ತಿಂತಿಣಿ ಬ್ರಿಡ್ಜ್ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ ಹುಟ್ಟುಹಬ್ಬದ ಅಂಗವಾಗಿ ಸಸಿ ವಿತರಣೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಆ.05- ಕಲ್ಬುರ್ಗಿ  ವಿಭಾಗದ ತಿಂತಿಣಿ ಬ್ರಿಡ್ಜ್ ಶ್ರೀ ಕನಕ ಗುರು ಪೀಠದ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿಯವರ ಹಬ್ಬದ ಅಂಗವಾಗಿ ತಾಲೂಕ ಕುರುಬ ಸಂಘದ ಪದಾಧಿಕಾರಿಗಳು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು ಹಣ್ಣು ಬ್ರೆಡ್ ಹಾಗೂ  ಸಸಿಗಳನ್ನು ನೀಡುವ ಮೂಲಕ ಹುಟ್ಟುಹಬ್ಬ ಆಚರಿಸಿದರು.
 ತಾಲೂಕು ಕುರುಬ ಸಂಘದ ಅಧ್ಯಕ್ಷ ಬುಡ್ಡಿ ಬಸವರಾಜ್ ಮಾತನಾಡಿ ಸ್ವಾಮೀಜಿಗಳು  ನಮ್ಮ ಸಮಾಜದ ಮಾರ್ಗದರ್ಶಕರಾಗಿದ್ದು. ಇವರ ಆಶೀರ್ವಾದ ಮತ್ತು ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ . ಇವರು ಇನ್ನೂ ನೂರಾರು  ವರ್ಷಗಳ  ಕಾಲ   ಬದುಕಿ ನಮಗೆಲ್ಲಾ ಮುಂದಿನ ದಿನಗಳಲ್ಲಿ ಸಮಾಜ ವನ್ನು  ಒಳ್ಳೆಯ ಮಾರ್ಗ ದಲ್ಲಿ  ನಡೆಸಿಕೊಂಡು ಹೋಗಲಿ  ಎಂದರು.
 ಈ ಸಂದರ್ಭದಲ್ಲಿ ಧರ್ಮದರ್ಶಿ ಬಣಕಾರ್ ಗೋಣೆಪ್ಪ, ಮುಖಂಡರಾದ ಮುಟು ಗನಹಳ್ಳಿ  ಕೊಟ್ರೇಶ್, ಮೈಲಾರಪ್ಪ ಗಾಂಜಿ ಅಜ್ಜಪ್ಪ, ಹ್ಯಾಳ್ ಚ  ನ್ನಬಸಪ್ಪ, ಬಿ. ಕೆ. ಬಸವರಾಜ್, ಕೋಗಳಿ ಮಾಲತೇಶ್, ಕೊಟ್ರಯ್ಯ, ಒಡೆಯರ, ಆಂಜನೇಯ ವಕೀಲರು, ಕೆಚಿನಬಂಡಿ  ಹನುಮಂತಪ್ಪ, ಬೀರಪ್ಪ, ಜಂಬಣ್ಣ, ತಿಪ್ಪೆಗುಂಡಿ ಮಂಜುನಾಥ್, ಮಲ್ಲೇಶ್, ಪಂಪಾಪತಿ, ಹಳ್ಳಿ ಚಂದ್ರಪ್ಪ, ಕೆ. ಕುಮಾರ್, ಹುಡೇದ್ ಹುಲುಗಪ್ಪ, ಉಲವತ್ತಿ ಕೊಟ್ರೇಶ್, ಎಂ ಎಸ್ ಕಲ್ಗುಡಿ   ಇತರರಿದ್ದರು.

Attachments area