಾಲ ಹಾಲುಮತ ಸಂಸ್ಕøತಿ ವೈಭವ ಕಾರ್ಯಕ್ರಮ ಜರುಗಲಿದೆ ಎಂಧು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಗುರುನಾಥ್ ಎಸ್. ಪೂಜಾರಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಸಂದರ್ಭದಲ್ಲಿ ಲಕ್ಷ ದೀಪೋತ್ಸವ, ಭರಮಲಿಂಗೇಶ್ವರ್ ದೇವಸ್ಥಾನ ಉದ್ಘಾಟನೆ, ಮಕ್ಕಳಿಗೆ ಪಟ್ಟ ಹಾಕುವ ಕಾರ್ಯಕ್ರಮಗಳು ನಡೆಯಲಿದ್ದು, ಸಿದ್ಧರಾಮಾನಂದ್ ಮಹಾಸ್ವಾಮಿಗಳ ನೇತೃತ್ವ ವಹಿಸುವರು ಎಂದರು.
ಜನವರಿ 12ರಂದು ಹಾಲುಮತ ಪ್ರಕಾರಗಳು ಮತ್ತು ಕಲಾವಿದರ ಸಮಾವೇಶವನ್ನು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಮಾಜಿ ಸಚಿವ ಎಚ್. ವಿಶ್ವನಾಥ್ ಹಾಗೂ ದಿವ್ಯ ಸಾನಿಧ್ಯವನ್ನು ನಿಕನಜನಾನಂದಪುರಿ ಮಹಾಸ್ವಾಮಿಗಳು ವಹಿಸುವರು. ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಹೆಚ್.ಎಂ. ರೇವಣ್ಣ ಮುಂತಾದವರು ಪಾಲ್ಗೊಳ್ಳುವರು. ಸಂಜೆ 8-30ಕ್ಕೆ ಸಿದ್ಧಪುರುಷ ಗೊಳ್ಯೆದ್ ಗಾದಿಲಿಂಗತಾತ ನಾಟಕ ಪ್ರದರ್ಶನವಾಗಲಿದೆ ಎಂದು ಅವರು ತಿಳಿಸಿದರು.
ಜನವರಿ 13ರಂದು ಹಾಲುಮತ ಧರ್ಮ ಮಹಿಮೆ, ಕರ್ನಾಟಕ ಪ್ರದೇಶ ಯುವ ಘಟಕ ಮಹಿಳಾ ಕುರುಬ ಸಂಘದ ಜಿಲ್ಲಾಧ್ಯಕ್ಷರ ಪದಗ್ರಹ ಸಮಾರಂಭ ಜರುಗಲಿದೆ. ದಿವ್ಯ ಸಾನಿಧ್ಯವನ್ನು ಕೆ.ಆರ್. ನಗರದ ಶಿವಾನಂದ್ ಪುರಿ, ಅಧ್ಯಕ್ಷತೆಯನ್ನು ಶಾಸಕ ಕೆ.ಎಸ್. ಈಶ್ವರಪ್ಪ ಹಾಗೂ ಗೋವಾ ಉಪ ಮುಖ್ಯಮಂತ್ರಿ ಚಂದ್ರಕಾಂತ್ ಕವಲಕ್ರ ಅವರು ವಹಿಸುವರು. ಉದ್ಘಾಟನೆಯನ್ನು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ಅವರು ನೆರವೇರಿಸುವರು. ಅತಿಥಿಗಳಾಗಿ ಸಚಿವರಾದ ಎಂಟಿಬಿ ನಾಗರಾಜ್, ಬಸವರಾಜ್ ಭೈರತಿ, ಆನಂದ್‍ಸಿಂಗ್, ದತ್ತಾತ್ರೇಯ್ ಪಾಟೀಲ್, ಶಶೀಲ್ ನಮೋಶಿ, ಬಂಡೆಪ್ಪ ಖಾಶಂಪುರ, ರಘುನಾಥ್ ಮಲ್ಕಾಪುರೆ, ಧರ್ಮಣ್ಣಾ ದೊಡ್ಡಮನಿ, ಕೆ. ಪ್ರಭಾವತಿ, ಭಗವಂತರಾಯಗೌಡ ಪಾಟೀಲ್ ಅವರು ಆಗಮಿಸುವರು. ಸಂಜೆ 4-30ಕ್ಕೆ ಟಗರುಗಳ ಕಾಳಗ ನೆರವೇರಲಿದೆ ಎಂದು ಅವರು ಹೇಳಿದರು.
ಜನವರಿ 14ರಂದು ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾನಿಧ್ಯವನ್ನು ಈಶ್ವರನಾಂದಪುರಿ ಮಹಾಸ್ವಾಮೀಜಿ, ಅಧ್ಯಕ್ಷತೆಯನ್ನು ಅಮೃತರಾವ್ ಚಿಮ್ಮಕೋಡೆ, ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ವಹಿಸುವರು ಎಂದು ಅವರು ತಿಳಿಸಿದರು.
ಹುಲಜಂತಿ ಮಾಳಿಂಗರಾಯ ಸುಕ್ಷೇತ್ರದ ಪಟ್ಟದ ಪೂಜಾರಿಗಳಾದ ಹಾಲುಮತ ಭಾಸ್ಕರ್, ಅಡಿವೆಪ್ಪ ಮಹಾರಾಜರು, ಗದಗಿನ ಕನಕರತ್ನ ಪ್ರೊ. ಸಿದ್ದಣ್ಣ ಜಕವಾಬಳ್, ರಾಯಚೂರಿನ ಕೃಷಿ ಕಾರ್ಮಿಕರ ಮಹಿಳಾ ಹೋರಾಟಗಾರ್ತಿ ಸಿದ್ಧಶ್ರೀ ಪ್ರಶಸ್ತಿ ಪುರಸ್ಕøತೆ ಶ್ರೀಮತಿ ಚಿನ್ನಮ್ಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಧ್ಯಾಹ್ನ 2 ಗಂಟೆಗೆ ಎತ್ತುಗಳ ಪ್ರದರ್ಶನ ನೆರವೇರಲಿದೆ. ಸಂಜೆ 6-30ಕ್ಕೆ ಲಕ್ಷದೀಪೋತ್ಸವ ಜರುಗಲಿದೆ ಎಂದು ಹೇಳಿದ ಅವರು, ಮೂರು ದಿನಗಳಲ್ಲಿ ಕಣ್ಣಿನ ತಪಾಸಣೆ, ಚಿಕಿತ್ಸೆ ಉಚಿತವಾಗಿ ನೀಡಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಾಯಬಣ್ಣ ಪೂಜಾರಿ, ಮಲ್ಲಿಕಾರ್ಜುನ್ ಸಿ. ಮುಡಬೂಳ್, ವರಿಗೊಂಡ್ ಕಟ್ಟಿಮನಿ, ಶಿವಲಿಂಗ್ ಸಾವಳಗಿ, ಶ್ರೀಮತಿ ನಿರ್ಮಲಾ ಎಸ್. ಬರಗಾಲಿ ಮುಂತಾದವರು ಉಪಸ್ಥಿತರಿದ್ದರು.