ತಿಂಗಳಾಂತ್ಯಕ್ಕೆ ‘ಅರಿಷಡ್ವರ್ಗ’

ಪ್ರೀತಿ, ಕಾಮ, ಕೋಪ, ದುರಾಸೆ, ಅಸೂಯೆ, ತಪ್ಪುಗ್ರಹಿಕೆ ಮತ್ತು ವೈಯಕ್ತಿಕ ನ್ಯೂನತೆಗಳನ್ನು ಮುಂದಿಟ್ಟುಕೊಂಡ ನಿರ್ಮಿಸಿರುವ ಚಿತ್ರ
“ಅರಿಷಡ್ವರ್ಗ”.
ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವನ್ನು ರಂಗಕರ್ಮಿ ಅರವಿಂದ್ ಕಾಮತ್‍ ಆಕ್ಷನ್ ಕಟ್ ಹೇಳಿದ್ದು ನಟ ಸುದೀಪ್ ವರ್ಚುವಲ್ ಮೂಲಕ ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದರು.
ನಿರ್ದೇಶಕ ಹಾಗೂ ನಿರ್ಮಾಪಕರಲ್ಲಿ ಒಬ್ಬರಾದ ಅರವಿಂದ್ ಕಾಮತ್, 2020ರ ಆರಂಭದಲ್ಲೇ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿತ್ತು.ಕೊರೋನಾ ಅಡ್ಡಿಯಾಯಿತು. ಈ ತಿಂಗಳಾಂತ್ಯಕ್ಕೆ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ ಎಂದರು
ಚಿತ್ರದಲ್ಲಿ ಸಂಯುಕ್ತ ಹೊರನಾಡು, ಅಂಜು ಹಾಗೂ ಅವಿನಾಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಯಾವುದೇ ಲೀಡ್‍ರೋಲ್ ಅಂತ ಇಲ್ಲ, ಆರೇಳು ಮುಖ್ಯ ಪಾತ್ರಗಳಿವೆ ಅಷ್ಟೇ. ಆ ಎಲ್ಲ ಪಾತ್ರಗಳೂ ಕಥೆಯ ಸುತ್ತ ಸುತ್ತುತ್ತವೆ ಎಂದು ಹೇಳಿದರು.
ಹಿರಿಯ ರಂಗಕರ್ಮಿ, ನಟ ಪ್ರಕಾಶ್ ಬೆಳವಾಡಿ ವಿಶೇಷ ಜಾನರ್ ಚಿತ್ರ,ಬಹಳಷ್ಟು ಬೋಲ್ಡ್ ಪಾತ್ರಗಳನ್ನು ನಿರ್ದೇಶಕ ಅರವಿಂದ್ ಸೃಷ್ಟಿಸಿದ್ದಾರೆ, ಸಿಂಕ್ ಸೌಂಡ್‍ನಲ್ಲಿ ಮಾಡಿರುವ ಸಿನಿಮಾವಿದು. ಅವಿನಾಶ್ ಉತ್ತಮ ಕಲಾವಿದ, ಆದರೆ ಮುಂಗೋಪಿ, ಹೊಸ ಹುಡುಗರ ಜೊತೆ ಹೆಣಗಿದ್ದಾರೆ. ಸಂಯುಕ್ತ, ಅಂಜು ಕೂಡ ತುಂಬಾ ಚೆನ್ನಾಗಿ ಆ್ಯಕ್ಟ್ ಮಾಡಿದ್ದಾರೆ ಎಂದರು.
ಅವಿನಾಶ್ ಮಾತನಾಡಿ, ಹಲವು ಭಾಷೆಗಳಲ್ಲಿ ಅಭಿನಯಿಸಿದ್ದರೂ, ಈ ರೀತಿ ಪಾತ್ರ ಮಾಡಿರಲಿಲ್ಲ. ಪ್ರತಿಯೊಬ್ಬರೂ ತುಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಈ ಥರದ ಸಿನಿಮಾಗಳು ಬಂದರೆ ಕಲಾವಿದರಿಗೂ ಹೊಸ ಹುರುಪು ಬರುತ್ತದೆ ಎಂದು ಹೇಳಿದರು.
ನಾಯಕಿ ಸಂಯುಕ್ತ ಹೊರನಾಡು, ಇಂಥ ಸಬ್ಜೆಕ್ಟ್ ಕೈಗೆತ್ತಿಕೊಳ್ಳಲು ತುಂಬಾ ಧೈರ್ಯ ಇರಬೇಕು ಎಂದರು.
ಛಾಯಾಗ್ರಾಹಕ ಬಾಲಾಜಿ ಮನೋಹರ್, ನಿರ್ದೇಶಕರ ಜೊತೆ ಕೂತು, ಮೊದಲೇ ಚರ್ಚೆ ಮಾಡಿದ್ದರಿಂದ ಎಲ್ಲವೂ ಸುಲಭವಾಯಿತು ಎಂದರು.
ಉದಿತ್ ಸಂಗೀತವಿದೆ.
2019ರಲ್ಲಿ ಲಂಡನ್ ವಲ್ಡ್ ಪ್ರೀಮಿಯರ್ ಮತ್ತು ಸಿಂಗಾಪುರದಲ್ಲಿ ನಡೆದ ಸೌತ್‍ಏಷ್ಯನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿರುವ ಅರಿಷಡ್ವರ್ಗ ಮೆಚ್ಚುಗೆ ಪಡೆದುಕೊಂಡಿದೆ.
ಕನಸು ಟಾಕೀಸ್‍ನ ಆನಂದ್ ಹಾಗೂ ಸ್ನೇಹಿತರ ಜೊತೆ ಅರವಿಂದ್ ಸೇರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.