ತಿಂಗಳಾಂತ್ಯಕ್ಕೆ ೨ನೇ ಹಂತದ ರಾಮಮಂದಿರ ಪೂರ್ಣ

ಲಖನೌ,ಜ.೧೫- ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಬಹು ನಿರೀಕ್ಷಿತ ರಾಮಮಂದಿರ ನಿರ್ಮಾಣದ ೨ನೇ ಹಂತದ ಕಾಮಗಾರಿ ಈ ತಿಂಗಳಾಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ. ದಿನದ ೨೪ ತಾಸುಗಳ ಕಾಲ ದೇವಾಲಯ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಅಡಿಪಾಯದ ಒಂದು ಭಾಗ ಅಂತ್ಯಗೊಂಡಿದೆ. ೨ನೇ ಪ್ರತಿಷ್ಠಾನ ಪ್ರಗತಿಯಲ್ಲಿದ್ದು, ಜನವರಿ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದರು.
ದೇವಾಲಯದ ನಿರ್ಮಾಣ ಕಾರ್ಯದ ಕಾಮಗಾರಿಯನ್ನು ತ್ರಿಡಿ ಅನಿಮೇಷನ್ ಚಲನಚಿತ್ರವನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇದನ್ನು ಯು ಟೂಬ್ ಮೂಲಕ ತ್ರಿಡಿ ಚಲನಚಿತ್ರದ ಸಹಾಯದಿಂದ ರಾಮಮಂದಿರ ನಿರ್ಮಾಣ ಕಾರ್ಯವನ್ನು ತೋರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.
ದೇವಾಲಯದ ನಿರ್ಮಾಣದಲ್ಲಿ ೫ ಅಡಿ ಉದ್ದ, ೩ ಅಡಿ ಅಗಲ ಮತ್ತು ೨.೫ ಅಡಿ ಎತ್ತರದ ಸುಮಾರು ೧೭ ಸಾವಿರ ಕಲ್ಲುಗಳನ್ನು ಬಳಸಲಾಗುತ್ತಿದೆ ಎಂದು ತಿಳಿಸಿದರು.
೫೭,೪೦೦ ಚದರ ಅಡಿಯಲ್ಲಿ ಮುಖ್ಯ ದೇವಾಲಯವನ್ನು ೨.೭ ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ದೇವಾಲಯದ ಉದ್ದ ೩೬೦ ಅಡಿ ಮತ್ತು ಅಗಲ ೨೩೫ ಅಗಲವಿದೆ. ೩ ಅಂತಸ್ತಿನಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮಮಂದಿರ ಪ್ರತಿಯೊಂದು ಮಹಡಿ ೨೦ ಅಡಿ ಎತ್ತರವಿದೆ.