ತಿಂಗಳಾಂತ್ಯಕ್ಕೆ ಸಿಲ ನೋಡಿಗಳಿಲ್

ನಟಿ ಶರ್ಮಿಳಾ ಮಾಂಡ್ರೆ ಕ್ರಿಯೇಟಿವ್ ಪ್ರಡ್ಯೂಸರ್ ಆಗಿರುವ  ತಮಿಳು ಚಿತ್ರ “ಸಿಲ ನೋಡಿಗಳಿಲ್” ತಿಂಗಳಾಂತ್ಯಕ್ಕೆ ತೆರೆಗೆ ಬರಲಿದೆ.

ಈ ವೇಳೆ ಮಾತಿಗಿಳಿದ ವಿನಯ್ ಭಾರದ್ವಾಜ್, “ಮುಂದಿನ ನಿಲ್ದಾಣ” ತೆರೆಗೆ ಬಂದ ನಂತರ “ಲೂಸಿಯಾ” ಪವನ್ ಕುಮಾರ್ ಮೂಲಕ  ಶರ್ಮಿಳಾ ಮಾಂಡ್ರೆ ಪರಿಚಯವಾಯಿತು. “ಪುನ್ನಗೈ” ಪೂ ಗೀತಾ ನಿರ್ಮಾಣ ಮಾಡಿ ನಟಿಸಿದ್ದಾರೆ. ಮೂರು ಪ್ರಮುಖ ಪಾತ್ರಗಳ ಸುತ್ತ ಕಥೆ ಸಾಗುತ್ತದೆ. ರಿಚರ್ಡ್ ರಿಷಿ, ಪುನ್ನಗೈ ಪೂ ಗೀತಾ ಹಾಗೂ ಯಶಿಕಾ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಎಂದರು.

ಲಂಡನ್‍ನಲ್ಲಿ ವಾಸವಿರುವ ಗಂಡ ಹೆಂಡತಿ ನಡುವೆ ಮತ್ತೊಬ್ಬ ಯುವತಿಯ ಆಗಮನ. ಅಲ್ಲಿ ಕೊಲೆ ಕೂಡ ಆಗುತ್ತದೆ. ಈ ಕೊಲೆ ಮಾಡಿದ್ದು ಯಾರು ಎನ್ನುವ ಕುತೂಹಲಕಾರಿ ಅಂಶಗಳು ಚಿತ್ರದಲ್ಲಿದೆ. “ಸಿಲ ನೋಡಿಗಳಿಲ್” ಎಂದರೆ “ಕೆಲವೇ ಕ್ಷಣಗಳಲಿ” ಎನ್ನವ ಅರ್ಥ ಎಂದರು.

ನಟಿ ಶರ್ಮಿಳಾ ಮಾಂಡ್ರೆ ಮಾತನಾಡಿ ಚಿತ್ರದಲ್ಲಿ ನಟಿಸಿಲ್ಲ. ನಿರ್ಮಾಪಕರು ಕೊಟ್ಟ ಜವಾಬ್ದಾರಿ ನಿಭಾಯಿಸಿದ್ದೇನೆ. ಇದೇ 24 ರಂದು ತೆರೆಗೆ ಬರಲಿದೆ . ಚಿತ್ರವನ್ನು ಕನ್ನಡದಲ್ಲಿ ರಿಮೇಕ್ ಮಾಡುವ ಯೋಚನೆ ಇದೆ .ಸದ್ಯಕ್ಕೆ ತಮಿಳಿನಲ್ಲಿ ಚಿತ್ರ ಬಿಡುಗಡೆ ಮಾಡಿದ ನಂತರ ನಿರ್ದಾರ ಕೈಗೊಳ್ಳುವುದಾಗಿ ಮಾಹಿತಿ ಹಂಚಿಕೊಂಡರು