ತಿಂಡಿ ಕೊಡಲು ತಡ ಮಾಲೀಕನಿಗೆ ಬಿಸಿ ಎಣ್ಣೆ ಎರಚಿ ವ್ಯಕ್ತಿ ಪರಾರಿ

ರಾಯಚೂರು, ನ.೧೨- ಇಂದು ಬೆಳಿಗ್ಗೆ ಹೋಟೆಲ್ ನಲ್ಲಿ ತಿಂಡಿ ತಿನ್ನಲು ಬಂದಿದ್ದ ವ್ಯಕ್ತಿಯೊಬ್ಬ ತಿಂಡಿ ಕೊಡಲು ತಡವಾಯಿತು ಎಂದು ಕೋಪಿತಗೊಂಡು
ಹೋಟೆಲ್ ಮಾಲೀಕನ ಮುಖಕ್ಕೆ ಬಿಸಿ ಎಣ್ಣೆ ಎರಚಿ ಪರಾರಿಯಾಗಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ರಾಜೋಳ್ಳಿ ಗ್ರಾಮದಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಹೋಟೆಲ್ ಗೆ ಬಂದಿದ್ದ ಭೀಮನಾಯಕ ಎನ್ನುವ ವ್ಯಕ್ತಿ ಈ ಕೃತ್ಯ ಎಸೆಗಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.
ಇಂದು ಬೆಳ್ಳಂ ಬೆಳಿಗ್ಗೆ ಹೋಟೆಲ್ ಗೆ ತಿಂಡಿ ತಿನ್ನಲು ಬಂದಿದ್ದ ಭೀಮನಾಯಕ ಎನ್ನುವ ವ್ಯಕ್ತಿ ಹೋಟೆಲ್ ಮಾಲೀಕ ರಂಗಯ್ಯ ಶೆಟ್ಟಿ ಅವರಿಗೆ ಇಡ್ಲಿ ನೀಡುವಂತೆ ಕೇಳಲಾಗಿದೆ. ಆದರೆ ಮಾಲೀಕ ರಂಗಯ್ಯ ಶೆಟ್ಟಿ ಇಡ್ಲಿ ಖಾಲಿಯಾಗಿದೆ ಎಂದು ವಾಪಸ್ಸು ಕಳುಹಿಸಿದ್ದ, ಮರಳಿ ಮಾಲೀಕ ರಂಗಯ್ಯ ಶೆಟ್ಟಿ ಹೋಟೆಲ್ ಬಂದು ಮಂಡಕ್ಕಿ ಒಗ್ಗರಣೆ ನೀಡುವಂತೆ ಮಾಲೀಕನ ಬಳಿ ಕೇಳಲಾಗಿದೆ. ಆದರೆ ತಿಂಡಿ ನೀಡಲು ಮಾಲೀಕ ಸ್ವಲ್ಪ ತಡ ಮಾಡಿದ ಪರಿಣಾಮ ಕೋಪಗೊಂಡ ಭೀಮನಾಯಕ ಎಂಬ ವ್ಯಕ್ತಿ ಉಪ್ಪಿಟ್ಟು ಮಾಡಲು ತೆರೆದಿಟ್ಟ ಬಿಸಿ ಎಣ್ಣೆ ಮಾಲೀಕನ ಮುಖಕ್ಕೆ ಎರಚಿ ವಿಕೃತಿ ಮರೆದಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.
ಮಾನ್ವಿ ಸರ್ಕಾರಿ ಆಸ್ಪತ್ರೆಯಲ್ಲಿ ರಂಗಯ್ಯ ಶೆಟ್ಟಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.