ತಾ.ಪಂ. ಕಚೇರಿಗೆ ಸ್ಯಾನಿಟೈಜರ್ ಸಿಂಪರಣೆ

ಲಿಂಗಸುಗೂರು.ಜೂ.೦೪- ಲಿಂಗಸುಗೂರು ತಾಲೂಕು ಪಂಚಾಯತ್ ಕಚೇರಿಯ ಸಿಬ್ಬಂದಿಗೆ ಕೋವಿಡ್ ಬಂದ ಕಾರಣ ನಿನ್ನೆ ಪುರಸಭೆ ಸಿಬ್ಬಂದಿ ತಾಲೂಕು ಪಂಚಾಯತ್ ಕಚೇರಿಗೆ ರಾಸಾಯನಿಕ ಸ್ಯಾನಿಟೈಜರ್ ಸಿಂಪರಣೆ ಮಾಡಿ ಕೋವಿಡ್ ಮುಕ್ತ ಕಚೇರಿ ಮಾಡುವ ಮೂಲಕ ಪುರಸಭೆ ಸಿಬ್ಬಂದಿಗಳು ಕಾರ್ಯಾಚರಣೆ ಮಾಡಿದರು ತಾಲುಕಿನಲ್ಲಿ ತಿವ್ರವಾಗಿ ಕೋವಿಡ ಹರಡುತ್ತಿದ್ದು.
ಕಚೇರಿಗೆ ದಿನ ನಿತ್ಯ ಹೆಚ್ಚು ಸಾರ್ವಜನಿಕರ ಹೊಡನಾಟ ಇರುವುದೇ ಪ್ರಮುಖ ಕಾರಣವಾಗಿದೆ ಇದರಿಂದಾಗಿ ತಾಲೂಕು ಪಂಚಾಯತ್ ಸಿಬ್ಬಂದಿಗಳಿಗೆ ಕೋವಿಡ್ ಮಾಹಮಾರಿ ರೋಗಗಳು ತಗುಲಿ ಕಚೇರಿಯ ಸಿಬ್ಬಂದಿಗಳು ಬಯಬಿತರಾಗಿದ್ಧಾರೆ ಕೂಡಲೇ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸಿಬ್ಬಂದಿಗಳಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡುವ ಮೂಲಕ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.